SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 27, 2025
ಬಿಗ್ ಬಾಸ್ ಸೀಸನ್ 11 ನಿನ್ನೆ ಮುಕ್ತಾಯಗೊಂಡಿದ್ದು ಬಿಗ್‌ಬಾಸ್ ಸೀಜನ್ ಹನ್ನೊಂದರ ವಿನ್ನರ್ ಆಗಿ ಹನುಮಂತ ಲಮಾಣಿ ಹೊರಹೊಮ್ಮಿದ್ದಾರೆ.
ಹನುಮಂತ ವರ್ಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ 21ನೇ ದಿನ ಎಂಟ್ರಿಕೊಟ್ಟಿದ್ದರು. ನಂತರ ಭರ್ಜರಿ ಮನೋರಂಜನೆಯೊಂದಿಗೆ ಉತ್ತಮ ಟಾಸ್ಕ್‌ಗಳನ್ನು ಆಡುತ್ತ ತಮ್ಮ ಮುಗ್ದತೆಯಿಂದ ಕರ್ನಾಟಕದ ಜನರ ಮನೆಮಾತಾಗಿದ್ದರು.
ಅಷ್ಟೇ ಅಲ್ಲದೆ ಎಷ್ಟೋ ಜನ ಅಭಿಮಾನಿಗಳು ವೋಟಿಂಗ್ ಪ್ರಕಾರ ಬಿಗ್‌ಬಾಸ್ ವಿನ್ನರ್‌ನ್ನು ಘೋಷಿಸುವುದಾದರೆ ಆ ಕಿರೀಟವನ್ನು ಪಡೆಯಲು ಹನುಮಂತು ಮಾತ್ರ ಅರ್ಹ ವ್ಯಕ್ತಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಅಲ್ಪ ಸಮಯದಲ್ಲಿ ಹನುಮಂತು ಆ ಮಟ್ಟಕ್ಕೆ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು.
ಇದೀಗ ಘಟಾನುಘಟಿಗಳ ನಡುವೆ ರೆಕ್ಕೆ ಹೊಂದಿರುವ ಬಿಗ್ ಬಾಸ್ ಕಿರೀಟವನ್ನು ಹಾಗು 50 ಲಕ್ಷ ರೂಪಾಯಿಗಳನ್ನು ಹನುಮಂತ ತನ್ನದಾಗಿಸಿಕೊಂಡಿದ್ದಾರೆ. ಇದರ ನಡುವೆ ಈ ಸೀಸನ್ ನಲ್ಲಿ ಹನುಮಂತ ಅನೇಕ ದಾಖಲೆಗಳನ್ನು ನಿರ್ಮಿಸಿದ್ದಾರೆ.
ಅದೇನೆಂದರೆ ಕಳೆದ 10 ಸೀಜನ್ ಗಳಲ್ಲಿ ವೈಲ್ಡ್ ಕಾರ್ಡ್ಸ್ ಸ್ಪರ್ಧಿಯಾಗಿ ಬಂದು ಯಾರು ಬಿಗ್‌ಬಾಸ್ ಕಪ್‌ನ್ನು ಗೆದ್ದಿರಲಿಲ್ಲ.
ಆದರೆ ಹನುಮಂತ ಬರೋಬ್ಬರಿ 5,23,89,318 (ಇತಿಹಾಸದಲ್ಲಿ ಅತಿಹೆಚ್ಚು ಓಟ್) ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ.
ಇತ್ತ ಹನುಮಂತನಿಗೆ ಕಠಿಣ ಸ್ಪರ್ಧೆ ನೀಡಿದ್ದ ತ್ರಿವಿಕ್ರಮ್ ರನ್ನರ್ ಆಫ್ ಆಗಿ ಹೊರಹೊಮ್ಮಿದ್ದು, ಅವರು 15 ಲಕ್ಷ ಬಹುಮಾನವನ್ನು ಪಡೆದಿದ್ದಾರೆ.
ಹಾಗೆಯೇ ಮತ್ತೊಬ್ಬ ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿಯಾದ ರಜತ್ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಹನುಮಂತು ವಿನ್ನರ್ ಆಗಲು ಪ್ರಮುಖ ಕಾರಣಗಳೇನು
ಹನುಮಂತು ಮನೆಗೆ ಕಾಲಿಟ್ಟ ದಿನದಿಂದ ಇಲ್ಲಿಯವರೆಗೆ ಎಲ್ಲಿಯೂ ತನ್ನತನವನ್ನು ಬಿಟ್ಟುಕೊಡಲಿಲ್ಲ. ಹಾಗೆಯೇ ಯಾವುದೇ ಟಾಸ್ಕ್‌ಗಳಲ್ಲಾಗಲಿ ಮನೆಯಲ್ಲಾಗಲಿ ಯಾವುದೇ ಪಕ್ಷಪಾತ ಮಾಡಿರಲಿಲ್ಲ.
ಹನುಮಂತು ಉತ್ತಮ ಮನರಂಜನೆಯನ್ನು ನೀಡುವುದರ ಜೊತೆಗೆ ಹೆಚ್ಚಾಗಿ ನೇರ ನುಡಿಗೆ ಹೆಸರಾಗಿದ್ದರು. ಇದೆಲ್ಲದರ ನಡುವೆ ಬಿಗ್ ಬಾಸ್ ಮಾಜಿ ಸ್ಪರ್ಧಿಗಳು ಕೆಲವು ಸೆಲೆಬ್ರಿಟಿಗಳು ಸೇರಿದಂತೆ ರಾಜ್ಯಾದ್ಯಂತ ಕೋಟ್ಯಾಂತರ ಜನರು ಈತನನ್ನು ಬೆಂಬಲಿಸಿದ್ದರು. ಇವೆಲ್ಲಾ ಕಾರಣಗಳಿಂದ ಹನುಮಂತ ಬಿಗ್‌ಬಾಸ್ 11 ರ ವಿನ್ನರ್ ಆಗಲು ಕಾರಣವಾಯಿತು.
SUMMARY | Bigg Boss Season 11 concluded yesterday and Hanumantha Lamani emerged as the winner of Bigg Boss Season 11.
KEYWORDS | Bigg Boss Season 11, winner, Hanumantha,