SHIVAMOGGA | MALENADUTODAY NEWS | ಮಲೆನಾಡು ಟುಡೆ Feb 10, 2025
ಶಿವಮೊಗ್ಗ ಜಿಲ್ಲೆ ಸಾಗರದಿಂದ ಹೊನ್ನಾವರಕ್ಕೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಅಪಘಾತವಾಗಿದ್ದು, ಹಲವರಿಗೆ ಸಣ್ಣಪುಟ್ಟ ಪೆಟ್ಟಾಗಿರುವ ಬಗ್ಗೆ ನಿನ್ನೆ ಸಂಜೆ ವರದಿಯಾಗಿದೆ.
ಬೆಂಗಳೂರು ಹೊನ್ನಾರವ ಹೈವೆ
ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಬೆಂಗಳೂರು ಹೊನ್ನಾವರ ಹೈವೆಯಲ್ಲಿ ಸಿಗುವ ಸೂಳೆಮುರ್ಕಿ ಕ್ರಾಸ್‌ಗಳಲ್ಲಿ ಆಕ್ಸಿಡೆಂಟ್ ಆಗಿದೆ. ಸಾಗರದಿಂದ ಹೊನ್ನಾವರಕ್ಕೆ ಹೊರಟಿಸಿದ್ದ ಬಸ್‌ನಲ್ಲಿ 49 ಪ್ರಯಾಣಿಕರಿದ್ದರು. ಬಸ್ ಸಾಗರದಿಂದ ಹೊರಟು, ಮಾವಿನಗುಂಡಿಯಿಂದ ಇಳಿದು ಗೇರುಸೊಪ್ಪ ಬಳಿ ಸಿಗುವ ಕ್ರಾಸ್‌ನಲ್ಲಿ ಕಂಟ್ರೋಲ್ ತಪ್ಪಿ ರಸ್ತೆಗೆ ಹೊಂದಿಕೊಂಡಿದ್ದ ಧರೆಗೆ ಬಸ್ ಡಿಕ್ಕಿಯಾಗಿದೆ.
ಪ್ರಯಾಣಿಕರು ಬಚಾವ್
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಪ್ರಯಾಣಿಕರಿಗೆ ಹೆಚ್ಚು ಪೆಟ್ಟಾಗಿಲ್ಲ. ಸಣ್ಣಪುಟ್ಟ ಗಾಯಗಳೊಂದಿಗೆ ಎಲ್ಲರೂ ಬಚಾವ್ ಆಗಿದ್ದಾರೆ.
SUMMARY | bus accident in bangalore to honnavar highway near gerusoppa


KEY WORDS | bus accident in bangalore to honnavar highway near gerusoppa