SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 23, 2025
ಶಿವಮೊಗ್ಗ | ಮಲೆನಾಡು ಎಂದರೆ ಕೇವಲ ಇಲ್ಲಿನ ನೈಸರ್ಗಿಕ ಸೌಂದರ್ಯ ಪ್ರವಾಸಿ ಸ್ಥಳಗಳಿಗೆ ಪ್ರಸಿದ್ದವಾಗಿರದೇ ಇಲ್ಲಿನ ಬೆಳೆಗಳು ಬೇಸಾಯ ಪದ್ಧತಿ ಹಾಗೂ ಇಲ್ಲಿನ ಜನಜೀವನ ಕ್ರಮಕ್ಕೂ ಪ್ರಸಿದ್ಧವಾಗಿದೆ.ಇಲ್ಲಿನ ರೈತರು ಅನೇಕ ಸಮಸ್ಯೆಗಳ ನಡುವೆ ಇಂದಿಗೂ ಜೀವನ ಸಾಗಿಸುತ್ತಿದ್ದು ಅಂತಹ ರೈತರಿಗೆ ಜೀವ ತುಂಬಿದ್ದು ಅಡಿಕೆ ಬೆಳೆ ಎನ್ನಬಹುದು.ಅಡಿಕೆ ಎಂಬುದು ಇಲ್ಲಿನ ರೈತರ ಜೀವನಾಡಿಯಾಗಿ ಮಲೆನಾಡಿನ ಪ್ರಮುಖ ಬೆಳೆಯಾಗಿ ಆಧುನಿಕ ಜೀವನದ ಆದಾಯದ ಮುಖ್ಯ ಮೂಲವಾಗಿದೆ.
ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಅಡಿಕೆ ಬೆಳೆಯನ್ನು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕ್ಯಾಸನೂರು ಗ್ರಾಮದಲ್ಲಿ ಬೆಳೆಯಲಾಯಿತು.ಅಡಿಕೆಗಳಲ್ಲಿ ಹಲವಾರು ರೀತಿಯ ತಳಿಗಳು ಇದ್ದರೂ ಸಹ ಮೊದಲ ಅಡಿಕೆ ಬೆಳೆಯಿಂದ ಇಂದಿಗೂ ಸಹ ತನ್ನ ಅಧಿಕ ಇಳುವರಿ ಮತ್ತು ಉತ್ತಮ ಗುಣಮಟ್ಟದ ಗುಣದೊಂದಿಗೆ ತನ್ನ ಪ್ರಾಮುಖ್ಯತೆ ಉಳಿಸಿಕೊಂಡಿರುವ ತಳಿ ಎಂದರೇ ಅದು ಕ್ಯಾಸನೂರು ತಳಿ ಎನ್ನಬಹುದು.ಇಂದು ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆ ಮತ್ತು ರೈತರ ಆದಾಯದ ಪ್ರಮುಖ ಮೂಲವಾಗಿ ಅಡಿಕೆ ಬೆಳೆ ರೂಪಾಂತರಗೊಂಡಿದೆ.ಆದರೆ ಇಂದಿಗೂ ಸಹ ಅಡಿಕೆ ಬೆಳೆಗಳ ತಳಿಗಳ ಬಗ್ಗೆ ಸರ್ಕಾರ ಯಾವುದೇ ಸಂಶೋಧನೆ ಕೈಗೊಳ್ಳದೇ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಸರ್ಕಾರ ಈ ತಳಿಗಳ ಅಭಿವೃದ್ಧಿಗೆ ಗಮನ ಹರಿಸುವ ಅವಶ್ಯಕತೆಯಿದ್ದು ಸ್ಥಳೀಯರು ಸರ್ಕಾರವನ್ನು ಒತ್ತಾಯಿಸಿದ್ದಾರೆ.


ಕ್ಯಾಸನೂರು ತಳಿ ಅಡಿಕೆ ಸಸಿಗೆ ವಿಶೇಷ ಬೇಡಿಕೆ
ಎಷ್ಟೇ ರೀತಿಯ ಅಡಿಕೆ ತಳಿಗಳು ಸಹ ಇದ್ದರೂ ಇಂದಿಗೂ ಸಹ ಕ್ಯಾಸನೂರು ತಳಿ ಅಡಿಕೆ ಸಸಿಗೆ ಬಹು ಬೇಡಿಕೆ ಇದ್ದು ಮಲೆನಾಡಿನ ಸುತ್ತಮುತ್ತಲೂ ಅಷ್ಟೇ ಅಲ್ಲದೇ ಬಯಲುಸೀಮೆಯಲ್ಲೂ ಸಹ ತನ್ನ ತಳಿಯನ್ನು ವಿಸ್ತರಿಸಿಕೊಂಡಿದೆ. ಇಂತಹ ಆಧುನಿಕ ಉದ್ಯಮ ಯುಗದಲ್ಲಿಯೂ ಉತ್ತಮ ಗುಣಮಟ್ಟಕ್ಕೆ ಆದ್ಯತೆ ನೀಡಿ ಇಂದಿಗೂ ಸಸಿ ಬೆಳೆದು ಸ್ಪರ್ಧಾತ್ಮಕ ದರದಲ್ಲಿ ನೀಡುತ್ತಿರುವ ಇಲ್ಲಿನ ಸ್ಥಳೀಯರ ಕಾರ್ಯ ಮೆಚ್ಚುವಂತದ್ದು ಎನ್ನಬಹುದು.
ಅಡಿಕೆಯ ಜನ್ಮಸ್ಥಳ ಆಗಿರುವ ಕ್ಯಾಸನೂರಿನ ಅಡಿಕೆ ತಳಿಗೆ ಸರ್ಕಾರ ಅನುದಾನ ಮೀಸಲಿಡುವ ಮೂಲಕ ಅಭಿವೃದ್ಧಿ ಪಡಿಸಿ ಸಂರಕ್ಷಿಸಬೇಕು.ಕೇಂದ್ರ ಸರ್ಕಾರ ಅಡಿಕೆ ಸಂಶೋಧನಾ ಕೇಂದ್ರವನ್ನು ಕ್ಯಾಸನೂರು ಗ್ರಾಮದಲ್ಲಿಯೇ ಸ್ಥಾಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂಬುವುದು ಯುವ ಮುಖಂಡರಾದ ವಿಕಾಸ್ ಕ್ಯಾಸನೂರುರವರ ಅಭಿಪ್ರಾಯ.
SUMMARY | Though there are several varieties of DKs, the kasanur variety is the one that has retained its importance from the first arecanut crop to today with its high yield and high quality quality
KEYWORDS | arecanut, kasanur variety, soraba,