SHIVAMOGGA | MALENADUTODAY NEWS | ಮಲೆನಾಡು ಟುಡೆ Jan 11, 2025
ಹಿಂದೆ ಕೌನ್ ಬನೇಗಾ ಕರೋಡ್‌ಪತಿ, ಈಗ ಡಿಜಿಟಲ್ ಅರೆಸ್ಟ್, ಹೀಗೆ ಆನ್‌ಲೈನ್ ಮೋಸಗಳು ಹೊಸ ಹೊಸ ರೂಪ ಪಡೆದುಕೊಳ್ಳುತ್ತಲೇ ಇದೆ. ಇತ್ತೀಚೆಗೆ ಎಪಿಕೆ ಹಾಗೂ ಸರ್ಕಾರಿ ಇಲಾಖೆಯ ಸಹಾಯವಾಣಿಗಳ ಮೂಲಕ ಮೋಸ ಮಾಡುವ ಫೋನ್ ಕಾಲ್‌ಗಳು ಬರುತ್ತಿವೆ. ಈ ನಿಟ್ಟಿನಲ್ಲಿ ನೀವು ಸಹ ಅಂತಹ ಫ್ರಾಡ್ ಕೇಸ್‌ಗಳಿಂದ ನೀವು ಬಚಾವ್ ಆಗಲು ಏನು ಮಾಡಬೇಕು ಎಂಬುದಕ್ಕೆ ಇಲ್ಲಿ ಕೆಲವೊಂದು ಅಂಶಗಳಿವೆ. ಅವುಗಳನ್ನು ಗಮನಿಸಿ
How can safe for online frauds work / ಆನ್‌ಲೈನ್ ವಂಚನೆಯಿಂದ ಬಚಾವ್ ಆಗುವುದು ಹೇಗೆ?
ನಿಮ್ಮ ಹೆಸರಿನಲ್ಲಿರುವ ಬ್ಯಾಂಕ್ ಖಾತೆ, ಅದರ ಚೆಕ್ ಗಳು ಹಾಗೂ ಮೊಬೈಲ್ ಸಿಮ್ ಅನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ನೀಡದಿರಿ,
ಒಂದುವೇಳೆ ಇವು ಬೇರೆಯವರ ಸುಪರ್ದಿಯಲ್ಲಿದ್ದರೆ, ಆಗ ಅವು ಸೈಬರ್ ವಂಚನೆಗೆ ಬಳಕೆಯಾಗುವ ಸಾಧ್ಯತೆ ಇದೆ. ಇನ್ ಕೇಸ್ ಹಾಗೆ ಆಗಿದ್ದ ಪಕ್ಷದಲ್ಲಿ ನೀವು ಭಾರತೀಯ ನ್ಯಾಯ ಸಂಹಿತೆ ಹಾಗೂ ಇತರೆ ಕಾಯ್ದೆಗಳಡಿ ಶಿಕ್ಷೆಗೊಳಪಡುವ ಸಾಧ್ಯತೆ ಇದೆ.
ಈ ನಿಟ್ಟಿನಲ್ಲಿ ನಿಮ್ಮ ಬ್ಯಾಂಕ್ ದಾಖಲಾತಿಗಳು ಹಾಗೂ ಸಿಮ್ ಕಾರ್ಡ್ ಬಗ್ಗೆ ಎಚ್ಚರವಿರಲಿ ಸೈಬರ್ ಕ್ರೈಂ ಸಂಬಂಧಿತ ದೂರುಗಳಿಗೆ 1930 ಸಹಾಯವಾಣಿಗೆ ಸಂಪರ್ಕಿಸಿ
ಪಾಸ್‌ವರ್ಡ್‌ಗಳನ್ನ ಘಟ್ಟಿಗೊಳಿಸಿ
ಅಕ್ಷರಗಳು, ಸಂಖ್ಯೆಗಳ ಜೊತೆ ಚಿಹ್ನೆಗಳನ್ನು ಬಳಸಿಕೊಂಡು ಸ್ಟ್ರಾಂಗ್ ಆದ ಪಾಸ್‌ವರ್ಡ್‌ಗಳನ್ನು ನಿಮ್ಮ ಆನ್‌ಲೈನ್ ಅಕೌಂಟ್ಗಳಿಗೆ ಬಳಸಿ ಹಾಗೆಯೇ ಬೇರೆಯೇ ಒಂದೇ ಪಾಸ್‌ವರ್ಡ್‌ಗಳನ್ನು ಎಲ್ಲೆಡೆ ಬಳಸುವುದನ್ನ ಮಾಡದಿರಿ
ಎರಡು ಅಂಶದ ದೃಢೀಕರಣ ಮಾಡಿಕೊಳ್ಳಿ
ಈಗ ಆನ್‌ಲೈನ್‌ನಲ್ಲಿ ಮೇಲ್ ಅಥವಾ ಬ್ಯಾಂಕ್ ಅಕೌಂಟ್‌ಗಳಿಗೆ ಒಟಿಪಿ ಅಥವಾ ಪಾಸ್ ಕೀ ಬಳಸುವಂತಹ ಟು ಪ್ಯಾಕ್ಟರ್ ಕನ್ಪರ್‌ಮೆಶನ್‌ಗಳನ್ನ ಬಳಸಿದರೆ ಆದಷ್ಟು ಸುರಕ್ಷಿತವಾಗಿರಬಹುದು.
ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿ
ಇನ್ನೂ ಆಗಾಗ ನಿಮ್ಮ ಮೊಬೈಲ್ ಸಾಫ್ಟ್‌ವೇರ್ ಆಪರೇಟಿಂಗ್ ಸಿಸ್ಟಮ್ ಸೇರಿದಂತೆ ಅಪ್ಲಿಕೇಶನ್‌ಗಳು ಮತ್ತು ಆಂಟಿವೈರಸ್ ಸಾಫ್ಟ್‌ವೇರ್ ಅನ್ನು ನವೀಕರಿಸುತ್ತೀರಿ
ವೈಯಕ್ತಿಕ ಮಾಹಿತಿ ಹಂಚಿಕೊಳ್ಳಿ
ಅದೆಷ್ಟೆ ಆಪ್ತರು ಎನಿಸಿದರೂ ಕ್ರೆಡಿಟ್ ಕಾರ್ಡ್ ಸಂಖ್ಯೆಗಳು, ಸಾಮಾಜಿಕ ಭದ್ರತೆ ಸಂಖ್ಯೆಗಳು ಅಥವಾ ಪಾಸ್‌ವರ್ಡ್‌ಗಳಂತಹ ಸೂಕ್ಷ್ಮ ವಿವರಗಳನ್ನು ವ್ಯಕ್ತಿ ಹಾಗೂ ವೆಬ್‌ಸೈಟ್‌ಗಳಲ್ಲಿ ಎಂದಿಗೂ ಹಂಚಿಕೊಳ್ಳಬೇಡಿ.
ವೆಬ್‌ಸೈಟ್‌ಗಳನ್ನು ಪರಿಶೀಲಿಸಿ
ಇನ್ನೂ ಗೂಗಲ್ ಸರ್ಚ್‌ನಲ್ಲಿ ಅಥವಾ ಯಾವುದೇ ಎಪಿಕೆ ಫೈಲ್‌ನಲ್ಲಿ ಓಪನ್ ಆಗುವ ವೆಬ್‌ಸೈಟ್‌ಗಳ ಆರಂಭವೂ HTTPS ನಂತಹ ಸುರಕ್ಷಿತ ಪ್ರೋಟೋಕಾಲ್‌ಗಳನ್ನು ಹೊಂದಿದೆಯಾ ಚೆಕ್ ಮಾಡಿ. ಆದಾಗ್ಯು ಸಹ ವೆಬ್‌ಸೈಟ್ ಯುಆರ್‌ಎಲ್‌ಗಳಲ್ಲಿ ಯಾವುದೇ ಮಾಹಿತಿ ಕೊಡದಿರಿ.
ಫಿಶಿಂಗ್ ಇಮೇಲ್‌ಗಳ ಬಗ್ಗೆ ಎಚ್ಚರದಿಂದಿರಿ
ಇಷ್ಟೆ ಅಲ್ಲದೆ ಯಾವುದೋ ಅಪರಿಚಿತ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ ಅಥವಾ ಅಪರಿಚಿತ ನಂಬರ್‌ಗಳಲ್ಲಿ ಬರುವ ಅಥವಾ ವಾಟ್ಸಾಪ್ ಗ್ರೂಪ್‌ಗಳಲ್ಲಿ ವಿಶೇಷವಾಗಿ ಕಾಣುವ ಮೆಸೇಜ್‌ಗಳನ್ನು ಕ್ಲಿಕ್ ಮಾಡುವ ಮೊದಲು ಅದರ ನಂಬರ್‌ಗಳನ್ನು ಪರಿಶೀಲಿಸಿ. ಯಾವುದೇ ಕಾರಣಕ್ಕೂ ಆಮೀಷವೊಡ್ಡುವ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ.
SUMMARY | online job scams work from home,online job frauds,online fraud,online scam,online job scams,online job fraud,
KEY WORDS | online job scams work from home,online job frauds,online fraud,online scam,online job scams,online job fraud,work from home scams,how credit card fraud works, cyber crime,exposed secrets of cyber crime gangs,victim of cybercrime,what to do if you are a victim of sextortion,how to avoid business interruption,effective ways to protect business from cyber crime,how to avoid sextortion,what should a victim of sextortion do,how to protect yourself from cybercrime,stop cyber crime,ransomware cyber crime,cyber crime presentation,best practices to limit cyber liability,how ai will effect cyber security