ಕಾಮನ್‌ ಮ್ಯಾನ್‌ ಪೋಸ್ಟ್‌ಗೆ ಖಡಕ್‌ ರಿಪ್ಲೆ ಮಾಡಿದ shivamogga traffic police | 6 ಚಾಲಕರಿಗೆ ಡ್ರಂಕ್‌& ಡ್ರೈವ್‌ ಫೈನ್‌ | ಎಸ್‌ಪಿ ಟ್ವೀಟ್‌!

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 23, 2025 ‌‌ 

ಶಿವಮೊಗ್ಗ ಟ್ರಾಫಿಕ್‌ ಪೊಲೀಸ್‌ ರಸ್ತೆ ರಸ್ತೆಯಲ್ಲಿ ಫೈನ್‌ ಹಾಕುವುದರ ಜೊತೆಯಲ್ಲಿ ಒಂದಷ್ಟು ಉತ್ತಮ ಹಾಗೂ ಜಾಗೃತಿ ಕೆಲಸಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಇದೀಗ ಮಕ್ಕಳಿಗೆ ಹೆಲ್ಮೆಟ್‌ ಹಾಕುವುದರ ಬಗ್ಗೆ ಶಿವಮೊಗ್ಗ ಟ್ರಾಫಿಕ್‌ ಪೊಲೀಸ್‌ ದೊಡ್ಡ ಅಭಿಯಾನವನ್ನೆ ನಡೆಸ್ತಿದೆ. ಇದರ ನಡುವೆ ಇದೀಗ ಹೇಳುತ್ತಿರುವ ವಿಷಯ ಅಂದರೆ, ಶಿವಮೊಗ್ಗ ಟ್ರಾಫಿಕ್‌ ಪೊಲೀಸರು ಜನರ ಸಮಸ್ಯೆಗಳನ್ನು ಸೋಶಿಯಲ್‌ ಮೀಡಿಯಾದಲ್ಲಿಯು ಆಲಿಸಿ ಕ್ವಿಕ್‌ ರಿಪ್ಲೆ ನೀಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ನಡೆದ ಘಟನೆಯ ವಿವರ ಹೀಗಿದೆ. 

ಸೋಶಿಯಲ್‌ ಮಿಡಿಯಾ ಎಕ್ಸ್‌ನಲ್ಲಿ ವ್ಯಕ್ತಿಯೊಬ್ಬರು ಶಿವಮೊಗ್ಗ ನಗರದ ಸಿಗ್ನಲ್‌ವೊಂದರಲ್ಲಿ ಲೈಟ್‌ಗೆ ಅಡ್ಡಲಾಗಿ ಕಟ್ಟಿದ್ದ ಬ್ಯಾನರ್‌ವೊಂದರ ಪೋಸ್ಟ್‌ನ ಪೋಟೋ ಹಾಕಿ, ಈ ರೀತಿಯಲ್ಲಿ ಪೋಸ್ಟ್‌ ಹಾಕಲು ಹೇಗೆ ಅವಕಾಶ ನೀಡಲಾಗುತ್ತಿದೆ ಎಂದು ಪ್ರಶ್ನಿಸಿದ್ದರು. ಈ ಬಗ್ಗೆ ತಕ್ಷಣವೇ  ಶಿವಮೊಗ್ಗ ಟ್ರಾಫಿಕ್‌ ಪೊಲೀಸರು ಪ್ರತಿಕ್ರಿಯಿಸಿದ್ದು, ತಕ್ಷಣವೇ ಸರ್ಕಲ್‌ಗೆ ತೆರಳಿ, ಅಲ್ಲಿ ಪಾದಚಾರಿಗಳಿಗಾಗಿ ಇರುವ ಟ್ರಾಫಿಕ್‌ ಸಿಗ್ನಲ್‌ಗೆ ಅಡ್ಡಲಾಗಿ ಕಟ್ಟಿದ್ದ ಬ್ಯಾನರ್‌ ತೆಗೆಸಿದ್ದಾರೆ. ಅಲ್ಲದೆ ಈ ಬಗ್ಗೆ ಟ್ವೀಟ್‌ ಮಾಡಿದವರು ಪ್ರತಿಕ್ರಿಯಿಸಿ ಬ್ಯಾನರ್‌ ತೆಗೆಯಲಾಗಿದೆ ಎಂದು ತಿಳಿಸಿದ್ದಾರೆ.

ಡ್ರಂಕ್‌ & ಡ್ರೈವ್‌ ಆರು ಮಂದಿಗೆ ಫೈನ್‌

ಇನ್ನೊಂದೆಡೆ ಶಿವಮೊಗ್ಗ ಎಸ್‌ಪಿ ಮಿಥುನ್‌ ಕುಮಾರ್‌ ಮಧ್ಯಪಾನ ಮಾಡಿ ವಾಹನ ಚಲಾಯಿಸಿದ ಆರು ಮಂದಿ ಚಾಲಕರಿಗೆ ಕೋರ್ಟ್‌ ದಂಢ ವಿಧಿಸಿದಿರುವ ವಿಚಾರವನ್ನು ಫೋಟೋ ಮೂಲಕ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆರು ಮಂದಿ ಚಾಲಕರಿಗೆ ಎಷ್ಟು ದಂಡ ವಿಧಿಸಲಾಗಿದೆ ಎಂಬ ಮಾಹಿತಿ ಫೋಟೋದಲ್ಲಿ ಕಾಣುತ್ತಿಲ್ಲ. ಆರು ಚಲನ್‌ಗಳನ್ನು ಹೊಂದಿರುವ ಇಮೇಜ್‌ನ್ನು ಷೇರ್‌ ಮಾಡಿರುವ ಅವರು ಈ ಮೂಲಕ ಡ್ರಂಕ್‌ ಅಂಡ್‌ ಡ್ರೈವ್‌ಗೆ  ಅವಕಾಶ ಇಲ್ಲ ಎಂಬ ಸಂದೇಶ ನೀಡಿದ್ದಾರೆ. 

SUMMARY | shivamogga traffic police 

KEY WORDS |‌ shivamogga traffic police 

Share This Article