SHIVAMOGGA | MALENADUTODAY NEWS | ಮಲೆನಾಡು ಟುಡೆ Dec 28, 2024
ಅಂಗಡಿಗೆ ಬಂದ ಗ್ರಾಹಕಿಯೊಬ್ಬರು ಅಂಗಡಿಯಲ್ಲಿದ್ದ ಬಟ್ಟೆಯೊಂದನ್ನು ಕದ್ದೊಯ್ದ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶಿವಮೊಗ್ಗದ ದುರ್ಗಿಗುಡಿಯಲ್ಲಿರುವ ಬಟ್ಟೆಯ ಅಂಗಡಿಯೊಂದರಲ್ಲಿ ನಡೆದ ಘಟನೆ ಇದಾಗಿದೆ. ನೀಟಾಗಿ ಡ್ರೆಸ್ ಮಾಡಿಕೊಂಡಿದ್ದ ಮಹಿಳೆ ಕನ್ನಡಕ ಹಾಗೂ ಮೊಬೈಲ್ ಮತ್ತು ಬ್ಯಾಗ್‌ವೊಂದಿಗೆ ಅಂಗಡಿಗೆ ಬಂದಿದ್ದಾರೆ. ಆ ಬಳಿಕ ಹಲವು ಡ್ರೆಸ್‌ಗಳನ್ನು ಪರಿಶೀಲಿಸಿದ್ದಾರೆ. ಸಾಮಾನ್ಯವಾಗಿ ಅಂಗಡಿಯವರಿಗೆ ಗ್ರಾಹಕರ ಜೊತೆಗೆ ಕಳೆಯುವ ಒಂದರೆಡು ನಿಮಿಷಗಳಲ್ಲೆ ಅವರು ಬಟ್ಟೆಗಳನ್ನು ಖರೀದಿಸುತ್ತಾರಾ ಇಲ್ಲವೆ ಗೊತ್ತಾಗಿ ಬಿಡುತ್ತದೆ.
ಇಲ್ಲಿ ಗೃಹಿಣಿಯು ಡ್ರೆಸ್ ಖರೀದಿಸುವ ಮಾತನಾಡುತ್ತಾ ಅಂಗಡಿಯವರಿಂದ ಸಾಕಷ್ಟು ಡ್ರೆಸ್‌ಗಳನ್ನು ಟೇಬಲ್ ಮೇಲೆ ಹಾಕಿಸಿಕೊಂಡಿದ್ದಾರೆ. ಆ ಬಳಿಕ ಅಂಗಡಿಯಾತ ರಾಕ್‌ನಲ್ಲಿ ಬಟ್ಟೆ ಜೋಡಿಸುತ್ತಿದ್ದ ವೇಳೆ ಒಂದು ಡ್ರೆಸ್‌ನ್ನ ತನ್ನ ಬ್ಯಾಗ್‌ನೊಳಗೆ ಹಾಕಿಕೊಂಡಿದ್ದಾಳೆ. ಅದೇ ಡ್ರೆಸ್‌ನ್ನ ಪದೆಪದೇ ನೋಡುತ್ತಿದ್ದಾಕೆ. ಕೊನೆಗೆ ಅದನ್ನು ತನ್ನ ಬ್ಯಾಗ್‌ನೊಳಗೆ ಹಾಕಿಕೊಂಡು ಅಲ್ಲಿಂದ ತೆರಳಿದ್ದಾರೆ.
ಮಹಿಳೆಯು ಕಳ್ಳಿಯಂತೆ ಕಾಣುದೆ ತಮ್ಮ ಕುಟುಂಬಸ್ಥರಿಗೆ ಡ್ರೆಸ್ ಖರೀದಿಸಲು ಬರುವ ಗೃಹಿಣಿಯಂತೆ ಕಾಣುತ್ತಿದ್ದಾರೆ. ಆಕೆ ಡ್ರೆಸ್ ಕದ್ದ ವಿಚಾರ, ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಡ್ರೆಸ್ ಕದ್ದವರು ಯಾರು? ಆಕೆ ಡ್ರೆಸ್ ಕದಿಯಲು ಕಾರಣವಾಗಿದ್ದೇನು ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ. ಸದ್ಯಕ್ಕ ಸಿಸಿ ಕ್ಯಾಮರಾ ನಡೆದಿದ್ದನ್ನ ತೆರೆದಿಟ್ಟಿದೆ.
SUMMARY | Housewife steals dress from clothing store
KEY WORDS | Housewife steals dress from clothing store