SHIVAMOGGA | MALENADUTODAY NEWS | ಮಲೆನಾಡು ಟುಡೆ Oct 24, 2024
ಶಿವಮೊಗ್ಗ | ಗೂಗಲ್ ಸರ್ಚ್‌ನಲ್ಲಿ ಸಿಕ್ಕಿದ್ದೆಲ್ಲವೂ ವರ್ಜಿನಲ್ ಆಗಿರುವುದಲ್ಲ. ಫೆಕ್ ಐಟಮ್‌ಗಳು ಸಹ ಗೂಗಲ್ ಹುಡುಕಾಟದಲ್ಲಿ ಕಾಣಿಸಿಕೊಳ್ಳುತ್ತಿರುತ್ತವೆ. ಅಂತಹದ್ದನ್ನ ನಂಬಿ ಮಹಿಳೆಯೊಬ್ಬರು 9.19 ಲಕ್ಷ ರೂಪಾಯಿ ಕಳೇದುಕೊಂಡ ಬಗ್ಗೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಕೇಸ್ |
ಶಿವಮೊಗ್ಗದ ಶಿಕ್ಷಕಿಯೊಬ್ಬರು ಗೂಗಲ್ ನಲ್ಲಿ ಯೂನಿಯನ್ ಬ್ಯಾಂಕ್ ನ ಮ್ಯಾನೇಜರ್ಸ್ ನಂಬರ್ ಹುಡುಕಿದ್ದಾರೆ. ಹೀಗೆ ಹುಡುಕಿ ಸಿಕ್ಕ ನಂಬರ್‌ಗೆ ಅವರು ಕರೆ ಮಾಡಿದ್ದಾರೆ.
ಆಕಡೆಯಿಂದ ಫೋನ್ ರಿಸಿವ್ ಮಾಡಿದವರು ಸಹ ಹೌದು ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಮಾತನಾಡುತ್ತಿರುವುದು, ನಿಮಗೆ ಯಾವ ಮಾಹಿತಿ ಬೇಕಿದೆ ಎಂದೆಲ್ಲಾ ಕೇಳಿ, ಶಿಕ್ಷಕಿಯವರ ಅನುಮಾನಗಳನ್ನ ಬಗೆಹರಿಸಿದ್ದಾನೆ.
ಆನಂತ ಆಪ್ ಒಂದನ್ನ ಇನ್‌ಸ್ಟಾಲ್ ಮಾಡಲು ಹೇಳಿದ ಫೇಕ್ ಮ್ಯಾನೆಜರ್, ನಿಮ್ಮ ಚೆಕ್ ಕ್ಲಿಯರ್ ಆಗಲು 24 ಗಂಟೆ ಬೇಕು ಎಂದಿದ್ದಾನೆ. ಬಳಿಕ 24 ಗಂಟೆಯ ಒಳಗಾಗಿ 11 ಸಲ ಶಿಕ್ಷಕಿಯ ಅಕೌಂಟ್‌ನಿಂದ ಬೇರೆ ಬೇರೆ ಅಕೌಂಟ್‌ಗಳಿಗೆ ಹಣವನ್ನ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಈ ವಿಚಾರ ಗೊತ್ತಾಗಿ ಶಿಕ್ಷಕಿಯವರು ಇದೀಗ ತಮ್ಮ ಹಣ ಒದಗಿಸುವಂತೆ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
SUMMARY | A case has been registered at CEN police station in connection with the duping of Rs 9 lakh teacher who searched for the bank manager’s number on Google search.
KEYWORDS | case has been registered, CEN police station ,duping of Rs 9 lakh , teacher ,bank manager number ,Google search,