SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 10, 2024 | ಸಾಲಬಾಧೆಯಿಂದ ಮನನೊಂದು ರೈತ ಅತ್ಮಹತ್ಯೆ!
ತೀರ್ಥಹಳ್ಳಿ : ಸಂಘ ಸಂಸ್ಥೆಯಲ್ಲಿ ಎರಡು ಲಕ್ಷ ಹಾಗೂ ಇತರೆ ಕೈ ಸಾಲ ಮಾಡಿಕೊಂಡಿದ್ದ ರೈತನೋರ್ವ ಇತ್ತ ಬೆಳೆಯಲ್ಲೂ ನಷ್ಟ ಅನುಭವಿಸಿ ಸಾಲ ತಿರಿಸಲಾಗದೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಣ್ಣದಮನೆಯ ನೇಮನಾಯ್ಕ (60 ವರ್ಷ) ಎಂಬ ರೈತ ಅಡಿಕೆಗೆ ಎಲೆಚುಕ್ಕಿ ರೋಗ ಹಾಗು ಕೊಳೆ ರೋಗ ಹಿಡಿದಿದ್ದರಿಂದ ಬೇಸತ್ತಿದ್ದರು.
ಅಲ್ಲದೆ ಬೆಳೆ ಹಾಗೂ ಜೀವನ ನಿರ್ವಹಣೆಗಾಗಿ ಸಂಘ ಸಂಸ್ಥೆಯಲ್ಲಿ ಹಾಗೂ ಕೈ ಸಾಲ ಮಾಡಿಕೊಂಡಿದ್ದರು. ಇದೀಗ ಸಾಲ ತೀರಿಸಲು ಸಾಧ್ಯವಾಗದೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ವಿಷಸೇತಿವಿಸಿದ್ದ ಇವರನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಬುಧವಾರ ರಾತ್ರಿ 10 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
SUMMARY | The farmer, a resident of Sunnadamane under Hosahalli gram panchayat limits under Agumbe police station limits in Thirthahalli taluk, committed suicide
KEYWORDS | farmer, a resident of Sunnadamane, Hosahalli gram panchayat, Agumbe police station ,Thirthahalli taluk, committed suicide