SHIVAMOGGA | MALENADUTODAY NEWS | ಮಲೆನಾಡು ಟುಡೆ Oct 23, 2024
ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳೆದ 20 ನೇ ತಾರೀಖು ಬ್ರೈಟ್ ಹೋಟೆಲ್ ಸಮೀಪ ವ್ಯಕ್ತಿಯೊಬ್ಬ ಜಗಳ ಬಿಡಿಸಲು ಬಂದಿದ್ದಕ್ಕೆ ಚಾಕುವಿನಿಂದ ಚುಚ್ಚಿ ಹಲ್ಲೆ ಮಾಡಲಾಗಿದೆ.
ಈ ಸಂಬಂಧ 21 ನೇ ತಾರೀಖು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ THE BHARATIYA NYAYA SANHITA (BNS), 2023 (U/s-118(1),115(2),3(5)) ಅಡಿಯಲ್ಲಿ ಕೇಸ್ ದಾಖಲಾಗಿದೆ.
ಶಿವಮೊಗ್ಗ ನಗರ ನಿವಾಸಿಯೊಬ್ಬರು ತಮ್ಮ ಸ್ನೇಹಿತರೊಬ್ಬರು ಕರೆದಿದ್ದಕ್ಕೆ ಬ್ರೈಟ್ ಹೋಟೆಲ್ ಬಳಿಗೆ ಬಂದು ಅವರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ದೂರುದಾರರ ಸ್ನೇಹಿತರ ಪರಿಚಯಸ್ಥ ಅಲ್ಲಿಗೆ ಬಂದಿದ್ದಾರೆ. ಅಲ್ಲದೆ ಅವರಿಬ್ಬರು ಪರಸ್ಪರ ಜಗಳವಾಡಿಕೊಂಡಿದ್ದಾರೆ. ಅವರಿಬ್ಬರ ಜಗಳವನ್ನ ದೂರುದಾರರು ಬಿಡಿಸಲು ಮುಂದಾಗಿ ನಾಲ್ಕು ಬುದ್ದಿ ಮಾತು ಹೇಳಿದ್ದಾರೆ.
ಇಷ್ಟಕ್ಕೆ ಸಿಟ್ಟಾದ ಅಪರಿಚಿತ ಸ್ನೇಹಿತನ ಪರಿಚಯಸ್ಥ ತನ್ನವರನ್ನ ಅಲ್ಲಿಗೆ ಫೋನ್ ಮಾಡಿ ಕರೆಸಿಕೊಂಡಿದ್ದಾನೆ. ಅಲ್ಲದೆ ತಮ್ಮ ನಡುವಿನ ಜಗಳ ಬಿಡಿಸಲು ಏಕೆ ಬಂದೆ ಎಂದು ದೂರುದಾರರ ಮೇಲೆ ಹಲ್ಲೆ ಮಾಡಿದ್ದಾರೆ. ಸಾಲದ್ದಕ್ಕೆ ಬೆನ್ನಿಗೆ ಚಾಕುವಿನಿಂದ ಚುಚ್ಚಿ ಎಸ್ಕೇಪ್ ಆಗಿದ್ದಾರೆ.

SUMMARY | Shivamogga: A man was stabbed near Bright Hotel in Doddapet police station limits on June 20 when he came to settle a dispute.
KEYWORDS | Shivamogga,Bright Hotel , Doddapett police station limits,