SHIVAMOGGA NEWS TODAY

ವೀಲ್ಹಿಂಗ್‌ ಎಫೆಕ್ಟ್‌ | ಜಸ್ಟ್‌ ₹5000 ಫೈನ್ | ಹೊರಬಿತ್ತು ಶಿವಮೊಗ್ಗ ಟ್ರಾಫಿಕ್‌ ರೀಲ್ಸ್‌!

13 ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 4, 2025 ‌‌ 

ಶಿವಮೊಗ್ಗ ಟ್ರಾಫಿಕ್‌ ಪೊಲೀಸ್‌ ವೀಲ್ಹಿಂಗ್‌ ಶೂರರ ಮೇಲೆ ಖಾಕಿ ಕಣ್ಣಿಟ್ಟಿದೆ. ಇದಕ್ಕೆ ಸಾಕ್ಷಿಯಾಗಿ ಓರ್ವ ಯುವಕನಿಗೆ ವಿಲ್ಹೀಂಗ್‌ ಮಾಡಿದ ತಪ್ಪಿಗೆ ಐದು ಸಾವಿರ ರೂಪಾಯಿ ದಂಡವನ್ನು ಕೋರ್ಟ್‌ ಮೂಲಕ ವಿಧಿಸಿದೆ. 

ಶಿವಮೊಗ್ಗ ಟ್ರಾಫಿಕ್‌ ಪೊಲೀಸ್‌ 

ದಿನಾಂಕ 30..01.2025ರಂದು ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ  ಪಿಎಸ್ಐ ತಿರುಮಲೇಶ್ ಮತ್ತು ಸಿಬ್ಬಂದಿ ಪ್ರಕಾಶ್  ಎ.ಆರ್.ಎಸ್.ಐ. ಪ್ರವೀಣ್ ಪಾಟೀಲ್ ಹೆಚ್.ಸಿ.  ದಿನೇಶ್ ಪಿ.ಸಿ,  ಹರೀಶ್ ಪಿ.ಸಿ, ಗೌರವ ಲಾಡ್ಜ್ ಬಳಿ ವಾಹನ ತಪಾಸಣೆ ನಡೆಸಿದ್ದರು. ವಿಸಿಬಲ್‌ ಅಫೆನ್ಸ್‌ ಹೊಂದಿದ ವಾಹನಗಳನ್ನ ಅಡ್ಡಗಟ್ಟಿ ದಾಖಲಾತಿ ಪರಿಶೀಲನೆ ನಡೆಸ್ತಿದ್ದರು. 

ಈ ವೇಳೆ ಅಲ್ಲಿಯೇ ಯುವಕನೊಬ್ಬ ವೀಲ್ಹೀಂಗ್‌ ಮಾಡಿಕೊಂಡು ಬೈಕ್‌ ಓಡಿಸಿದ್ದಾನೆ. ಇದನ್ನ ಗಮನಿಸಿ ಅತನ ಬೈಕ್‌ ಅಡ್ಡಗಟ್ಟಿದ ಪೊಲೀಸರು ದಾಖಲಾತಿ ಪರಿಶೀಲಿಸಿ ಪ್ರಕರಣ ದಾಖಲಿಸಿ,ಕೋರ್ಟ್‌ಗೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ. ವಿಚಾರಣೆ ನಡೆಸಿದ ಕೋರ್ಟ್‌ ನಿನ್ನೆ ದಿನ ಬೈಕ್‌ ಸವಾರನಿಗೆ ಐದು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ

ಶಿವಮೊಗ್ಗ ಎಸ್‌ಪಿ ರೀಲ್ಸ್‌  

ಇನ್ನು ಇದೇ ವಿಚಾರದಲ್ಲಿ ಬೈಕ್‌ ವಿಲ್ಹೀಂಗ್‌ ಮಾಡುವುದು ತಪ್ಪು ಹಾಗೂ ಹಾಗೆ ಮಾಡಿದಲ್ಲಿ ದಂಡ ವಿಧಿಸಲಾಗುತ್ತದೆ ಮತ್ತು ಸುರಕ್ಷಿತವಾಗಿ ಬೈಕ್‌ ಚಲಾಯಿಸಿ ಎನ್ನುವ ಸಂದೇಶ ಹೊಂದಿದ ರೀಲ್ಸ್‌ ಎಡಿಟ್‌ ಮಾಡಿ ಎಸ್‌ಪಿ ಮಿಥುನ್‌ ಕುಮಾರ್‌ರವರ ಫೋಟೋದೊಂದಿಗೆ ಶಿವಮೊಗ್ಗ ಟ್ರಾಫಿಕ್‌ ಪೊಲೀಸರು ಸೋಶಿಯಲ್‌ ಮೀಡಿಯಾದಲ್ಲಿ ರೀಲ್ಸ್‌ ಪೋಸ್ಟ್‌ ಅಪ್‌ಲೋಡ್‌ ಮಾಡಿದ್ದಾರೆ. ಈ ವಿಡಿಯೋ ಕೂಡ ವೈರಲ್‌ ಆಗುತ್ತಿದೆ. 

SUMMARY |  Shivamogga Traffic Police fines biker for wheeling Rs 5,000, says Shivamogga SP Mithun Kumar

KEY WORDS | Shivamogga Traffic Police fines, bike wheeling fine,  Shivamogga SP Mithun Kumar

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
13