SHIVAMOGGA | MALENADUTODAY NEWS | ಮಲೆನಾಡು ಟುಡೆ Jan 18, 2025
ಚಿತ್ರದುರ್ಗದ ಇಬ್ಬರಿಗೆ ಹಾಗೂ ಶಿವಮೊಗ್ಗದ ಓರ್ವರಿಗೆ ಕುವೆಂಪು ವಿಶ್ವವಿದ್ಯಾಲಯ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡುತ್ತಿದೆ. ಆ ಬಗೆಗಿನ ವಿವರ ಹೀಗಿದೆ
ಅಲ್ಮಸ್ ಬಾನು ಜಿ.ಎಸ್ ಅವರಿಗೆ ಡಾಕ್ಟರೇಟ್ ಪದವಿ
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಗರಗ ಗ್ರಾಮದ ಅಲ್ಮಸ್ ಬಾನು ಜಿ.ಎಸ್ ಅವರಿಗೆ ಕುವೆಂಪು ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿ ನೀಡಿದೆ. ಕುವೆಂಪು ವಿಶ್ವವಿದ್ಯಾಲಯದ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಹಾಲಮ್ಮ.ಎಂ ಇವರ ಮಾರ್ಗದರ್ಶನದಲ್ಲಿ ಸಂಸ್ಕೃತಿ ಓದಿನ ನೆಲೆಗಳು (ಕೆ.ವಿ.ನಾರಾಯಣ್ ಅವರ ಚಿಂತನೆಗಳನ್ನು ಅನುಲಕ್ಷಿಸಿ) ಕುರಿತು ಅವರು ಮಂಡಿಸಿದ ಮಹಾಪ್ರಬಂಧವನ್ನು ಕುವೆಂಪು ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿಗೆ ಮಾನ್ಯ ಮಾಡಿದೆ. ಅಲ್ಮಸ್ ಬಾನು ಜಿ.ಎಸ್ ಪ್ರಸ್ತುತ ಚಕ್ರವರ್ತಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ತಿಪ್ಪೇಸ್ವಾಮಿ.ಎನ್‌ಅವರಿಗೆ ಡಾಕ್ಟರೇಟ್ ಪದವಿ
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ತುಮಕೂರ್ಲಹಳ್ಳಿ ಗ್ರಾಮದ ನಾಗರಾಜ, ತಾಯಮ್ಮ ಪುತ್ರರಾದ ತಿಪ್ಪೇಸ್ವಾಮಿ ಎನ್‌ರವರಿಗೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ. ಕುವೆಂಪು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಹಿರಿಯ ಪ್ರಾಧ್ಯಾಪಕರಾದ ಡಾ.ಎಸ್.ಎನ್.ಯೋಗೀಶ್‌ಮಾರ್ಗದರ್ಶನದಲ್ಲಿ ಕರ್ನಾಟಕದಲ್ಲಿ ಮಾವು ಕೃಷಿಯ ಆರ್ಥಿಕ ವಿಶ್ಲೇಷಣೆ ಕುರಿತು ಅವರು ಮಂಡಿಸಿದ ಪ್ರೌಢ ಪ್ರಬಂಧವನ್ನು ಕುವೆಂಪು ವಿಶ್ವವಿದ್ಯಾಲಯ ಪಿ.ಎಚ್.ಡಿ.ಪದವಿಗೆ ಮಾನ್ಯ ಮಾಡಿದೆ.
ಆಶಾ.ಎ ಅವರಿಗೆ ಪಿಎಚ್.ಡಿ. ಪದವಿ
ಶಿವಮೊಗ್ಗ ತಾಲೂಕಿನ ಚಿಲಕಾದ್ರಿಹಳ್ಳಿ ಹರಿಗೆ ಗ್ರಾಮದ ಅಂಜನಪ್ಪ ಹಾಗೂ ಮಂಜುಳಮ್ಮರವರ ಪುತ್ರಿ ಆಶಾ.ಎ ಅವರಿಗೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿ ನೀಡಿದೆ. ಕುವೆಂಪು ವಿಶ್ವವಿದ್ಯಾಲಯದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ವಿಭಾಗದ ಡಾ.ಪ್ರಕಾಶ ಬಿ.ಎನ್ ಮಾರ್ಗದರ್ಶನದಲ್ಲಿ ಬಿ.ಜಿ.ಎಲ್.ಸ್ವಾಮಿ ಸಾಹಿತ್ಯ : ಬಹುಮುಖಿ ನೆಲೆಗಳು ಕುರಿತು ಅವರು ಮಂಡಿಸಿದ ಪ್ರೌಢ ಪ್ರಬಂಧವನ್ನು ಕುವೆಂಪು ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿಗೆ ಮಾನ್ಯ ಮಾಡಿದೆ.
SUMMARY | Kuvempu University is awarding PhD degrees to two people from Chitradurga and one from Shivamogga. The details are as follows:
KEY WORDS |Kuvempu University ,PhD degree, Chitradurga , Shivamogga.