SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 26, 2025
ಶಿವಮೊಗ್ಗ | ನಗರದ ಮದಾರಿ ಪಾಳ್ಯ 1ನೇ ಕ್ರಾಸ್ ವಾಸಿ ಬಸವರಾಜಪ್ಪ ಬಿನ್ ಪಕೀರಪ್ಪ ಎಂಬ 60 ವರ್ಷದ ವ್ಯಕ್ತಿ 2023ರಲ್ಲಿ ಎನ್.ಟಿ.ರಸ್ತೆಯ ಬಾಡಿಗೆ ಮನೆಯಿಂದ ಹೊರಗೆ ಹೋದವರು ಈವರೆಗೂ ವಾಪಸ್ಸು ಬಂದಿರುವುದಿಲ್ಲ.ಈತನ ಚಹರೆ 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ಉದ್ದ ಮುಖ, ಬಿಳಿ ಕೂದಲು ಹೊಂದಿರುತ್ತಾರೆ.
ಭದ್ರಾವತಿ ತಾಲೂಕು ದೊಡ್ಡಗೊಪ್ಪೆನಹಳ್ಳಿ ವಾಸಿ ಮಂಜುನಾಥ ಕೆ.ಬಿನ್. ಕುಬೇರಪ್ಪ ಎಂಬ 36 ವರ್ಷದ ವ್ಯಕ್ತಿ 2023ರಲ್ಲಿ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಿದ್ದು, ಆಸ್ಪತ್ರೆಯಿಂದ ಕಾಣೆಯಾಗಿದ್ದು ಈವರೆಗೂ ವಾಪಸ್ಸು ಬಂದಿರುವುದಿಲ್ಲ. ಈತನ ಚಹರೆ 5.7 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡುಮುಖ, ಗೋಧಿ ಮೈಬಣ್ಣ ಹೊಂದಿರುತ್ತಾರೆ.
ಈ ಇಬ್ಬರು ವ್ಯಕ್ತಿಗಳ ಸುಳಿವು ಪತ್ತೆಯಾದರೆ ದೊಡ್ಡಪೇಟೆ ಪೋಲಿಸ್ ಠಾಣೆ ಸಂಖ್ಯೆ 08182-261414, 9916882544 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೋಲಿಸ್ ಪ್ರಕಟಣೆ ತಿಳಿಸಿದೆ.
ಬ್ಯಾಂಕ್‌ಗೆ ಹೋಗಿಬರುತ್ತೇನೆಂದ ಮಹಿಳೆ ಕಾಣೆ
ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಮರಿಯಪ್ಪಗೌಡ ಎಂಬುವವರ ತಂಗಿ 60 ವರ್ಷದ ಯಶೋಧ ಬಿನ್ ನಾಗಪ್ಪಗೌಡ ಎಂಬುವವರು ನವಂಬರ್ 10 2024 ರಂದು ಮನೆಯಿಂದ ಬೆಳಿಗ್ಗೆ 11 ಗಂಟೆಗೆ ಕಮ್ಮರಡಿಯಲ್ಲಿರುವ ಕರ್ನಾಟಕ ಬ್ಯಾಂಕ್‌ಗೆ ಹೋಗಿ ಬರುತ್ತೇನೆಂದು ಹೋದವರು ಈವರೆಗೂ ವಾಪಾಸ್ಸು ಮನೆಗೆ ಬಂದಿರುವುದಿಲ್ಲ.
ಈಕೆಯ ಚಹರೆ 5.3 ಅಡಿ ಎತ್ತರ, ಗೋಧಿ ಮೈ ಬಣ್ಣ, ಬೆಕ್ಕಿನ ಕಣ್ಣು, ತಲೆಯಲ್ಲಿ ಬಿಳಿ ಕೂದಲು ಹೊಂದಿರುತ್ತಾರೆ. ಮನೆಯಿಂದ ಹೋಗುವಾಗ ಗುಲಾಬಿ ಬಣ್ಣದ ಸೀರೆ, ನೇರಳೆ ಬಣ್ಣದ ಬ್ಲೌಸ್ ಧರಿಸಿರುತ್ತಾರೆ. ಸ್ವಲ್ಪ ಬುದ್ದಿ ಮಾಂದ್ಯವಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ.
ಈ ಮಹಿಳೆಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ.ಸಂ. : ಶಿವಮೊಗ್ಗ – 08182-261400/- ತೀರ್ಥಹಳ್ಳಿ 08181 – 220388 ಮಾಳೂರು :- 9480803333 ಆಗುಂಬೆ 9480803314 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
SUMMARY | Basavarajappa bin Pakirappa, a 60-year-old man who moved out of his rented house on N.T. Road in 2023, has not returned.
KEYWORDS | missing, police, news,