ಬ್ಯಾನೆಟ್ ಮೇಲೆ ಟ್ರಾಫಿಕ್ ಪೊಲೀಸ್‌ನ್ನ ಎಳೆದೊಯ್ದ ಪ್ರಕರಣ | ಭದ್ರಾವತಿಯ ಚಾಲಕ ಅರೆಸ್ಟ್ | SP ಹೇಳಿದ್ದೇನು?
Shimoga: Superintendent of Police Mithun Kumar said the driver of the car has been arrested in connection with the incident in which a traffic policeman was dragged on the bonnet of a car near Sahyadri College in Shivamogga.
SHIVAMOGGA | MALENADUTODAY NEWS | ಮಲೆನಾಡು ಟುಡೆ Oct 24, 2024
ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಮುಂಭಾಗ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನ ಬ್ಯಾನೆಟ್ ಮೇಲೆ ಎಳೆದೊಯ್ದ ಪ್ರಕರಣದಲ್ಲಿ ಕಾರು ಚಾಲಕ/ಮಾಲೀಕನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಸಂಬಂಧ ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ಮಾದ್ಯಮ ಸಂದೇಶ ರವಾನೆ ಮಾಡಿದ್ದಾರೆ.
ನಿನ್ನೆ ದಿನ ಮಧ್ಯಾಹ್ನ ಸಹ್ಯಾದ್ರಿ ಕಾಲೇಜು ಬಳಿ ಭದ್ರಾವತಿ ಕಡೆಯಿಂದ ಬಂದಿದ್ದ ಕಿಯಾ ಸಾನೆಟ್ ಕಾರನ್ನ ಟ್ರಾಫಿಕ್ ಪೊಲೀಸ್ ಪ್ರಭುರಾಜ್ ಅಡ್ಡಹಾಕಿದ್ದರು. ಈ ವೇಳೆ ಕಾರು ನಿಲ್ಲಿಸದ ಚಾಲಕ ಪೇದೆಯನ್ನ ಕಾರು ಚಲಾಯಸುತ್ತಲೇ ತಳ್ಳುವ ಪ್ರಯತ್ನ ಮಾಡಿದ್ದ. ಈ ವೇಳೆ ಟ್ರಾಫಿಕ್ ಪೇದೆ ಕಾರಿನ ಬ್ಯಾನೆಟ್ ಮೇಲೆ ಬಿದ್ದಿದ್ದಾರೆ. ಆದಾಗ್ಯು ಚಾಲಕ ಕಾರು ನಿಲ್ಲಿಸಲಿಲ್ಲ. ಕಾರಿನ ವೇಗ ಹೆಚ್ಚಿಸಿ ಸುಮಾರು ನೂರು ಮೀಟರ್ ದೂರದವರೆಗೂ ಬ್ಯಾನೆಟ್ ಮೇಲೆ ಟ್ರಾಫಿಕ್ ಪೇದೆಯನ್ನ ಹೊತ್ತೊಯ್ದಿದ್ದ. ಅದೃಷ್ಟಕ್ಕೆ ಪ್ರಭುರಾಜ್ ಕಾರಿನಿಂದ ಹಾರಿ ತಮ್ಮ ಜೀವ ಉಳಿಸಿಕೊಂಡಿದ್ದರು. ಅಷ್ಟರಲ್ಲಿ ಅಲ್ಲಿ ಸೇರಿದ್ದ ವಾಹನ ಸವಾರರು ಕಾರನ್ನ ಅಡ್ಡಗಟ್ಟಿದ್ದರು. ಈ ದೃಶ್ಯಗಳು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಘಟನೆಯ ದೃಶ್ಯ ವೈರಲ್ ಆದ ಬೆನ್ನಲ್ಲೆ ನಡೆದ ವಿಚಾರದ ಬಗ್ಗೆ ಎಸ್‌ಪಿ ಮಿಥುನ್ ಕುಮಾರ್ ಮಾಧ್ಯಮಗಳಿಗೆ ವಾಟ್ಸಾಪ್ ಸಂದೇಶ ರವಾನೆ ಮಾಡಿದ್ದಾರೆ. ಕಾರು ಚಲಾಯಿಸಿದ ಚಾಲಕ ಭದ್ರಾವತಿ ಮೂಲದ ಕೇಬಲ್ ಆಪರೇಟರ್ ಆಗಿದ್ದು, ಅವರ ವಿರುದ್ದ FIR ದಾಖಲಿಸಲಾಗಿದೆ. ಹಾಗೂ ಅವರನ್ನ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
SUMMARY |Shimoga: Superintendent of Police Mithun Kumar said the driver of the car has been arrested in connection with the incident in which a traffic policeman was dragged on the bonnet of a car near Sahyadri College in Shivamogga.
KEYWORDS | Shimoga, Superintendent of Police Mithun Kumar, driver arrested, traffic policeman was dragged on the bonnet, Sahyadri College in Shivamogģa