SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 21, 2024 by vijayendra
ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಪದೇ ಪದೇ ಹಿಂದು ಸಂಘಟನೆ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜ್ಯದಾದ್ಯಂತ ಗಣೇಶ ವಿಸರ್ಜನೆ ಬಹಳ ಅರ್ಥ ಪೂರ್ಣವಾಗಿ ದೊಡ್ಡ ಮಟ್ಟದಲ್ಲಿ ನಡೆಯುತ್ತದೆ, ಆದರೆ ಗಣಪತಿ ಮೆರವಣಿಗೆ ಮೇಲೆ ಕಲ್ಲು ತೂರಾಟದಂತಹ ಘಟನೆಗಳು ನಡೆಯುತ್ತಿವೆ, ನಾಗಮಂಗಲ, ದಾವಣಗೆರೆಯಲ್ಲಿ ಈಂತಹ ಘಟನೆಗಳು ನಡೆದಿವೆ ಎಂದು ಕಳವಳ ವ್ಯಕ್ತಪಡಿಸಿದರು.
ತುಮಕೂರು ವಿವಿ ವಿರುದ್ಧ ಆಕ್ರೋಶ
ತುಮಕೂರಿನಲ್ಲಿ ಪೊಲೀಸರು ಕುಲಸಚಿವರಿಗೆ ಪತ್ರ ಬರೆದು ಗಣಪತಿ ಮೆರವಣಿಗೆಗಳಿಗೆ ವಿದ್ಯಾರ್ಥಿಗಳನ್ನ ಕಳುಹಿಸಬಾರದು ಎಂದು ಕೋರುತ್ತಾರೆ. ಈ ಸಂಬಂಧ ವಿವಿಯಿಂದ ವಿದ್ಯಾರ್ಥಿಗಳು ಗಣಪತಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಬಾರದು ಎಂದು ಸುತ್ತೋಲೆ ಹೊರಡಿಸಲಾಗಿದೆ. ಹಿಂದು ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಸರ್ಕಾರ ನಡೆದುಕೊಳ್ಳುತ್ತಿದೆ ಎಂಬುದಕ್ಕೆ ಈ ಪ್ರಕರಣ ನಿದರ್ಶನವಾಗಿದೆ. ಈ ಸಂಬಂಧ ಕೂಡಲೇ ತುಮಕೂರು ವಿವಿ ಕುಲಸಚಿವರು ಸುತ್ತೋಲೆಯನ್ನ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಹಿಂದೂಗಳ ಭಾವನೆಗೆ ಧಕ್ಕೆ
ಇದೇ ವೇಳೆ ಹಲೆವೆಡೆ ಪ್ಯಾಲೆಸ್ತೈನಿ ಧ್ವಜ ಹಾರಿಸಲಾಗುತ್ತಿದೆ, ಮುಂದಿನ ದಿನಗಳಲ್ಲಿ ಪಾಕಿಸ್ತಾನದ ಧ್ವಜ ಹಾರಿಸುತ್ತಾರೆ ಎಂದು ಆಕ್ರೋಶ ಹೊರಹಾಕಿದ ಬಿವೈ ವಿಜಯೇಂದ್ರ ಸರ್ಕಾರದ ಧೋರಣೆಯಿಂದ ಇಂತಹ ಘಟನೆ ನಡೆಯುತ್ತಿವೆ ಎಂದು ದೂರಿದರು.
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ