SHIVAMOGGA | MALENADUTODAY NEWS | ಮಲೆನಾಡು ಟುಡೆ Oct 24, 2024
ಭದ್ರಾವತಿ | ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ನ್ಯೂಟೌನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಶಿವಮೊಗ್ಗ ಭದ್ರಾವತಿ ಬಸ್ನಿಂದ ಆಯ ತಪ್ಪಿ ಬಿದ್ದು ಒಬ್ಬರು ಸಾವನ್ನಪ್ಪಿದ್ದಾರೆ.
ಮೇನ್ ರಸ್ತೆಯಲ್ಲಿ ಈ ಘಟನೆ ಕಳೆದ 22.10.2024ರಂದು ಸಂಭವಿಸಿದೆ. ಇದೀಗ ಈ ಬಗ್ಗೆ ವರದಿಯಾಗಿದೆ. ಘಟನೆ ನಡೆದ ಬೆನ್ನಲ್ಲೆ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಇನ್ನೂ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ರವಾನೆ ಮಾಡಿ ಪ್ರಕರಣವನ್ನು ಸಹ ದಾಖಲಿಸಿಕೊಂಡಿದ್ದಾರೆ. ಸದ್ಯ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

SUMMARY | Shivamogga One person died after falling off a bus in Shivamogga Bhadravathi taluk under New Town police station limits in Bhadravathi taluk of Shivamogga district
KEYWORDS | Shivamogga , One person died ,falling off a bus, Shivamogga Bhadravathi road, New Town police station limits in Bhadravathi,