SHIVAMOGGA | MALENADUTODAY NEWS | ಮಲೆನಾಡು ಟುಡೆ Nov 11, 2024
ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮಗಳ ವಿವರ ಹೊರಬಿದ್ದಿದೆ. ಇದೇ ನವೆಂಬರ್ 26ರಿಂದ ಡಿಸೆಂಬರ್ 1ರವರೆಗೆ ಲಕ್ಷದೀಪೋತ್ಸವ ನಡೆಯಲಿದೆ.
ನ.26 ರಂದು ಹೊಸಕಟ್ಟೆ ಉತ್ಸವ
27ರಂದು ಕೆರೆಕಟ್ಟೆ ಉತ್ಸವ
28ರಂದು ಲಲಿತೋದ್ಯಾನ ಉತ್ಸವ

29ರಂದು ಕಂಚಿಮಾರುಕಟ್ಟೆ ಉತ್ಸವ
30ರಂದು ಗೌರಿಮಾರುಕಟ್ಟೆ ಉತ್ಸವ (ಲಕ್ಷದೀಪೋತ್ಸವ)
ಡಿ.1ರಂದು ಭಗವಾನ್ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಲಿದೆ.
ನ.26ರಂದು ಮಧ್ಯಾಹ್ನ 3 ಗಂಟೆಗೆ ಉಜಿರೆಯಿಂದ ಧರ್ಮಸ್ಥಳಕ್ಕೆ ಊರ- ಪರವೂರಿನ ಭಕ್ತರು, ಅಭಿಮಾನಿಗಳು ಪಾದಯಾತ್ರೆ ನಡೆಸುವರು.
ನ.26ರಿಂದ 30ರವರೆಗೆ ಧರ್ಮಸ್ಥಳದ ಪ್ರೌಢಶಾಲೆ ವಠಾರದಲ್ಲಿ ರಾಜ್ಯಮಟ್ಟದ ವಸ್ತುಪ್ರದರ್ಶನ ಆಯೋಜಿಸಲಾಗಿದೆ. ನ.30ರಂದು ಸಂಜೆ 4ರಿಂದ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ.
SUMMARY | The details of lakshdeepotsava programmes to be held in Dharmasthala in the month of Karthika have been released. Lakshdeepotsava will be held from November 26 to December 1.
KEYWORDS | details of lakshdeepotsava programmes, Dharmasthala lakshdeepotsava Karthika Lakshdeepotsava November 26 to December 1.