SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 7, 2024 | SHIVAMOGGA NEWS | ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹರಿಗೆ ಗ್ರಾಮ ವಾಸಿ ಗಾಯತ್ರಿ ಎಂಬ 51 ವರ್ಷದ ಮಹಿಳೆ ಅ.03 ರಂದು ಮನೆಯಿಂದ ಹೊರಗೆ ಹೋಗಿದ್ದು, ಈವರೆಗೂ ಮನೆಗೆ ವಾಪಾಸ್ಸಾಗಿರುವುದಿಲ್ಲ. ಹೀಗಾಗಿ ಈ ಸಂಬಂಧ ಪೊಲೀಸ್ ಇಲಾಖೆ ಅವರ ಗುರುತು ಪತ್ತೆಗಾಗಿ ಪ್ರಕಟಣೆ ನೀಡಿದೆ.
ಪ್ರಕಟಣೆಯ ವಿವರ
ಈಕೆಯ ಚಹರೆ ಸಮಾರು 5.00 ಅಡಿ ಎತ್ತರ, ದುಂಡುಮುಖ, ದಪ್ಪನೆಯ ಮೈಕಟ್ಟು, ಕನ್ನಡಕ ಧರಿಸಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಳದಿ ಬಣ್ಣದ ಸೀರೆ ಮತ್ತು ಹಳದಿ ಬಣ್ಣದ ರವಿಕೆ ಧರಿಸಿರುತ್ತಾರೆ.
ಈಕೆಯ ಕುರಿತು ಸುಳಿವು ದೊರೆತಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ದೂ.ಸಂ.: 08182-261418/ 261410/ 261422/ 9480803350 ಅಥವಾ ಕಂಟ್ರೋಲ್ ರೂಂ ನಂ. 100 ಗಳಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ. (ಭಾವಚಿತ್ರ ಲಗತ್ತಿಸಿದೆ)