SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 3, 2024 | ಆನವೇರಿಯಲ್ಲಿ ಶೆಡ್ ನಿರ್ಮಾಣದ ವೇಳೆ ವಿದ್ಯುತ್ ಪ್ರವಹಿಸಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ.
ಇಲ್ಲಿನ ಕೆಕೆ ರಸ್ತೆಯಲ್ಲಿ ಹೋಟೆಲ್ ಶೆಡ್‌ವೊಂದನ್ನ ನಿರ್ಮಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಶೆಡ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಂದರ್ಭದಲ್ಲಿ ಯುವಕನಿಗೆ ಕರೆಂಟ್ ಶಾಕ್ ಹೊಡೆದಿದೆ. ಇದರಿಂದಾಗಿ ತೀವ್ರವಾಗಿ ಅಸ್ವಸ್ಥಗೊಂಡ ಅವರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಇವರು ತಮ್ಮ ಚಿಕ್ಕಪ್ಪನ ಮಗನ ಜೊತೆಯಲ್ಲಿ ಮಿಲ್ಟ್ರಿ ಹೋಟೆಲ್ ಓಪನ್ ಮಾಡಲು ಮುಂದಾಗಿದ್ದರು. ಅದರಂತೆ ಶೆಡ್ ನಿರ್ಮಿಸಿ, ಅದಕ್ಕೆ ವಿದ್ಯುತ್ ಸಂಪರ್ಕ ಕೊಡುವ ಪ್ರಯತ್ನಕ್ಕೆ ಕೈ ಹಾಕಿದ್ದರು.
ಇನ್ನೂ ಘಟನೆಯ ದೃಶ್ಯ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ಅದರಲ್ಲಿ ಕಾಣುವಂತೆ ಹೇಳುವುದಾದರೆ, ತಗಡಿನ ಶೆಡ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಲುವಾಗಿ ಇಬ್ಬರು ಯುವಕರು ಕರೆಂಟ್ ಕಂಬದ ಬಳಿ ಕೆಲಸ ಮಾಡುತ್ತಿದ್ದರು. ಈ ವೇಳೆ ಅಲ್ಲಿ ವಿದ್ಯುತ್ ವಯರ್ ಕೆಳಕ್ಕೆ ಬಿದ್ದಿರುವ ಸಾಧ್ಯತೆ ಇದೆ. ಬಿದ್ದ ವಯರ್ ಯುವಕನಿಗೆ ಟಚ್ ಆಗಿ ಆತ ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಕಂಬ ಹತ್ತಿದ್ದ ವ್ಯಕ್ತಿಯೊಬ್ಬರು ಕೆಳಕ್ಕೆ ಇಳಿದು ಅವರ ಮೇಲೆ ಬಿದ್ದ ವಯರ್ ತೆಗೆದಿದ್ದಾರೆ.
ಕರೆಂಟ್ ಕಂಬದ ಬಳಿ ನಡೆದ ಘಟನೆಯ ದೃಶ್ಯ pic.twitter.com/3TQPCmqhXk
— malenadutoday.com (@malnadtoday) October 3, 2024