SHIVAMOGGA | MALENADUTODAY NEWS | ಮಲೆನಾಡು ಟುಡೆ Feb 4, 2025

ಶಿವಮೊಗ್ಗ ನಗರದಲ್ಲಿ ಕೋಟೆ ಪೊಲೀಸ್ ಠಾಣೆ ಬಳಿ ಆಯೋಜಿಸಿದ್ದ ಸ್ತೆ ಸಂಚಾರ ನಿಯಮಗಳ ಜಾಗೃತಿ ಪ್ರದರ್ಶನಕ್ಕೆ ಬಿಗ್ ರೆಸ್ಪಾನ್ಸ್ ಬಂದಿದೆ. ಎಕ್ಸ್ಪೋದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು, ನೌಕರರು ಹಾಗೂ ಸಾರ್ವಜನಿಕರು ಸಂಚಾರಿ ನಿಯಮಗಳ ಬಗ್ಗೆ ಖುದ್ದು ತಿಳಿದು ಟ್ರಾಫಿಕ್ ಪೊಲೀಸರ ಪ್ರಯತ್ನಕ್ಕೆ ಶಹಬ್ಬಾಸ್ ಎಂದಿದ್ದಾರೆ. ಈ ಬಗ್ಗೆ ಸಾರ್ವಜನಿಕರು ವ್ಯಕ್ತಪಡಿಸಿರುವ ಪ್ರತಿಕ್ರಿಯೆಗಳನ್ನು ಶಿವಮೊಗ್ಗ ಸಂಚಾರಿ ಪೊಲೀಸರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮುಂದುವರಿದು ಶಿವಮೊಗ್ಗ ಸಂಚಾರಿ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಸಂಬಂಧ ಸಾರ್ವಜನಿಕರಿಗೆ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಹೊಸದೊಂದು ಸಹಾಯವಾಣಿ ನಂಬರ್ ನೀಡಿದ್ದಾರೆ. ಈ ನಂಬರ್ನ ಮೂಲಕ ಟ್ರಾಫಿಕ್ ಪೊಲೀಸ್ ಇಲಾಖೆಯನ್ನು ಜನರು ಕ್ವಿಕ್ ಆಗಿ ಸಂಪರ್ಕಿಸಬಹುದಾಗಿದೆ.
ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಸಂಪರ್ಕ ಸಂಖ್ಯೆ 8277983404 / Shimoga Traffic Police Contact No 8277983404
ಎನೆಲ್ಲಾ ದೂರುಗಳನ್ನು ಹೇಳಿಕೊಳ್ಳಬಹುದು
ಸಾರ್ವಜನಿಕರು ರಸ್ತೆ ಅಪಘಾತಗಳು ಸಂಭವಿಸಿದಾಗ ಸಹಾಯಕ್ಕಾಗಿ ಮೇಲ್ಕಂಡ ಮೊಬೈಲ್ ನಂಬರ್ಗೆ ವಾಟ್ಸ್ ಆಪ್ ಮೂಲಕ ಸಂದೇಶ ಕಳಿಸುವುದು ಅಥವಾ ಕರೆ ಮಾಡಬಹುದಾಗಿದೆ

ಟ್ರಾಫಿಕ್ ಜಾಮ್ ಉಂಟಾದಲ್ಲಿ ಮೇಲ್ಕಂಡ ಮೊಬೈಲ್ ನಂಬರ್ಗೆ ವಾಟ್ಸಾಪ್ ಮೂಲಕ ಸಂದೇಶ ಕಳಿಸಬಹುದು ಅಥವಾ ಕರೆ ಮಾಡಬಹುದಾಗಿದೆ.
ಸಂಚಾರ ನಿಯಮಗಳು ಉಲ್ಲಂಘನೆಯಾಗಿದ್ದು ಕಂಡುಬಂದಲ್ಲಿ ಪೋಟೊ ತೆಗೆದು ಮೇಲ್ಕಂಡ ಮೊಬೈಲ್ ನಂಬರ್ಗೆ ವಾಟ್ಸ್ ಆಪ್ ಮೂಲಕ ಸಂದೇಶ ಕಳಿಸಬಹುದು.
ಆಟೋ ಚಾಲಕರು ಮೀಟರ್ ಅಳವಡಿಸದಿದ್ದಲ್ಲಿ ಮೇಲ್ಕಂಡ ಮೊಬೈಲ್ ನಂಬರ್ಗೆ ವಾಟ್ಸ್ ಆಪ್ ಮೂಲಕ ಸಂದೇಶ ಕಳಿಸಬಹುದು ಅಥವಾ ಕರೆ ಮಾಡಬಹುದು
ಇತರೆ ಯಾವುದೇ ಸಂಚಾರಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ಮೇಲ್ಕಂಡ ಮೊಬೈಲ್ ನಂಬರ್ಗೆ ವಾಟ್ಸ್ ಆಪ್ ಮೂಲಕ ಸಂದೇಶ ಕಳಿಸಬಹುದು ಅಥವಾ ಕರೆ ಮಾಡಬಹುದು.
ಮೇಲ್ಕಂಡ ಮೊಬೈಲ್ ಸಂಖ್ಯೆಗೆ ಬರುವ ಸಂದೇಶ ಅಥವಾ ಕರೆಗಳನ್ನು ಸ್ವೀಕರಿಸಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಲು ಪೂರ್ವ ಮತ್ತು ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಿಂದ ತಲಾ 02 ಭದ್ರಾ ವಾಹನಗಳನ್ನು ನಿಯೋಜಿಸಲಾಗಿದೆ.
ಒಟ್ಟಾರೆ, ಸಿಟಿ ಟ್ರಾಪಿಕ್ ಸಮಸ್ಯೆಗೆ ಪೊಲೀಸ್ ಇಲಾಖೆ ವಿಭಿನ್ನ ಪ್ರಯತ್ನಗಳ ಹಾದಿಯನ್ನು ಹಿಡಿದಿರುವುದು ಉತ್ತಮ ಕೆಲಸವಾಗಿದೆ. ಒಂದು ಕಡೆ ಸಂಚಾರಿ ನಿಯಮಗಳ ಬಗ್ಗೆ ತಿಳುವಳಿಕೆ ಮೂಡಿಸುವುದು, ಇನ್ನೊಂದೆಡೆ ಜನರಿಂದಲೇ ಸಂಚಾರಿ ನಿಯಮ ಉಲ್ಲಂಘನೆಗಳ ಬಗ್ಗೆ ಮಾಹಿತಿ ತಿಳಿದು ಕ್ರಮ ಕೈಗೊಳ್ಳುವುದು. ಈ ರೀತಿಯ ಕ್ರಮಗಳು ಮೊದಮೊದಲು ಬೆಂಗಳೂರಿನಲ್ಲಿ ಜಾರಿಯಾಗಿತ್ತು. ಆ ಬಳಿಕ ಅಲ್ಲಿ ಸಾಕಷ್ಟ ಬದಲಾವಣೆಯಾಗಿದ್ದು ಎಲ್ಲರಿಗೂ ಗೊತ್ತಿರುವಂತದ್ದೆ. ಬೆಂಗಳೂರು ಸ್ಟೈಲ್ನಲ್ಲಿ ಶಿವಮೊಗ್ಗದಲ್ಲಿ ಚಿತ್ರವಿಚಿತ್ರವಾಗಿ ಸಾಗುವ ವಾಹನಗಳಿಂದಾಗುವ ಟ್ರಾಫಿಕ್ ಸಮಸ್ಯೆ ಬಗೆಹರಿದರೆ ಪೊಲೀಸರ ಪ್ರಯತ್ನ ಸಾರ್ಥಕ
SUMMARY | Shimoga Traffic Police Contact No 8277983404, Shimoga Traffic Police helpline number
KEY WORDS | Shimoga Traffic Police Contact No 8277983404, Shimoga Traffic Police helpline number