SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 27, 2024 KARNATAKA RAIN | ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುಂದಿನ ಒಂದು ವಾರಗಳ ಮಳೆ ಮನ್ಸೂಚನೆಯ ವಿವರವನ್ನು ನೀಡಿದೆ. ಅದರ ಮಾಹಿತಿ ಗಮನಿಸುವುದಾದರೆ.
Karnataka State Natural Disaster Monitoring Centre
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, 27.09.2024 ರಿಂದ 05.10.2024 ರವರೆಗೆ ರಾಜ್ಯದ ಕರಾವಳಿ ಕರ್ನಾಟಕ ಮತ್ತು ಪಕ್ಕದ ಘಟ್ಟಗಳ ಪ್ರದೇಶಗಳು ಮಲೆನಾಡು ಜಿಲ್ಲೆಗಳಲ್ಲಿ ಹಗುರವಾದ ಅಥವಾ ಸಾಧಾರಣ ಮಳೆಯನ್ನು ಪಡೆಯಲಿದೆ
28 ಮತ್ತು 01 ಅಕ್ಟೋಬರ್ ಹೊರತುಪಡಿಸಿ ಅವಧಿಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ, ಆಯ್ದ ಪ್ರದೇಶಗಳಲ್ಲಿ ಮಳೆ ಕ್ಷೀಣಿಸಲಿದೆ
ಇನ್ನೂ ಸೆಪ್ಟೆಂಬರ್ 28 ರವರೆಗೆ, NIK ಉತ್ತರ ಒಳನಾಡು ಜಿಲ್ಲೆಗಳಲ್ಲಿ ಚದುರಿದಂತೆ ಅಲ್ಲಲ್ಲಿ ಮಳೆಯಾಗಲಿದೆ. 29 ಮತ್ತು 30 ನೇ ಸೆಪ್ಟೆಂಬರ್ ಮತ್ತು ಅಕ್ಟೋಬರ್ 02 ರಿಂದ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ.
SIK ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸೆಪ್ಟಂಬರ್ 27 ರವರೆಗೆ ಚದುರಿದ ಅತಿ ಹಗುರದಿಂದ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ ಮತ್ತು 28 ಮತ್ತು 29 ನೇ ತಾರೀಖು ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಅಕ್ಟೋಬರ್ 2 ರಿಂದ ಮಳೆ ಇನ್ನಷ್ಟು ಹೆಚ್ಚಾಗಲಿದೆ ಎಂದ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ