SHIVAMOGGA | MALENADUTODAY NEWS | ಮಲೆನಾಡು ಟುಡೆ Oct 25, 2024
ಶಿವಮೊಗ್ಗ | ನಿನ್ನೆ ದಿನ ಶಿವಮೊಗ್ಗ ನಗರದ ಸಹ್ಯಾದ್ರಿ ಕಾಲೇಜು ಸಮೀಪ ಟ್ರಾಫಿಕ್ ಪೇದೆಯೊಬ್ಬರನ್ನ ಕಾರಿನ ಬ್ಯಾನೆಟ್ ಮೇಲೆ ಎಳೆದೊಯ್ದ ಪ್ರಕರಣ ಸಂಬಂಧ ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಡೆದ ಘಟನೆಯ ವಿವರ ನೀಡಿರುವ ಅವರು ಆರೋಪಿಯನ್ನ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಿನ್ನೆ ದಿನ ಸಹ್ಯಾದ್ರಿ ಕಾಲೇಜು ಬಳಿಯಲ್ಲಿ ಪೂರ್ವ ಸಂಚಾರಿ ಠಾಣೆಯ ಪೊಲೀಸರು ವೇಗದ ಪರಿಮಿತಿ ಉಲ್ಲಂಘನೆಯ ವಿಚಾರವಾಗಿ ವಾಹನಗಳನ್ನ ತಪಾಸಣೆ ಮಾಡುತ್ತಿದ್ದರು. ಎಸ್‌ಐ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಭದ್ರಾವತಿ ಕಡೆಗೆ ಹೋಗುವ ಕಾರನ್ನ ತಪಾಸಣೆ ಸಲುವಾಗಿ ನಿಲ್ಲಿಸಿದ್ದರು.


ಕಿಯಾ ಸೊನೆಟ್ ಕಾರಿನಲ್ಲಿ ಬಂದ ವ್ಯಕ್ತಿಯನ್ನ ತಡೆದು ನಿಮ್ಮ ಕಾರಿನ ಮೇಲೆ ಸ್ಪೀಡ್ ವೈಲೇಶನ್ ಕೇಸ್ ಆಗಿದೆ ಎಂದಿದ್ದಾರೆ. ಈ ವೇಳೆ ಕಾರು ನಿಲ್ಲಿಸಿದ ಚಾಲಕ ಕಾನ್ಸಟೇಬಲ್ ಪ್ರಭುರವನ್ನ ಬ್ಯಾನೆಟ್ ಮೇಲೆ ಎಳೆದೊಯ್ದಿದ್ದಾರೆ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ, ಹಾಗೂ ಕರ್ತವ್ಯದಲ್ಲಿದ್ದ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಅಲ್ಲದೆ ಭದ್ರಾವತಿ ಮೂಲದ ಚಾಲಕನ್ನ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
SUMMARY | Shivamogga SP Mithun Kumar told the media that a traffic constable was dragged on the bonnet of his car near Sahyadri College in Shivamogga city. Giving details of the incident, he said the accused has been arrested.
KEYWORDS | Shivamogga SP Mithun Kumar, traffic constable was dragged on the bonnet , Sahyadri College in Shivamogga city, accused has been arrested.