SHIVAMOGGA | MALENADUTODAY NEWS | ಮಲೆನಾಡು ಟುಡೆ Jan 20, 2025
ಚಿಕ್ಕಮಗಳೂರು ಜಿಲ್ಲೆಯಲಲ್ಲಿ ಶಿಕಾರಿ ಮಾಡಿ ಅದರ ಮಾಂಸ ಬಿಡಿಸುತ್ತಿದ್ದ ವೇಳೆ ಅರಣ್ಯ ಅಧಿಕಾರಿಗಳು ರೇಡ್ ಮಾಡೋ ಓರ್ವವನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಎರಡು ಬಂದೂಕು ಜಪ್ತಿ ಮಾಡಿದ್ದಾರೆ.
ಅರಣ್ಯ ಸಂಚಾರಿ ದಳ ಈ ಕಾರ್ಯಾಚರಣೆ ನಡೆಸಿದೆ. ವಾಹನ ಸಹಿತ ಎರಡು ಕೋವಿ ವಶಪಡಿಸಿಕೊಂಡಿರುವ ಅರಣ್ಯ ಸಿಬ್ಬಂದಿ, ತೋಟವೊಂದರ ರೈಟರ್‌ನನ್ನ ವಶಕ್ಕೆ ಪಡೆದಿದ್ದಾರೆ.
ಏನಿದು ಘಟನೆ | ಚಿಕ್ಕಮಗಳೂರು ವಲಯದ ಅತ್ತಿಗಿರಿ ಸೆಕ್ಷನ್, ತೋಗರಿಹಂಕಲ್ ಗ್ರಾಮದ ಕೂತನ್ಕುಲ್ ಎಸ್ಟೇಟ್ ನಲ್ಲಿನ ತೋಟದ ರೈಟರ್ ದೇವಯ್ಯ ಕಡವೆ ಶಿಖಾರಿ ಮಾಡಿದ್ದ.
ಬಳಿಕ ಅದರ ಮಾಂಸವನ್ನು ತುಂಡು ಮಾಡುತ್ತಿದ್ದ. ಎಸ್ಟೇಟ್ ಆದ್ದರಿಂದ ಆತ ಯಾರು ಬರುವುದಿಲ್ಲ ಎಂದುಕೊಂಡಿದ್ದ. ಆದರೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ, ಸ್ಥಳದ ಮೇಲೆ ರೇಡ್ ಮಾಡಿದ್ದಾರೆ.
ಅಲ್ಲದೆ ಅಂದಾಜು 40 ಕೆ.ಜಿ ಮಾಂಸ ಮತ್ತು ಚರ್ಮ, ಚೂರಿ ಹಾಗೂ ಬೇಟೆಗೆ ಬಳಸುತ್ತಿದ್ದ 2 ಕೋವಿಗಳನ್ನು ವಶಕ್ಕೆ ಪಡೆದಿದ್ದಾರೆ.ಪೊಲೀಸರು ವನ್ಯಜೀವಿ ಹಾಗೂ ಅರಣ್ಯ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿದ್ದಾರೆ.
SUMMARY | Chikmagalur Forest Patrol personnel arrest accused of poaching
KEY WORDS | Chikmagalur Forest Patrol personnel, stag poaching