SHIVAMOGGA | MALENADUTODAY NEWS | ಮಲೆನಾಡು ಟುಡೆ Oct 18, 2024
ಶಿವಮೊಗ್ಗ | ಶಿವಮೊಗ್ಗ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದುರುಗಡೆಯಿರುವ ಮನೆಯೊಂದರ ಆವರಣದಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ.
ಕಳೆದ ಅಕ್ಟೋಬರ್ 16 ರಂದು ಪತ್ತೆಯಾದ ವ್ಯಕ್ತಿಯ ಗುರುತು ಇದುವೆರೆಗೂ ಪತ್ತೆಯಾಗಿಲ್ಲ.ಹೀಗಾಗಿ ಈ ಸಂಬಂಧ ಕೋಟೆ ಪೊಲೀಸ್ ಠಾಣೆ ಪೊಲೀಸರು ಗುರುತು ಪತ್ತೆಗಾಗಿ ಪ್ರಕಟಣೆಯನ್ನ ಹೊರಡಿಸಿದ್ದಾರೆ.
ಮೃತ ವಕ್ತಿಯು ಸುಮಾರು 30 ರಿಂದ 35 ವರ್ಷದನಾಗಿದ್ದಾನೆ. ಅನಾರೋಗ್ಯದಿಂದ ಮಲಗಿದ್ದಲ್ಲೇ ಮೃತಪಟ್ಟಿದ್ದು, ಈತನ ಚಹರೆ ಸುಮಾರು 05.05 ಅಡಿ ಎತ್ತರ, ಗೋದಿ ಮೈಬಣ್ಣ, ತಳ್ಳನೆಯ ಮೈಕಟ್ಟು ತಲೆಯಲ್ಲಿ 2 ಇಂಚು ಉದ್ದದ ಕಪ್ಪು ಬಿಳಿ ಮಿಶ್ರಿತ ಕೂದಲು ಹಾಗೂ 1 ಇಂಚು ಉದ್ದದ ಕುರುಚಲು ಗಡ್ಡ ಇರುತ್ತದೆ, ಮೃತನ ಮೈಮೇಲೆ ತಿಳಿ ನೀಲಿ ಬಣ್ಣದ ತುಂಬು ತೋಳಿನ ಶರ್ಟ್ ಹಾಗೂ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುದ್ದಾನೆ
ಈ ಮೃತನ ಹೆಸರು ವಾರಸ್ಸುದಾರರು ಮತ್ತು ವಿಳಾಸ ಪತ್ತೆಯಾಗಿರುವುದಿಲ್ಲ, ಈ ವ್ಯಕ್ತಿಯ ವಾರಸ್ಸುದಾರರು ಪಡೆಯಾದಲ್ಲಿ ಕೋಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಇನ್ಸೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
SUMMARY | The body of a man was found in the premises of a house opposite Kote Anjaneyaswamy Temple in Shivamogga city.
KEYWORDS | body of a man was found , Kote Anjaneya Swamy Temple in Shivamogga , kote police station shivamogga