SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 7, 2025
ಉಬರ್ ಸಂಸ್ಥೆಯು ದೆಹಲಿ ಹಾಗೂ ಮುಂಬೈನಲ್ಲಿ ಊಬರ್ ಪೆಟ್‌ನ್ನು ಪ್ರಾರಂಭಿಸಿದ್ದು, ಇನ್ಮುಂದೆ ಪ್ರಾಣಿಪ್ರಿಯರು ತಮ್ಮ ಸಾಕು ಪ್ರಾಣಿಗಳನ್ನು ಉಬರ್‌ನಲ್ಲಿ ಕರದುಕೊಂಡು ಹೋಗಬಹುದು.
ಈ ಹಿಂದೆ ಊಬರ್ ಮೊದಲ ಬಾರಿಗೆ ಬೆಂಗಳೂನರಿಲ್ಲಿ ಉಬರ್ ಪೆಟ್‌ನ್ನು ಆರಂಭಿಸಿತ್ತು. ಇದೀಗ ಉಬರ್ ಪೆಟ್‌ನ್ನು ದೆಹಲಿ ಹಾಗೂ ಮುಂಬೈನಲ್ಲಿ ಪ್ರಾರಂಭಿಸಿದೆ. ಇದರ ಮೂಲಕ ಪ್ರಾಣಿಪ್ರಿಯರು ತಮ್ಮ
ಸುದ್ದಿ : 02 ಮಂಗನ ಖಾಯಿಲೆ ಸೇರಿದಂತೆ ಇನ್ನಿತರೆ ರೋಗಗಳ ನಿಯಂತ್ರಣಕ್ಕೆ 50 ಕೋಟಿ ಮೀಸಲು
ಮಲೆನಾಡು ಭಾಗದಲ್ಲಿ ಅತಿ ಹೆಚ್ಚಾಗಿ ಕಂಡುಬರುತ್ತಿರುವ ಮಂಗನ ಕಾಯಿಲೆ ಸೇರಿದಂತೆ ಇನ್ನಿತರೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ತನ್ನ ಬಜೆಟ್‌ನಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ವಿಶೇಷ ಅಭಿಯಾನ ರೂಪದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಾಗುತ್ತದೆ ಎಂದು ತಿಳಿಸಿದೆ.
ಸುದ್ದಿ : 03 ನಾಳೆ ಕೆಎಸ್‌ಐಎಸ್‌ಎಫ್ ಕಪ್ ಕ್ರಿಕೆಟ್ ಪಂದ್ಯಾವಳಿ
ಶಿವಮೊಗ್ಗ,ಮಾ.07 : ಕರ್ನಾಟಕ ರಾಜ್ಯ ಕೈಗಾರಿಕ ಭದ್ರತಾ ಪಡೆ, ಪೊಲೀಸ್ ಇಲಾಖೆ ಶಿವಮೊಗ್ಗ ಇವರ ಸಹಯೋಗದಲ್ಲಿ ಮಾರ್ಚ್ 8 ಮತ್ತು 9 ರಂದು ನಗರದ ನವುಲೆಯಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿ ವಿದ್ಯಾವಿದ್ಯಾಲಯದ ಕ್ರೀಡಾಂಗಣದಲ್ಲಿ ಆಹ್ವಾನಿತ ತಂಡಗಳ ನಡುವೆ ಸ್ನೇಹ ಸೌಹಾರ್ದಕ್ಕಾಗಿ ಕೆಎಸ್‌ಐಎಸ್‌ಎಫ್ ಕಪ್ ಕ್ರಿಕೆಟ್ ಪಂದ್ಯಾವಳಿ-2025 ಆಯೋಜಿಸಲಾಗಿದೆ.
ಸುದ್ದಿ : 04 ಮಾರ್ಚ್ 8 ರಂದು ಮಹಿಳಾ ಸಮಾನತೆ ಮತ್ತು ಸಬಲೀಕರಣ ಮಹತ್ವ ಪ್ರೇರೇಪಿಸುವ ಕುರಿತು ಕಾರ್ಯಕ್ರಮ
ಶಿವಮೊಗ್ಗ, ಮಾ.07 : ಮಹಿಳಾ ದಿನಾಚರಣೆಯ ಅಂಗವಾಗಿ ನಿಧಿಗೆ ಜೈನ್ ಪಬ್ಲಿಕ್ ಶಾಲೆಯಲ್ಲಿ ಮಾರ್ಚ್ 8 ರ ಸಂಜೆ 5:30 ಕ್ಕೆ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಹಿಳಾ ಸಮಾನತೆ ಮತ್ತು ಸಬಲೀಕರಣದ ಮಹತ್ವವನ್ನು ಪ್ರೇರೇಪಿಸುವ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಲೆಯ ಪ್ರಾಂಶುಪಾಲರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಫ್ಯಾಶನ್ ಶೋ, (ಅತ್ತೆ ಸೊಸೆ | ಅಮ್ಮಂದಿರ ಜೊತೆ) ಫ್ಯಾಷನ್ ಶೋ, ಸಮೂಹ ನೃತ್ಯ ಸ್ಪರ್ಧೆಯನ್ನು ಎಲ್ಲಾ ಮಹಿಳೆಯರಿಗೆ ಏರ್ಪಡಿಸಲಾಗಿದೆ.
ಸುದ್ದಿ : 05 ಅರಣ್ಯ ಅಪರಾಧಗಳ ತಡೆಯುವಿಕೆ ಬಗ್ಗೆ ಜನ ಜಾಗೃತಿ ಕಾರ್ಯಕ್ರಮ
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯ ಶ್ರೀಗಂಧ ಸಭಾಂಗಣ ಬುಧವಾರ ಶಿವಮೊಗ್ಗದಲ್ಲಿ ಅರಣ್ಯ ಸಂಚಾರಿದಳದ ವತಿಯಿಂದ ಅರಣ್ಯ ಅಪರಾಧಗಳ ತಡೆಯುವಿಕೆ ಬಗ್ಗೆ ಜನ ಜಾಗೃತಿ ಕಾರ್ಯಕ್ರಮ ಮತ್ತು ಭಿತ್ತಿಪತ್ರಗಳ ಬಿಡುಗಡೆ ಸಮಾರಂಭ ನೆರವೇರಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಹನುಮಂತಪ್ಪ ಕೆ.ಟಿ ಐ.ಎಫ್.ಎಸ್ ರವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ. ಅರಣ್ಯ ಅಪರಾಧಗಳ ತಡೆಯುವಿಕೆ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಅರಣ್ಯ ಸಂಚಾರಿದಳದ ಕಾರ್ಯ ಪ್ರಮುಖವಾದುದು ಎಂದರು.
SUMMARY | Uber has launched UberPet in Delhi and Mumbai and now animal lovers can take their pets with them on Uber.
KEYWORDS | Uber, UberPet, Mumbai, chatpat suddi,