SHIVAMOGGA | MALENADUTODAY NEWS | ಮಲೆನಾಡು ಟುಡೆ Nov 1, 2024
ನಿನ್ನೆ ದಿನ ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ಅಪ್ರಾಪ್ತ ಬಾಲಕಿಯನ್ನ ರಕ್ಷಣೆ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಈ ಸಂಬಂಧ ಕಾರ್ಯಾಚರಣೆ ನಡೆಸಿ ಅಪ್ರಾಪ್ತೆಯನ್ನ ರಕ್ಷಣೆ ಮಾಡಲಾಗಿದೆ.
ಫ್ರೀಡಂಪಾರ್ಕ್ ಬಳಿಯಲ್ಲಿ ಅಪ್ರಾಪ್ತಯೊಬ್ಬರು ಭಿಕ್ಷೆ ಬೇಡುತ್ತಿರುವುದಾಗಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅಧಿಕಾರಿಗಳು ಬಾಲಕಿಯನ್ನ ಪೊಲೀಸರ ಸಹಾಯದೊಂದಿಗೆ ತಮ್ಮ ಸುಪರ್ಧಿಗೆ ಪಡೆದುಕೊಂಡಿದ್ದಾರೆ.
ಆ ಬಳಿಕ ಅಪ್ರಾಪ್ತೆಯನ್ನ ಸುರಕ್ಷಾ ಕೇಂದ್ರಕ್ಕೆ ರವಾನೆ ಮಾಡಿ ಆಕೆಯ ಗುರುತು ವಿವರಿ ಇತ್ಯಾದಿಗಳನ್ನ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.
SUMMARY | minor girl was rescued from Freedom Park in Shivamogga
KEYWORDS | minor girl was rescued , Freedom Park in Shivamogga