ಪತ್ನಿಯನ್ನು ಕೊಂದ ವ್ಯಕ್ತಿಗೆ ಜಿವಾವಧಿ ಶಿಕ್ಷೆ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Apr 9, 2025

ಶಿವಮೊಗ್ಗದ ದುಮ್ಮಳ್ಳಿ ಗ್ರಾಮದಲ್ಲಿ ವರದಕ್ಷಿಣೆ ವಿಚಾರವಾಗಿ ಪತ್ನಿಯನ್ನು ಕೊಲೆ ಮಾಡಿದ್ದ ಆರೋಪಿಗೆ  ಶಿವಮೊಗ್ಗ  2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜಿವಾವಧಿ ಶಿಕ್ಷೆ ಹಾಗೂ 1.85 ಲಕ್ಷ ದಂಡವನ್ನು ವಿದಿಸಿದೆ.

ಏನಿದು ಪ್ರಕರಣ

ಈ ಹಿಂದೆ 2022 ರ ಅಕ್ಟೋಬರ್​ನಲ್ಲಿ ಕರುಣಾಕರ ಎಂಬಾತ ತನ್ನ ಪತ್ನಿಗೆ ವರದಕ್ಷಿಣೆ ವಿಚಾರವಾಗಿ ಹಿಂಸಿಸಿ ಆಕೆಯನ್ನು ಚುಚ್ಚಿ ಕೊಂದಿದ್ದನೆಂದು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ತನಿಖಾಧಿಕಾರಿ  ತುಂಗಾ ನಗರದ ಪೊಲೀಸ್​ ಠಾಣೆಯ ಪಿಐ ಬಿ ಮಂಜುನಾಥ್ ತನಿಖೆ ನಡೆಸಿದ್ದರು. ಹಾಗೆಯೇ  ಶಿವಮೊಗ್ಗದ ಡಿವೈಎಸ್​ಪಿ ಬಾಲರಾಜ್, ಪ್ರಕರಣದ ತನಿಖೆಯನ್ನು ಪೂರೈಸಿ ಆರೋಪಿತನ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.  ಈ ಹಿನ್ನಲೆ ವಕೀಲರ ವಾದವನ್ನ ಆಲಿಸಿದ ನ್ಯಾಯಾಲಯ ಆರೋಪಿಗೆ  ಜೀವಾವಧಿ ಶಿಕ್ಷೆ ಮತ್ತು ರೂ 1,85 ಲಕ್ಷ ರೂಪಾಯಿ  ದಂಡ ವಿಧಿಸಿ ಆದೇಶಿಸಿದೆ.

SUMMARY | Shivamogga 2nd Additional District and Sessions Court sentenced a man to life imprisonment and imposed a fine of Rs 1.85 lakh on him for murdering his wife over dowry.

KEYWORDS | Shivamogga,  Court,  man, fined,

Share This Article