SHIVAMOGGA | MALENADUTODAY NEWS | ಮಲೆನಾಡು ಟುಡೆ Nov 6, 2024
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರ ಸಮೀಪ ಕಾನೂನುಬಾಹಿರವಾಗಿ ಚಿರತೆ ಉಗುರು ಮತ್ತು ಹಲ್ಲುಗಳನ್ನು ಸಾಗಿಸುತ್ತದ್ದ ವ್ಯಕ್ತಿಯನ್ನು ಮಾಲು ಸಮೇತ ಬಂಧಿಸಲಾಗಿದೆ.
ಸಾಗರ ಪೊಲೀಸ್ ಅರಣ್ಯ ಸಂಚಾರಿ ದಳ ಈ ಕಾರ್ಯಾಚರಣೆ ನಡೆಸಿದೆ. ಶಿಕಾರಿಪುರ ತಾಲೂಕಿನ ಹಾರೋಗೊಪ್ಪದ ಲೋಕೇಶ್ ಬಂಧಿತ ಆರೋಪಿ. ಬಂಧಿತನಿಂದ ಚಿರತೆಯ16 ಉಗುರು, 3 ಹಲ್ಲುಗಳನ್ನು ವಶಕ್ಕೆ ಪಡೆಯಲಾಗಿದೆ.
ಆನಂದಪುರ ಸಮೀಪದ ದಾಸಕೊಪ್ಪ ಸರ್ಕಲ್‌ನ ಪೆಟ್ರೋಲ್ ಬಂಕ್ ಸಮೀಪ ಚಿರತೆ ಉಗುರು ಮತ್ತು ಹಲ್ಲುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.
ಸಿಕ್ಕ ಮಾಹಿತಿಯನ್ನ ನಿರ್ಲಕ್ಷ್ಯ ಮಾಡದ ಸ್ವ್ಕ್ಯಾಡ್ ಪೊಲೀಸರು ಈ ರೇಡ್ ನಡೆಸಿದ್ದಾರೆ.
SUMMARY | Anandpur: 16 nails, 3 teeth seized from man arrested for smuggling leopard nails | Lokesh sent to judicial custody
KEYWORDS | Anandpura, 16 nails, 3 teeth, smuggling leopard nails , Lokesh sent to judicial custody