Wednesday, 14 May 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • ARECANUT RATE
  • INFORMATION NEWS
  • NATIONAL NEWS
  • DISTRICT
  • JP STORY
  • RAIN NEWS LIVE
  • BHADRAVATI
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಮಾರ್ಚ್‌ 23, ಪೇಸ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ ಉದ್ಘಾಟನಾ ಸಮಾರಂಭ

131
Last updated: March 20, 2025 9:24 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 20, 2025

ಶಿವಮೊಗ್ಗ | ವಿದ್ಯಾರ್ಥಿಗಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ದೃಷ್ಟಿಯಿಂದ ಪ್ರಜ್ಞಾ ಎಜುಕೇಷನ್ ಟ್ರಸ್ಟ್ ನಿಂದ ಪೇಸ್ ಇಂಟ‌ರ್ ನ್ಯಾಷನಲ್ ಸ್ಕೂಲ್‌ನ್ನು ಪ್ರಾರಂಭಿಸುತ್ತಿದ್ದು, ಈ ಶಾಲೆಯ ಉದ್ಘಾಟನಾ ಸಮಾರಂಭವನ್ನು ಮಾರ್ಚ್ 23ರ ಭಾನುವಾರದಂದು ಸಂಜೆ 5:30ಕ್ಕೆ ಪೇಸ್‌ ಪಿಯು ಕಾಲೇಜ್‌ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು  ಟ್ರಸ್ಟ್‌ನ ಅಧ್ಯಕ್ಷರಾದ ಕೆ ಎಸ್‌ ಈಶ್ವರಪ್ಪ ತಿಳಿಸಿದರು.

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಶಾಲೆಯ ಉದ್ಘಾಟನೆಯನ್ನು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಮೂಡಬಿದ್ರಿಯ ಪ್ರತಿಷ್ಠಿತ ಆಳ್ವ ಎಜುಕೇಷನ್ ಫೌಂಡೇಷನ್‌ ಸಂಸ್ಥಾಪಕರಾದ ಡಾ. ಎಂ. ಮೋಹನ್ ಆಳ್ವ ರವರು ನೆರವೇರಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್‌ನ ಅಧ್ಯಕ್ಷರಾದ  ಕೆ.ಎಸ್.ಈಶ್ವರಪ್ಪ ರವರು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಉಪಾಧ್ಯಕ್ಷರಾದ ಪ್ರೊ. ಹೆಚ್. ಆನಂದ್, ಕಾರ್ಯದರ್ಶಿಗಳಾದ ಪ್ರೊ. ವಿಶ್ವನಾಥಯ್ಯರವರು, ಖಜಾಂಚಿಗಳಾದ ಕೆ.ಈ.ಕಾಂತೇಶ್‌ರವರು ಮತ್ತು ಶಾಲೆಯ ಪ್ರಾಂಶುಪಾಲರಾದ ಶ್ರೀ. ಎನ್. ಆರ್. ಪವನ್ ಕುಮಾರ್ ರವರು ಉಪಸ್ಥಿತರಿರಲಿದ್ದಾರೆ ಎಂದರು.

ಸಮಾರಂಭದ ಮುಖ್ಯ ಆಕರ್ಷಣೆಯಾಗಿ  ಕರ್ನಾಟಕ ವೈಭವ’ ಎಂಬ ವಿನೂತನ ನೃತ್ಯರೂಪಕ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕರ್ನಾಟಕದ ಜನಪ್ರಿಯ ನಟರು ಮತ್ತು ಭರತನಾಟ್ಯ ಕಲಾವಿದರಾದ ಡಾ. ಸಂಜಯ್ ಶಾಂತಾರಾಮ್ ರವರ ನೇತೃತ್ವದ ಶಿವಪ್ರಿಯ ನಾಟ್ಯ ಶಾಲೆಯ ನಲವತ್ತು ಕಲಾವಿದರು ಈ ಮನಮೋಹಕ ನೃತ್ಯ ಪ್ರದರ್ಶನವನ್ನು ಪ್ರಸ್ತುತಪಡಿಸಲಿದ್ದಾರೆ. ಈ ವಿಶಿಷ್ಟ ನೃತ್ಯರೂಪಕವು ದೇಶ ವಿದೇಶಗಳಲ್ಲಿ ಪ್ರದರ್ಶಿಸಲ್ಪಟ್ಟಿದ್ದು ಅಪಾರ ಜನಮನ್ನಣೆಯನ್ನು ಪಡೆದಿರುತ್ತದೆ. ಹಾಗಾಗಿ ಶಿವಮೊಗ್ಗದ ಜನತೆ ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ವಿಶೇಷ ಕಾರ್ಯಕ್ರಮ ಮೆರುಗು ಹೆಚ್ಚಿಸಬೇಕೆಂದು ಮೂಲಕ ಕೋರಲಾಗಿದೆ.. ಎಲ್ಲರಿಗೂ ನೆರವಾಗುವಂತೆ ಸೂಕ್ತ ಬಸ್ ವ್ಯವಸ್ಥೆ ಮತ್ತು ಕಾರ್ಯಕ್ರಮದ ನಂತರ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.

ಶಾಲೆಯು 2025-26ನೇ ಶೈಕ್ಷಣಿಕ ಸಾಲಿನಿಂದ ಪ್ರಾರಂಭವಾಗಲಿದ್ದು, ನರ್ಸರಿಯಿಂದ ಎಂಟನೇ ತರಗತಿಯವರೆಗೆ ದಾಖಲಾತಿಯನ್ನು ಪ್ರಾರಂಭಿಸಲಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯಿಂದ ಸೂಕ್ತ ಅನುಮತಿಯನ್ನು ಪಡೆಯಲಾಗಿದೆ. ಶಾಲೆಯ ಶಿಕ್ಷಕರ ನೇಮಕಾತಿ ಈಗಾಗಲೇ ಪೂರ್ಣಗೊಂಡಿದ್ದು, ಅತ್ಯಂತ ನುರಿತ ಮತ್ತು ಅನುಭವಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಶಾಲೆ ನಡೆಸಲು ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳನ್ನು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು

ಶಾಲೆಯಲ್ಲಿ ಮಕ್ಕಳಿಗೆ ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಸರ್ವಾಂಗೀಣ ಶಿಕ್ಷಣ ನೀಡುವ ನಿಟ್ಟಿನಲ್ಲಿ ಹಲವಾರು ಚಟುವಟಿಕೆಗಳನ್ನು ಆಯೋಜಿಸಲಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಅನ್ವಯ ಸಾಮರ್ಥ್ಯಾಧಾರಿತ ಮತು ಕೌಶಲ್ಯಾಧಾರಿತ ಶಿಕ್ಷಣಕ್ಕೆ ಶಾಲೆಯಲ್ಲಿ ಹೆಚ್ಚಿನ ಒತ್ತು ನೀಡಲಾಗುವುದು. ಮಕ್ಕಳ ಬೌದ್ಧಿಕ ಬುದ್ಧಿಮತ್ತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಲಿಂಪಿಯಾಡ್ ಪರೀಕ್ಷೆಗಳು, ಕೋಡಿಂಗ್ ತರಬೇತಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೂಕ್ತ ಹಂತಗಳಲ್ಲಿ ತರಬೇತಿ, ಪಠ್ಯದ ಪರಿಣಾಮಕಾರಿ ಕಲಿಕೆಗಾಗಿ ಪ್ರತಿಷ್ಠಿತ ಕ್ರಿಸಾಲಿಸ್ ಸಂಸ್ಥೆಯೊಂದಿಗೆ ಸಹಯೋಗ, ಸೈಟ್ಸ್ & ಗೈಡ್ಸ್ ತರಬೇತಿ, ಅಬಾಕಸ್, ಚೆಸ್ ತರಬೇತಿ, ಸಹಪಠ್ಯ ಚಟುವಟಿಕೆಗಳು, ಆಟೋಟ ಸ್ಪರ್ಧೆಗಳು, ದೇಶೀ ಆಟಗಳಿಗೆ ಹೆಚ್ಚಿನ ಪ್ರಾಧಾನ್ಯತೆ, ಸಮಾಜಮುಖಿ ಕಾರ್ಯಕ್ರಮಗಳು; ಭಾರತದ ಪರಂಪರೆಯನ್ನು ಮಕ್ಕಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಯೋಗ, ಭಗವದ್ಗೀತೆ, ಭಜನೆ, ಸಂಸ್ಕೃತ ತರಗತಿಗಳನ್ನು ಆಯೋಜಿಸಲಾಗುವುದು. ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳಿಗೆ ವಿಶೇಷವಾದ ಒಳಾಂಗಣ ಚಟುವಟಿಕೆ ಮತ್ತು ಆಟದ ಕೊಠಡಿಯನ್ನು ನಿರ್ಮಿಸಲಾಗಿದೆ. ಹೀಗೆ ಹಲವಾರು ಚಟುವಟಿಕೆಗಳ ಆಯೋಜನೆಯ ಮೂಲಕ ಕಲಿಕೆಯನ್ನು ಆನಂದಮಯಗೊಳಿಸಿ ಮಕ್ಕಳಲ್ಲಿ ಶಿಸ್ತು ಸಂಯಮ ಬೆಳೆಸಿ ಭವಿಷ್ಯಕ್ಕೆ ಅಣಿಗೊಳಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದರು. 

SUMMARY |  The inauguration ceremony of the school will be held on Sunday, March 23 at 5.30 pm at the Pace PU College premises, according to Trust President K S Eshwarappa.

KEYWORDS | inauguration ceremony, Pace international school, shivamogga, k s eshwarappa,

malenadutoday add
Share This Article
Email Copy Link Print
Previous Article ಮನದ ಕಡಲು ಚಿತ್ರಕ್ಕೆ ಯಶ್‌ ಸಾಥ್‌  | ಟ್ರೈಲರ್‌ ರಿಲೀಸ್‌ ಯಾವಾಗ
Next Article ಸಿಂಚನಾಗೆ ಎನ್ಎಸ್ಎಸ್ ರಾಜ್ಯ ಪ್ರಶಸ್ತಿ ಸೇರಿದಂತೆ ಟಾಪ್‌ 5 ಚಟ್‌ ಪಟ್‌ ನ್ಯೂಸ್‌
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

SHIVAMOGGA NEWS TODAY

ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಅಧಿಕಾರಿಯ ಅಸಭ್ಯ ವರ್ತನೆ, ಸೂಕ್ತ ಕ್ರಮ ಕೈಗೊಳ್ಳಿ | ವಿಜಯಕುಮಾರ್

By 131

1000 ಕೋಟಿ ಗಳಿಸಿದ ಪುಷ್ಫ 2 | ಹಳೆ ದಾಖಲೆಗಳು ಉಡೀಸ್

By 131
SHIVAMOGGA NEWS TODAY

BREAKING NEWS | ಸಕ್ರೆಬೈಲ್‌ ಆನೆ ಬಿಡಾರದ ಸಮೀಪ ತುಂಗಾ ಹಿನ್ನೀರಿನಲ್ಲಿ ಓರ್ವ ಮಹಿಳೆ, ಇಬ್ಬರು ಪುರುಷರ ಮೃತದೇಹ ಪತ್ತೆ

By 13

ಆಸ್ತಿ ವಿಚಾರಕ್ಕೆ ಚಿಕ್ಕಪ್ಪನಿಂದಲೇ ಚಾಕು ಇರಿತ

By 2
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up