ಬೈಕ್‌ ಸವಾರನನ್ನು ಬೈಕ್‌ ಸಮೇತ ಎತ್ತೆಸೆದ ಒಂಟಿಸಲಗ | ವಿಡಿಯೋ ವೈರಲ್‌

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 6, 2025

ತಮಿಳುನಾಡು | ಬೈಕ್‌ ಸವಾರನನ್ನು ಒಂಟಿ ಸಲಗವೊಂದು ಬೈಕ್‌ಸಮೇತ ಎತ್ತಿ ಎಸೆದಿದ್ದು, ಇದರ ಪರಿಣಾಮ ಬೈಕ್‌ ಸವಾರ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಈ ಘಟನೆಯ ದೃಶ್ಯವನ್ನು ಸ್ಥಳೀಯರು ಕ್ಯಾಮರದಲ್ಲಿ ಸೆರೆ ಹಿಡಿದಿದ್ದು, ಎಲ್ಲೆಡೆ ವೈರಲ್‌ ಆಗಿದೆ.



77 ವರ್ಷದ  ಮೈಕಲ್‌ ಎಂಬ ಜರ್ಮನ್‌ ಪ್ರವಾಸಿಗನೊಬ್ಬ ತಮಿಳುನಾಡಿನ  ಟೈಗರ್‌ ವ್ಯಾಲಿ ರಸ್ತೆಯಲ್ಲಿ ಬೈಕ್‌ನಲ್ಲಿ ತೆರಳುತ್ತಿರುತ್ತಾನೆ. ಆವೇಳೆ ಆತನಿಗೆ ಒಂದು ಒಂಟಿ ಸಲಗ ಎದುರಾಗುತ್ತದೆ. ಆಗ  ಹಿಂದಿರುವ ವಾಹನ ಚಾಲಕರು ಮೈಕಲ್‌ಗೆ ಮುಂದೆ ಚಲಿಸಬೇಡ ಎಂದು ಸೂಚಿಸುತ್ತಾರೆ. ಆದರೂ ಸಹ ಯಾರ ಆತನ್ನೂ ಕೇಳದ ಮೈಕಲ್ ಒಂಟಿ ಸಲಗದ ಬಳಿ ಹೋಗುತ್ತಾನೆ. ಆಗ ಒಂಟಿ ಸಲಗ ಆತನನ್ನು ಬೈಕ್‌ ಸಮೇತ ಎತ್ತಿ ಬಿಸಾಡುತ್ತದೆ. ಆನೆ ಎಸೆದ ರಭಸಕ್ಕೆ ಮೈಕಲ್ ಹಳ್ಳಕ್ಕೆ ಹೋಗಿ ಬಿದ್ದು ಗಾಯಗೊಳ್ಳುತ್ತಾನೆ. ಅಲ್ಲಿರುವವರು ತಕ್ಷಣವೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿ ಆಗದೆ ಮೈಕಲ್ ಸಾವನ್ನಪ್ಪುತ್ತಾನೆ.

SUMMARY | In a tragic incident, a bike rider was killed in Tamil Nadu after a lone tusker threw him along with his bike.

KEYWORDS |  Tamil Nadu, elephant, tragic incident, bike,

Share This Article