SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 14, 2024 | ಸಾಮೂಹಿಕ ಭಜನೆ ಕಾರ್ಯಕ್ರಮದ ಸಂದರ್ಭದಲ್ಲಿ ಕಿಟಿಕಿ ಪಕ್ಕ ಕುಳಿತು ಭಜನೆ ಮಾಡುತ್ತಿದ್ದ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಸರಕದ್ದಿರುವ ವಿಡಿಯೋವೊಂದು ಇದೀಗ ಶಿವಮೊಗ್ಗದೆಲ್ಲೆಡೆ ವೈರಲ್ ಅಗುತ್ತಿದೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಹತ್ತಾರು ಮಹಿಳೆಯರು ನವರಾತ್ರಿಯ ಅಂಗನವಾಗಿ ಸಾಮೂಹಿಕ ಭಜನೆ ಮಾಡುತ್ತಿರುತ್ತಾರೆ. ಈ ದೃಶ್ಯವನ್ನು ಅಲ್ಲಿದ್ದವರು ಒಬ್ಬರು ಚಿತ್ರೀಕರಿಸುತ್ತಿದ್ದಾರೆ. ಇದೇ ವೇಳೆ ಮಹಿಳೆಯೊಬ್ಬರು ಯಾರೋ ಎಳೆದಂತಾಗಿ ಕೂಗಿದ್ಧಾರೆ. ಎಲ್ಲರ ಗಮನ ಅತ್ತ ಸೆಳೆದಾಗ, ಕಿಟಕಿಯ ಹೊರಗಿನಿಂದ ಯಾರೋ ದುಷ್ಕರ್ಮಿ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಸರಕದ್ದಿರುವುದು ಗೊತ್ತಾಗುತ್ತದೆ.
ಅಯ್ಯೋ ಸರ ಕದ್ದುಬಿಟ್ರು, ಅಂತಾ ಮಹಿಳೆ ಕೂಗಿಕೊಂಡ ಬೆನ್ನಲ್ಲೆ ಮಹಿಳೆಯರು ಸಹಾಯಕ್ಕಾಗಿ ಯಾಚಿಸಿದ್ದಾರೆ. ಸದ್ಯ ಈ ದೃಶ್ಯ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕುನದ್ದು ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಪೊಲೀಸ್ ಮೂಲಗಳಲ್ಲಿ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆದರೆ ವಿಡಿಯೋ ದೃಶ್ಯ ವೈರಲ್ ಆಗುತ್ತಿದೆ.
SUMMARY | video of a miscreant snatching a chain from a woman’s neck during a mass bhajan programme has gone viral across Shivamogga

KEYWORDS | A video of a woman , mass bhajan programme chain snatching, video gone viral across Shivamogga