SHIVAMOGGA | MALENADUTODAY NEWS | ಮಲೆನಾಡು ಟುಡೆ Dec 26, 2024
ಹೊಸವರ್ಷದ ಸ್ವಾಗತದ ನಡುವೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಪ್ರಸಿದ್ದ ತೆಪ್ಪೋತ್ಸವಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಈ ಸಂಬಂಧ ರಾಮೇಶ್ವರ ರಥೋತ್ಸವ ಹಾಗು ತೆಪ್ಪೋತ್ಸವ ನಡೆಯುವ ಕ್ರಮ ಹಾಗೂ ವಿಧಿ ವಿಧಾನಗಳ ಬಗ್ಗೆ ಜಾತ್ರೆಯ ಸಂಚಾಲಕ ಸಮಿತಿ ಮಾಹಿತಿ ನೀಡಿದೆ.
ತೀರ್ಥಹಳ್ಳಿ ಪೇಟೆಯಲ್ಲಿ ಈ ಸಂಬಂಧ ಸುದ್ದಿಗೋಷ್ಟಿಯನ್ನು ನಡೆಸಿ ಮಾತನಾಡಿದ ಜಾತ್ರೆ ಸಮಿತಿ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರರವರು ರಾಮೇಶ್ವರ ದೇವರ ಎಳ್ಳಮಾವಾಸ್ಯೆಯ ಜಾತ್ರಾ ಮಹೋತ್ಸವ ಡಿಸೆಂಬರ್ 28ರಿಂದ ಜನವರಿ 2ರವರೆಗೆ ನಡೆಯಲಿದೆ ಎಂದು ವಿವರಿಸಿದರು.
18 ಲಕ್ಷ ರೂಪಾಯಿ ಖರ್ಚುವೆಚ್ಚದಲ್ಲಿ ಜಾತ್ರೆ ನಡೆಯಲಿದ್ದು, ಡಿಸೆಂಬರ್ 28 ರಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಡಿಸೆಂಬರ್ 30ರಂದು ಮುಂಜಾನೆ ಪರಶುರಾಮ ತೀರ್ಥಪೂಜೆ, ತೀರ್ಥಾಭಿಷೇಕ ಮತ್ತು ತೀರ್ಥಸ್ನಾನ ನಡೆಯಲಿವೆ. ಡಿಸೆಂಬರ್ 31ರಂದು ಮನ್ಮಹಾರಥಾರೋಹಣ ಹಾಗೂ ಜನವರಿ 1ರಂದು ಸಿಡಿಮದ್ದು ಪ್ರದರ್ಶನದ ಜೊತೆಗೆ ತೆಪ್ಪೋತ್ಸವ ಜರುಗಲಿದೆ ಎಂದು ತಿಳಿಸಿದ್ದಾರೆ. ಎರಡು ನುರಿತ ತಂಡಗಳಿಂದ 1 ಗಂಟೆಗಳ ಕಾಲ ಸಿಡಿಮದ್ದು ಪ್ರದರ್ಶನ ನಡೆಯಲಿದೆ.
ಇನ್ನೂ ಡಿಸೆಂಬರ್ 30ರಂದು ಸಂಜೆ ತುಂಗಾ ತೀರದಲ್ಲಿ ಶಮಿತಾ ಮಲ್ನಾಡ್ ತಂಡದಿಂದ ಸಂಗೀತ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜನವರಿ 1ರಂದು ಉದಯ್ ಕುಮಾರ್ ಶೆಟ್ಟಿ ಅವರಿಂದ ಒಡಿಸ್ಸಿ ನೃತ್ಯ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
SUMMARY | Thirthahalli Ellamasya Fair. Thirthahalli Theppotsava, Rameshwara Devar Ellamavasya Fair Festival, Rameshwara Temple Committee, Thirthahalli Theppotsava 2024 Details. Thirthahalli Fair
KEY WORDS | Thirthahalli Ellamasya jatre Thirthahalli Theppotsava, Rameshwara Devar Ellamavasya Fair Festival, Rameshwara Temple Committee, Thirthahalli Theppotsava 2024 Details. Thirthahalli jatre