SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 8, 2024 shimoaga news
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಹಳೇ ಅಂಕ್ಲಿ ಗ್ರಾಮದ ಬಳಿ ತುಂಗಾ ನದಿಯ ದಡದಲ್ಲಿ ಕೈ ಕಾಲಿಗೆ ಹಗ್ಗ ಕಟ್ಟಿ, ಕೊರಳಿಗೆ ಕರ್ಚಿಫ್ ಕಟ್ಟಿ ಕೊಲೆ ಮಾಡಿದ ಸ್ಥಿತಿಯಲ್ಲಿ ಗಂಡಸಿನ ಶವ ಪತ್ತೆಯಾಗಿದೆ.
ಮೃತ ವ್ಯಕ್ತಿ ಸುಮಾರು 40 ರಿಂದ 42 ವರ್ಷ ವಯಸ್ಸಾಗಿದ್ದು 5.2 ಅಡಿ ಎತ್ತರ, ಬಲ ಗೈ ಮೇಲೆ ಮಾಮ್ ಡ್ಯಾಡ್ ಹಾಗೂ ಎದೆಯ ಮೇಲೆ ಶಿಲ್ಪ, ಬಲ ಕುತ್ತಿಗೆ ಹತ್ತಿರ ತ್ರಿಶೂಲ ಗುರುತು ಮತ್ತು ಎಡ ಗೈ ರಟ್ಟೆಯ ಕೆಳಗೆ ಕೈ ಸುತ್ತಲು ವಿ ಆಕಾರದ ಟ್ಯಾಟು ಗುರುತುಗಳು ಇರುತ್ತದೆ.
ಬಲ ಕಿವಿಯಲ್ಲಿ ಒಂದು ಸಿಲ್ವರ್ ಬಣ್ಣದ ರಿಂಗ್ ಇರುತ್ತದೆ. ಹಸಿರು ಬಣ್ಣದ ಟೀ ಶರ್ಟ್, ಕಪ್ಪು ಬಣ್ಣದ ಕೆಂಪು ಗೆರೆಯುಳ್ಳ ಬರಮೋಡಾ ಹಾಗೂ ಬಲ ಕೈ ಮತ್ತು ಬಲ ಕಾಲಿನಲ್ಲಿ ಕರಿ ಬಣ್ಣದ ಉಣ್ಣೆ ದಾರ ಇರುತ್ತದೆ.
ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ಪೂಲೀಸ್ ಉಪ ನಿರೀಕ್ಷಕರು ಹಡಗಲಿ ಪೊಲೀಸ್ ಠಾಣೆ 9480805780, ಪೊಲೀಸ್ ವೃತ್ತ ನಿರಿಕ್ಷಕರು ಹಡಗಲಿ ವೃತ್ತ 9480805737, ಪೊಲೀಸ್ ಉಪ ಅಧೀಕ್ಷಕರು ಹರಪ್ಪನಹಳ್ಳಿ 9480805722, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ವಿಜಯನಗರ ಜಿಲ್ಲೆ 9480805702, ಪೊಲೀಸ್ ಅಧೀಕ್ಷಕರು ವಿಜಯನಗರ ಜಿಲ್ಲೆ 9480805701 ನ್ನು ಸಂಪರ್ಕಿಸಬಹುದದೆಂದು ಸಿ.ಪಿ.ಐ ಹಡಗಲಿ ವೃತ್ತ, ಹಡಗಲಿ ತನಿಖಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ