SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 8, 2024 | SHIVAMOGGA RAILWAY NEWS | ರೈಲು ಹತ್ತಲು ಇನ್ನೊಂದು ಪ್ಲಾಟ್ ಫಾರಮ್ ಗೆ ಹೋಗುವ ಸಲುವಾಗಿ ಪ್ಲಾಟ್‌ಫಾರಮ್‌ನಿಂದ ಕೆಳಕ್ಕೆ ಹಾರಿದ ವ್ಯಕ್ತಿಯೊಬ್ಬರು ಕಾಲು ತಿರುಚಿದ ಘಟನೆಯೊಂದು ಶಿವಮೊಗ್ಗ ರೈಲ್ವೆ ಸ್ಟೇಷನ್‌ನಲ್ಲಿ ನಡೆದಿದೆ.
ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ಜನಶತಾಬ್ದಿ ಟ್ರೈನ್ ಹತ್ತಲು ಶಿಕಾರಿಪುರದ ವ್ಯಕ್ತಿಯೊಬ್ಬರು ಬಂದಿದ್ದರು. ಅವರು ಬರುವ ಹೊತ್ತಿಗೆ ಟ್ರೈನ್ ಹೊರಟಿತ್ತು. ಹೀಗಾಗಿ ಪ್ಲಾಟ್‌ಫಾರಮ್ 2 ಕ್ಕೆ ಪ್ಲಾಟ್‌ಫಾರಮ್ ಒಂದರಿಂದ ಹೋಗಲು ರೈಲ್ವೆ ಟ್ರ್ಯಾಕ್ ಮೇಲೆ ಹಾರಿದ್ದಾರೆ. ಹೀಗೆ ಹಾರಿದಾಗ ವ್ಯಕ್ತಿಯ ಕಾಲು ತಿರುಚಿದೆ. ಪರಿಣಾಮ ಅಲ್ಲಿಯೇ ಕುಸಿದಿದ್ದಾರೆ.
ಇದನ್ನ ಗಮನಿಸಿದ ರೈಲ್ವೆ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಶಫಿವುಲ್ಲಾ ಸ್ಥಳಕ್ಕೆ ಬಂದು ಅವರನ್ನ ಮೇಲಕ್ಕೆ ಎತ್ತಿದ್ದಾರೆ. ಆ ಬಳಿಕ ಅವರಿಗೆ ತುರ್ತು ಚಿಕಿತ್ಸೆಗಾಗಿ ವಾಹನ ವ್ಯವಸ್ಥೆ ಕಲ್ಪಿಸಿ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿದ್ದಾರೆ.
A man was injured after he jumped off the railway track to go from one platform to another to board a Janshatabdi train at Shivamogga railway station. pic.twitter.com/drElofYoTT
— malenadutoday.com (@malnadtoday) October 8, 2024
SUMMARY | Shimoga: A man was injured after he jumped off the railway track to go from one platform to another to board a Janshatabdi train at Shivamogga railway station.
KEYWORDS | Shimoga, railway track , platform , Janshatabdi train, Shivamogga railway station.