SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 7, 2025
ಬೆಂಗಳೂರು | ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ರಾಜ್ಯದಲ್ಲಿ ಕಡಿವಾಣ ಹಾಕಲು ರಾಜ್ಯಸರ್ಕಾರ ಸುಗ್ರೀವಾಜ್ಙೆ ತರಲು ಮುಂದಾಗಿದ್ದು, ಆ ಸುಗ್ರೀವಾಜ್ಞೆಗೆ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್‌ರವರು ಅಂಕಿತವನ್ನು ಹಾಕದೆ ವಾಪಾಸ್ ಕಳುಹಿಸಿದ್ದಾರೆ.
ರಾಜ್ಯದಲ್ಲಿ ಮೈಕ್ರೋಫೈನಾನ್ಸ್ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದರಿಂದ ಇದುವರೆಗೆ ಹಲವಾರು ಜನ ಸಾಮಾನ್ಯರು ಸಾವನ್ನಪ್ಪಿದ್ದಾರೆ. ಈ ಹಿನ್ನಲೆ ರಾಜ್ಯ ಸರ್ಕಾರ ಮೈಕ್ರೋ ಪೈನಾನ್ಸ್‌ನ್ನು ಮಟ್ಟಹಾಕಲು ಜನವರಿ 30ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸಗ್ರೀವಾಜ್ಞೆಯನ್ನು ಹೊರಡಿಸಲು ಯೋಜನೆ ರೂಪಿಸಿತ್ತು. ಹಾಗೆಯೇ ಆ ಸುಗ್ರೀವಾಜ್ಞೆಯ ಕಡತವನ್ನು ರಾಜ್ಯಪಾಲರ ಅಂಕಿತಕ್ಕಾಗಿ ಕಳುಹಿಸಲಾಗಿತ್ತು. ಆ ಸುಗ್ರೀವಾಜ್ಞೆಯಲ್ಲಿ ಸಾಲಗಾರರ ಹಕ್ಕುಗಳನ್ನು ರಕ್ಷಿಸುವುದರ ಜೊತೆಗೆ ಕಿರುಕುಳ ನೀಡುವ ಸಂಸ್ಥೆಗಳಿಗೆ ಕಠಿಣ ಶಿಕ್ಷೆಗಳನ್ನು ವಿಧಿಸುವ ಕೆಲವೊಂದು ಕಾನೂನುಗಳನ್ನು ನಮೂದಿಸಲಾಗಿದೆ. ಆ ಹಿನ್ನಲೆ ರಾಜ್ಯಪಾಲರು ಅದರಲ್ಲಿರುವ ಕೆಲ ನ್ಯೂನ್ಯತೆಗಳನ್ನು ಗಮನಿಸಿ. ಕಡತವನ್ನು ವಾಪಾಸ್ ಕಳುಹಿಸಿದ್ದಾರೆ.

ಸುಗ್ರೀವಾಜ್ಞೆಯ ಕಡತವನ್ನು ವಾಪಾಸ್ ಕಳುಹಿಸಲು ಕಾರಣವೇನು
ಸುಗ್ರೀವಾಜ್ಞೆಯು ಮೈಕ್ರೊ ಫೈನಾನ್ಸ್ ಕಂಪನಿಗಳ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ. ಬಡವರಿಗೂ ತೊಂದರೆಯಾಗಲಿದೆ.
ಸುಗ್ರೀವಾಜ್ಞೆಯಲ್ಲಿ ಹೇಳಲಾಗಿರುವ 10 ವರ್ಷಗಳ ಶಿಕ್ಷೆ ಹಾಗೂ ₹ 5 ಲಕ್ಷ ದಂಡ ವಿಪರೀತವಾಗಿದೆ.
ಈಗ ಚಾಲ್ತಿಯಲ್ಲಿರುವ ಕಾನೂನನ್ನು ಉಪಯೋಗಿಸಿಕೊಂಡು ಪೊಲೀಸ್ ಇಲಾಖೆ ಪರಿಸ್ಥಿತಿಯನ್ನು ನಿಯಂತ್ರಿಸಬಹುದು.
SUMMARY | The state government is planning to bring an ordinance to curb microfinance harassment in the state and the ordinance has been sent back without the assent of Governor Thaawar Chand Gehlot.
KEYWORDS | state government, Governor, Thaawar Chand Gehlot, ordinance, microfinance,