SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 23, 2024
ಪುರದಾಳ್ನಲ್ಲಿ ಆನೆಗಳ ದಾಳಿ
ಶಿವಮೊಗ್ಗದ ಪುರದಾಳು ಗ್ರಾಮದಲ್ಲಿ ಎರಡು ಕಾಡಾನೆಗಳು ರೈತ ತೋಟಕ್ಕೆ ದಾಳಿ ಇಟ್ಟಿವೆ. ಇಲ್ಲಿನ ರಾಜೇಶ್ ಹಾಗೂ ಬೀರಪ್ಪ, ನಾಗರಾಜ್ ಎಂಬುವರ ತೋಟ-ಹೊಲಗಳ ಕಾಡಾನೆ ದಾಳಿ ನಡೆಸಿದ್ದು ಅಡಿಕೆ ಹಾಗೂ ತೆಂಗಿನ ಮರ ನಾಶವಾಗಿವೆ. ಅಲ್ಲದೆ ಇಲ್ಲಿಯೇ ಹೊಲದಲ್ಲಿ ಬೆಳಸಿದ್ದ ಜೋಳ ಹಾಗೂ ಕಬ್ಬು ಬೆಳೆಯು ಸಹ ಕಾಡಾನೆಗಳ ದಾಳಿಯಲ್ಲಿ ಪೂರ್ತಿ ಮಣ್ಣುಪಾಲಾಗಿದೆ.
ಬೆಳೆ ಕಳೆದುಕೊಂಡ ರೈತರು ತಮಗೆ ಪರಿಹಾರ ಕೊಡಿಸಿ ಎಂದು ಅಲವತ್ತುಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಗ್ರಾಮಸ್ಥರು ಆನೇ ಕಾಟಕ್ಕೆ ಅರಣ್ಯ ಅಧಿಕಾರಿಗಳು ತಡೆ ಹಾಕುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಚಂದ್ರಶೇಖರ್ ಕುಟುಂಬಕ್ಕೆ ಪರಿಹಾರ
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕರಾಗಿದ್ದ ಮೃತ ಚಂದ್ರಶೇಖರ್ ಮನೆಗೆ ಕೆ ಎಸ್ ಈಶ್ವರಪ್ಪ ಭೇಟಿ ನೀಡಿ ಅವರಿಗೆ ಪರಿಹಾರ ಸಿಕ್ಕಿರುವ ಬಗ್ಗೆ ಮಾಧ್ಯಗಳೊಂದಿಗೆ ಮಾತನಾಡಿದರು. ಚಂದ್ರಶೇಖರ್ ಕುಟುಂಬಕ್ಕೆ 25 ಲಕ್ಷ ಪರಿಹಾರ ಕೊಡ್ತೀವಿ ಅಂತಾ ಸಿಎಂ ಹೇಳಿದ್ರು, ನಾವು ಕೊಡಲೇಬೇಕು ಎಂದು ಒತ್ತಡ ಹಾಕಿದ್ದೆವು, ಇದೀಗ ನಿಗಮದ ಎಂಡಿ ಚೆಕ್ ತೆಗೆದುಕೊಳ್ಳೋಕೆ ನಾಳೆ ಬೆಂಗಳೂರಿಗೆ ಬರಲು ತಿಳಿಸಿದ್ದಾರೆ.ಇನ್ನೊಂದೆಡೆ ಅಟ್ರಾಸಿಟಿ ಕೇಸ್ ದಾಖಲಾಗಿರುವ ಹಿನ್ನೆಲೆ ಜಿಲ್ಲಾಧಿಕಾರಿಗಳಿಂದ 8 ಲಕ್ಷ 25 ಸಾವಿರ ಕವಿತಾ ಅವರ ಅಕೌಂಟ್ಗೆ ಬಂದಿದೆ , ಇನ್ನೂ ಚಂದ್ರಶೇಖರ್ರವರ ಮಗನಿಗೆ ಹೋಟಲ್ ಮ್ಯಾನೇಜ್ಮೆಂಟ್ನಲ್ಲಿ ಕೆಲಸಕೊಡಿಸುವ ಭರವಸೆಯನ್ನು ನೀಡಿದ್ದಾರೆ ಎಂದು ತಿಳಿಸಿದರು
ಅ.3ರಿಂದ 20ರವರೆಗೆ ರಾಜ್ಯದ ಶಾಲೆಗಳಿಗೆ ದಸರಾ ರಜೆ
ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲಾ ಮಕ್ಕಳಿಗೆ ಇದೇ ಅಕ್ಟೋಬರ್ 3 ರಿಂದ 20ರವರೆಗೆ ನಾಡಹಬ್ಬ ದಸರಾ ನಿಮಿತ್ತ ರಜೆ ಘೋಷಿಸಿದೆ. ರಾಜ್ಯದ ಎಲ್ಲಾ ಶಾಲೆಗಳಿಗೆ ಒಂದೇ ರೀತಿಯ ಮಾರ್ಗದರ್ಶಿ ರೂಪಿಸಲಾಗಿದೆ. ಈ ಹಿಂದೆ ಕರಾವಳಿ ಭಾಗದಲ್ಲಿ ದಸರಾ ರಜೆಯಲ್ಲಿ ಕೊಂಚ ಮಾರ್ಪಾಡು ಆಗುತ್ತಿತ್ತು. ಆದರೆ ಈ ಬಾರಿ ಯಾವುದೇ ಮಾರ್ಪಾಡು ಆಗಿಲ್ಲ. ಬರುವ ಅಕ್ಟೋಬರ್ 3 ರಿಂದ 20ರವರೆಗೆ ಅಂದರೆ 17 ದಿನಗಳ ಕಾಲ ದಸರಾ ರಜೆ ಸಿಗಲಿದೆ. ಅಕ್ಟೋಬರ್ 21ರಿಂದ ಶೈಕ್ಷಣಿಕ ಸಾಲಿನ 2ನೇ ಅವಧಿಯು ಪ್ರಾರಂಭವಾಗಲಿದೆ. ಈ ಅವಧಿ 2025ರ ಏಪ್ರಿಲ್10 ತನಕ ಇರಲಿದೆ.