SHIVAMOGGA | MALENADUTODAY NEWS | ಮಲೆನಾಡು ಟುಡೆ Oct 18, 2024
ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಬೈರೇಕೊಪ್ಪ ಗ್ರಾಮದಲ್ಲಿ ಜಾನುವಾರು ಮೈತೊಳೆಯಲು ಹೋಗಿದ್ದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಇವತ್ತು ಶುಕ್ರವಾರ ನಡೆದಿದೆ.
ಇಲ್ಲಿನ ನಿವಾಸಿ ಮಿಥುನ್ ಗೌಡ ಮೃತ ಯುವಕ. 21 ವರ್ಷದ ಯುವಕ ಮಿಥುನ್ ಇವತ್ತು ಬೆಳಗ್ಗೆ ಜಾನುವಾರು ಮೈತೊಳೆಯಲು ಬೈರೇಕೊಪ್ಪದ ಕೆರೆಗೆ ಇಳಿದಿದ್ದ.
ಈ ವೇಳೆ ಏನಾಯ್ತು ಎಂಬುದು ಸ್ಪಷ್ಟವಾಗಿಲ್ಲ. ನೀರಿಗೆ ಇಳಿದಿದ್ದ ಆತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಸ್ಥಳೀಯರು ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ.
ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮಿಥುನ್ ರ ಮೃತದೇಹವನ್ನ ನೀರಿನಿಂದ ಹೊರತೆಗೆದಿದ್ದಾರೆ. ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
SUMMARY | Shivamogga: A youth, who had gone to wash cattle at Byrekoppa village in Soraba taluk of Shivamogga district, died on Friday.
KEYWORDS | Shivamogga, wash cattle , Byrekoppa village, Soraba taluk , Shivamogga district,
