SHIVAMOGGA | MALENADUTODAY NEWS | ಮಲೆನಾಡು ಟುಡೆ Oct 22, 2024
ಹಬ್ಬಗಳ ಬಳಿಕ ಇದೀಗ ಶಿವಮೊಗ್ಗ ಪೊಲೀಸರು ಮತ್ತೊಮ್ಮೆ ಏರಿಯಾ ಡಾಮಿನೇಷನ್ ಗಸ್ತನ್ನ ಚುರುಕುಗೊಳಿಸಿದ್ದಾರೆ. ಅಲ್ಲದೆ ಈ ಕಾರ್ಯಾಚರಣೆಯಲ್ಲಿ ಒಟ್ಟು 107 ಲಘು ಪ್ರಕರಣಗಳನ್ನು ಮತ್ತು COTPA ಕಾಯ್ದೆಯಡಿ ಒಟ್ಟು 23 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಏರಿಯಾ ಡಾಮಿನೇಷನ್
ದಿನಾಂಕಃ 21-10-2024 ಅಂದರೆ ನಿನ್ನೆದಿನ ಶಿವಮೊಗ್ಗ ಪೊಲೀಸರು ಹಲವೆಡೆ ಏರಿಯಾ ಡಾಮಿನೇಷನ್ ಗಸ್ತು ನಡೆಸಿದ್ದಾರೆ. ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ ಶಿವಮೊಗ್ಗ ಬಸ್ ನಿಲ್ದಾಣ, ಬಿ ಎಚ್ ರಸ್ತೆ, ಕೋಟೆ ರಸ್ತೆ, ಸಿ ಎಲ್ ರಾಮಣ್ಣ ರಸ್ತೆ, ಲಷ್ಕರ್ ಮೊಹಲ್ಲ, ಟಿಪ್ಪುನಗರ, ವಿನಾಯಕ ವೃತ್ತ, ಸೂಳೇ ಬೈಲು, ರಂಗನಾಥ ಬಡಾವಣೆಯಲ್ಲಿ ಗಸ್ತು ನಡೆಸಲಾಗಿದೆ.
ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ ಬಸವನಗುಡಿ, ಉಷಾ ವೃತ್ತ, ರೈಲ್ವೆ ಸ್ಟೇಷನ್ ಹತ್ತಿರ, ಆಲ್ಕೊಳ ರಾಗಿಗುಡ್ಡ,ಕುಂಸಿ, ಆಯನೂರುನಲ್ಲಿ ಗಸ್ತು ನಡೆಸಲಾಗಿದೆ.
ಇನ್ನೂ ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಕೂಲಿ ಬ್ಲಾಕ್ ಶೆಡ್, ಹೊಳೆ ಹೊನ್ನೂರು ವೃತ್ತ, ಗಾಂಧಿ ವೃತ್ತ, ಉಜಿನಿಪುರ, ಗೌಡರಹಳ್ಳಿ ಶಿಕಾರಿಪುರ ಉಪ ವಿಭಾಗ ವ್ಯಾಪ್ತಿಯ ವಿನಾಯಕ ನಗರ, ಅಂಬರಗೊಪ್ಪ, ಜಡೆ, ಕಾನ್ಕೇರಿ, ಶಿರಾಳಕೊಪ್ಪ ಬಸ್ ನಿಲ್ದಾಣದ ಹತ್ತಿರ ತೀರ್ಥಹಳ್ಳಿ ಉಪ ವಿಭಾಗ ವ್ಯಾಪ್ತಿಯ ಬಾಳೆಬೈಲು, ಬೆಜುವಳ್ಳಿ , ಹೊಸನಗರ ಬಸ್ ನಿಲ್ದಾಣ, ನಗರದ ಚಿಕ್ಕಪೇಟೆಯಲ್ಲಿ ಗಸ್ತು ನಡೆಸಲಾಗಿದೆ.
ಆಯಾ ವಿಭಾಗ DYSP ನೇತೃತ್ವದಲ್ಲಿ SI ಹಾಗೂ ಪೊಲೀಸ್ ಸಿಬ್ಬಂದಿ Area Domination ಗಸ್ತು ನಡೆಸಿದ್ದಾರೆ.
ಆಯಾ ಭಾಗದ ಸೂಕ್ಷ್ಮ ಪ್ರದೇಶಗಳಲ್ಲಿ ಕಾಲ್ನಡಿಗೆ ವಿಶೇಷ ಗಸ್ತು (Foot Patrolling) ಸಹ ನಡೆಸಿದ ಪೊಲೀಸರು ಒಟ್ಟಾರೆ ಕಾರ್ಯಾಚರಣೆಯಲ್ಲಿ Public Nuisance ಮಾಡಿದ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ದ ಒಟ್ಟು 107 ಲಘು ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ COTPA ಕಾಯ್ದೆಯಡಿ ಒಟ್ಟು 23 ಪ್ರಕರಣಗಳನ್ನು ದಾಖಲಿಸಿದ್ದಾರೆ.
SUMMARY | On 21-10-2024, shivamogga police conducted area domination patrols at various places. The patrolling was carried out at Shivamogga Bus Stand, B H Road, Fort Road, C L Ramanna Road, Lashkar Mohalla, Tipu Nagar, Vinayaka Circle, Sule Bailu and Ranganatha Layout under Shivamogga A sub-division.
KEYWORDS | shivamogga police , area domination patrol, Shivamogga Bus Stand, B H Road, Fort Road, C L Ramanna Road, Lashkar Mohalla, Tipu Nagar, Vinayaka Circle, Sule Bailu , Ranganatha Layout, Shivamogga A sub-division,