ನಗರದಲ್ಲಿ ಪ್ರತ್ಯೇಕ ಅಪಘಾತ | ಮೂವರ ಸಾವು |

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 1, 2025 ‌‌ 

ಹೊಸವರುಷದ ದಿನ ಶಿವಮೊಗ್ಗದಲ್ಲಿ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಸಿದ್ದಯ್ಯ ಸರ್ಕಲ್‌ನಲ್ಲಿ ನಡೆದ ಅಪಘಾತದ ವರದಿ ಹೊಸವರುಷದ ಮೊದಲ ರಾತ್ರಿಯಲ್ಲೆ, ಸಿದ್ದಯ್ಯ ಸರ್ಕಲ್‌ ಬಳಿ ಭೀಕರ ಅಪಘಾತ | ಹಂಪ್‌ ಹಾರಿ ಉಲ್ಟಾ ಬಿದ್ದ ಕಾರು | ಓರ್ವ ಸಾವು ಇಲ್ಲಿದೆ. ಇನ್ನೊಂದು ಘಟನೆಯಲ್ಲಿ ರಾಯಲ್ ಆರ್ಕಿಡ್ ಬಳಿ ರಸ್ತೆ ದಾಟುತ್ತಿದ್ದ ಮಹಿಳೆಗೆ ಬೈಕೊಂದು ಡಿಕ್ಕಿ ಹೊಡೆದು ಮಹಿಳೆ ಸಾವನ್ನಪ್ಪಿದ್ದಾರೆ. ಅವರನ್ನು ರಾಜಮ್ಮ ತುಂಗಾನಗರ ನಿವಾಸಿ ಎಂದು ಗುರುತಿಸಲಾಗಿದೆ.ಗಂಭೀರವಾಗಿ ಗಾಯಗೊಂಡಿದ್ದ ಇವರು ಮೆಗ್ಗಾನ್‌ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಡಯೋಗ್ನಿಸ್‌ ಸೆಂಟರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಕೆಲಸಕ್ಕೆ ತೆರಳುವಾಗ ಘಟನೆ ಸಂಭವಿಸಿದೆ.  

ಇನ್ನೊಂದು ಘಟನೆಯಲ್ಲಿ ಇಂಜಿನಿಯರ್ ಕಾಲೇಜಿನ ವಿದ್ಯಾರ್ಥಿಗಳ ನಡುವೆ ಹಣದ ವಿಚಾರದಲ್ಲಿ ಗಲಾಟೆಯಾಗಿದ್ದು, ಈ ಸಂಬಂಧ ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮದ್ಯಪಾನಕ್ಕಾಗಿ ಹಣ ನೀಡುವಂತೆ ವಿದ್ಯಾರ್ಥಿಗೆ ಬೆದರಿಕೆ ಹಾಕಿದ ಪ್ರಕರಣ ಇದಾಗಿದ್ದು, ಈ ಸಂಬಂಧ ಪೊಲೀಸರು ಸೂಕ್ಷ್ಮವಾಗಿ ಪರಿಶೀಲನೆ ನಡೆಸ್ತಿದ್ದಾರೆ.

ಇತ್ತ ಶಿವಮೊಗ್ಗದ ಸಾಗರ ರಸ್ತೆಯಲ್ಲಿ ನಡೆದ ಹಿಟ್‌ ಆಂಡ್‌ ರನ್‌ ಘಟನೆಯಲ್ಲಿ ಓರ್ವ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಸುಧಾಕರ್‌ ಎಂಬವರು ಮೂಲತ ಶಿಕಾರಿಪುರದವರಾಗಿದ್ದು ಶಿವಮೊಗ್ಗದಲ್ಲಿ ವಾಚರ್‌ ಕೆಲಸ ಮಾಡುತ್ತಿದ್ದರು. ತಮ್ಮ ತಂಗಿ ಮನೆಗೆ ನಡೆದು ಹೋಗುತ್ತಿದ್ದ ಅವರಿಗೆ ವಾಹನವೊಂದು ಡಿಕ್ಕಿಯಾಗಿದೆ. ಪರಿಣಾಮ ಅವರು ಸಾವನ್ನಪ್ಪಿದ್ದಾರೆ.

SUMMARY |  shivamogga short news 

KEY WORDS |  shivamogga short news 

Share This Article