SHIVAMOGGA | MALENADUTODAY NEWS | ಮಲೆನಾಡು ಟುಡೆ Mar 3, 2025
ಶಿವರಾತ್ರಿ ಕಳೆಯುತ್ತಲೇ ಬಿಸಿಲು ಝಳ ಝಳ ಅನ್ನುವುದಕ್ಕೆ ಆರಂಭಿಸಿದೆ. ಎಂಥಾ ಮಳೆ ಮಾರಾಯ ಅನ್ನುತ್ತಿದ್ದ ಸ್ಥಳದಲ್ಲಿಯೇ ಇದೆಂಥಾ ಬಿಸಿಲು ಯಬ್ಬ್ಯಾಎನ್ನುವಂತಹ ಉದ್ಘಾರ ಕೇಳಿಬರುತ್ತಿದೆ. ಮೇಲಾಗಿ ಥಂಡಿ ಗಾಳಿಗೆ ಮೈವೊಡ್ಡಿದ್ದ ದೇಹಗಳಿಗೆ ಇದೀಗ ಬಿಸಿಲ ತಾಪವನ್ನು ಒಂದೇ ಏಟಿಗೆ ಸಹಿಸಲಾಗುತ್ತಿಲ್ಲ. ಬದಲಾದ ವಾತಾವರಣದ ನಡುವೆ ಮನುಷ್ಯ ಕಾಯಿಲೆ ಬೀಳುತ್ತಿದ್ದಾನೆ.
ಬೇಸಿಗೆಯಲ್ಲಿ ಯಾರಿಗೆಲ್ಲಾ ತೊಂದರೆ
ಸಾಮಾನ್ಯವಾಗಿ ಬೇಸಿಗೆ ವಾತಾವರಣದಲ್ಲಿ ಬಹುತೇಕ ಎಲ್ಲಾ ಜೀವ ಜಂತುಗಳಿಗೆ ಕಷ್ಟವಾಗುತ್ತದೆ. ಅದರಲ್ಲಿಯೂ ಶಿಶುಗಳಿಗೆ, ವಯಸ್ಸಾದವರಿಗೆ, ಮಕ್ಕಳಿಗೆ, ಗರ್ಭಿಣಿಯರಿಗೆ, ಬೀದಿ ಬದಿಯಲ್ಲಿ ವ್ಯಾಪಾರಿಗಳಿಗೆ, ಬಿಸಿಲಲ್ಲಿ ಕೂಲಿ ಕೆಲಸ ಮಾಡುವ ಬಡ ಮತ್ತು ಸಾಮಾನ್ಯ ವರ್ಗದವರಿಗೆ, ವಿಶೇಷ ಚೇತನ ವ್ಯಕ್ತಿಗಳಿಗೆ, ಧೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಇನ್ನಿಲ್ಲದ ಸಮಸ್ಯೆ ಎದುರಾಗುತ್ತದೆ.
ಬಿಸಿಲಿನಲ್ಲಿ ಹೆಚ್ಚು ಹೊತ್ತು ಇರುವುದರಿಂದ ಹೀಟ್ ಸ್ಟ್ಯಾಂಪ್ ಅಥವಾ ಜ್ವರ ಹಾಗೂ ಮೈಯಲ್ಲಿ ಊತ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
ಅಥವಾ ಹೀಟ್ ಎಗ್ಲಾಷನ್ ನಿಂದಾಗಿ ವಿಪರೀತ ಬೆವರುವಿಕೆ, ತಲೆ ನೋವು, ತಲೆ ಸುತ್ತು, ವಾಕರಿಕೆ, ವಾಂತಿ, ಸ್ನಾಯು ಸೆಳತೆ ಉಂಟಾಗುವ ಸಾಧ್ಯತೆಗಳಿರುತ್ತದೆ.
ಅಥವಾ ದೇಹದ ಉಷ್ಣಾಂಶ ಅತಿಯಾಗಿ ಹೆಚ್ಚಾಗಿ ಮನಸ್ಸಿನಲ್ಲಿ ಗೊಂದಲ, ಮೂರ್ಚೆ ರೋಗ ಹಾಗು ವ್ಯಕ್ತಿಯು ಕೋಮಾ ಸ್ಥಿತಿಗೆ ಹೋಗಬಹುದು.
ಬಿಸಿಲಿನ ಬೇಗೆ ತಡೆಯಲು ಅನುಸರಿಸಬೇಕಾದ ಕ್ರಮ
ಸಾಧ್ಯವಾದಷ್ಟು ತಂಪಾದ ಸ್ಥಳಗಳ ಇರಿ
ಬಿಸಿಲಿನ ಅವಧಿಯಲ್ಲಿ ಕೊಡೆಗಳನ್ನು ಬಳಸಿ
ಸಾಧ್ಯವಾದಷ್ಟು ಹತ್ತಿಯ ಉಡುಪುಗಳನ್ನು, ಹತ್ತಿಯ ಟೋಪಿಗಳನ್ನು ಧರಿಸಿ
ಬಿಸಿಲಿನ ಅವಧಿಯಲ್ಲಿ ವಿಶ್ರಾಂತಿಯನ್ನು ಪಡೆಯಿರಿ,
ಸಾಕಷ್ಟು ನೀರು ಹಾಗೂ ಮಜ್ಜಿಗೆಯನ್ನು ಕುಡಿಯಿರಿ ,
ಉಳಿದುಕೊಳ್ಳುವ ಕೋಣೆಯನ್ನು ತಂಪಾಗಿರಿಸಿಕೊಳ್ಳುವ ಪ್ರಯತ್ನ ಮಾಡಿ
ಬಿಸಿಗಾಳಿಗೆ ತುತ್ತಾದ ವ್ಯಕ್ತಿಯನ್ನು ಕೂಡಲೇ ತಂಪಾದ ಸ್ಥಳಕ್ಕೆ ರವಾನಿಸಿ
ಬಿಸಿಗಾಳಿ ತುತ್ತಾದ ವ್ಯಕ್ತಿಗೆ ಕೂಡಲೇ ಚಿಕಿತ್ಸೆ ಒದಗಿಸಿ
ಬಿಸಿಗಾಳಿ ತುತ್ತಾದವರಿಗೆ ಸಾಕಷ್ಟು ಕುಡಿಯುವ ನೀರು, ಮಜ್ಜಿಗೆ ದ್ರವಹಾರ ಒದಗಿಸಿ
ಬಿಸಿಲಿನ ಬೇಗೆ ತಡೆಯಲು ಅನುಸರಿಸಬಾರದ ಕ್ರಮ
ನೇರ ಬಿಸಿಲು/ಬಿಸಿಗಾಳಿಗೆ ಮೈವೊಡ್ಡಿಕೊಳ್ಳುವುದು
ಬಿಸಿಲಿನ ಅವಧಿಯಲ್ಲಿ ಕೊಡೆ ಇಲ್ಲದೆ ಹೊರಗೆ ಹೋಗುವುದು
ಘಾಡ ಬಣ್ಣದ ಬಟ್ಟೆಗಳನ್ನು ತೊಡುವುದು
ಬಿಸಿಲ ಝಳಕ್ಕೆ ನೇರವಾಗಿ ತಲೆಯೊಡ್ಡುವುದು
ಬಿಸಿಲು ಇರುವ ಅವಧಿಯಲ್ಲಿ ಶ್ರಮದಾಯಕ ಕೆಲಸ ಮಾಡುವುದು
ಬಿಸಿಲ ಸಮಯದಲ್ಲಿ ಮಧ್ಯ , ಚಹಾ ಇತ್ಯಾದಿಗಳನ್ನು ಕುಡಿಯುವುದು