SHIVAMOGGA | MALENADUTODAY NEWS | ಮಲೆನಾಡು ಟುಡೆ Oct 17, 2024
ತೀರ್ಥಹಳ್ಳಿ | ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ತಹಶೀಲ್ದಾರ್ ಜಕ್ಕಣ್ಣ ಗೌಡರ್ ಅವರು ಬೆಂಗಳೂರಿನಲ್ಲಿ ಸಾವನ್ನಪ್ಪಿದ್ದಾರೆ. ಹೃದಯಾಘಾತದಿಂದ ಅವರು ಸಾವನ್ನಪ್ಪಿರುವುದಾಗಿ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಏನಾಯ್ತು?
ಕೋರ್ಟ್ ಸಂಬಂಧಿ ಕೆಲಸ ಮೇರೆಗೆ ಎರಡು ದಿನಗಳ ಹಿಂದೆ ತೀರ್ಥಹಳ್ಳಿ ತಹಶೀಲ್ದಾರ್ ಜಕ್ಕಣ್ಣಗೌಡರ್ ಬೆಂಗಳೂರಿಗೆ ತೆರಳಿದ್ದರು. ಅಲ್ಲಿ ಕೋರ್ಟ್ ಕೆಲಸವನ್ನು ಮುಗಿಸಿಕೊಂಡು ನರ್ತಕಿ ಥಿಯೇಟರ್ ಸಮೀಪದಲ್ಲಿರುವ ಲಾಡ್ಜ್ ಒಂದರಲ್ಲಿ ತಂಗಿದ್ದರು. ಈ ನಡುವೆ ಅವರ ಮನೆಯವರು ನಿನ್ನೆ ಬುಧವಾರ ತಹಶೀಲ್ದಾರ್‌ರವರಿಗೆ ಫೋನ್ ಕಾಲ್ ಮಾಡಿದ್ದಾರೆ. ಆ ಕಡೆಯಿಂದ ಯಾವುದೇ ರೆಸ್ಪಾನ್ಸ್ ಇರದ ಕಾರಣ ಆತಂಕಗೊಂಡು ಬೆಂಗಳೂರಿನಲ್ಲಿ ತಿಳಿದವರ ಮೂಲಕ ಪರಿಶೀಲಿಸಿದ್ದಾರೆ. ಹೀಗೆ ಪರಿಶೀಲಿಸಿದಾಗ ಜಕ್ಕಣ್ಣ ಗೌಡ್‌ರವರು ರೂಮ್‌ನಲ್ಲಿ ಸಾವನ್ನಪ್ಪಿರುವುದು ಗೊತ್ತಾಗಿದೆ.
ಮೂಲತಹ ಗದಗ ಜಿಲ್ಲೆಯವರಾದ ಜಕ್ಕಣ್ಣಗೌಡರು ತೀರ್ಥಹಳ್ಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು


SUMMARY | Jakkanna Goudar, tahsildar of Thirthahalli taluk in Shivamogga district, died in Bengaluru. Preliminary information is available that he died of a heart attack.
KEYWORDS | Jakkanna Goudar, tahsildar of Thirthahalli taluk, in Shivamogga district, died in Bengaluru, heart attack