SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 17, 2025

ಶಿವಮೊಗ್ಗ | ಯುವ ನಾಯಕ ಸುಮುಕ ನಟಿಸಿ ಸ್ಟಾರ್ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶನ ಮಾಡಿರುವ ಮನದ ಕಡಲು ಚಿತ್ರ ಇದೇ ಮಾರ್ಚ್ 28 ರಂದು ರಾಜ್ಯಾದಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಕುರಿತು ಇಂದು ನಗರದ ಪತ್ರಿಕಾ ಭವನದಲ್ಲಿ ಮಾಹಿತಿ ನೀಡಿದ ನಿರ್ದೇಶಕ ಯೋಗರಾಜ್ ಭಟ್ ಈ ಹಿಂದೆ ಎಂದೂ ನೋಡಿರದಂತಹ ಹೊಸ ಪ್ರೇಮ ಕಥೆಯನ್ನು ಒಳಗೊಂಡಿರುವ ಚಿತ್ರ ಇದಾಗಿದೆ. ಈ ಚಿತ್ರಕ್ಕೆ ಬಹಳಾ ಸಮಯದ ಹಿಂದೆಯೇ ನಾನು ಕಥೆಯನ್ನು ಬರೆದು ರೆಡಿಮಾಡಿ ಇಟ್ಟುಕೊಂಡಿದ್ದೆ, ಆದರೆ ಆ ಕಥೆಗೆ ಒಪ್ಪುವಂತಹ ನಾಯಕ ನನಗೆ ಸಿಕ್ಕಿರಲಿಲ್ಲ. ಈ ಕಥೆಗೆ 20 ವಯಸ್ಸಿನ ಆಸುಪಾಸಿನ ನಾಯಕನ ಅವಶ್ಯಕತೆ ಇತ್ತು. ತುಂಬಾ ಸಮಯದ ನಂತರ ಈ ಹುಡುಗ ಚಿತ್ರಕ್ಕೆ ಉತ್ತಮ ಆಯ್ಕೆ ಎಂದೆನಿಸಿ ಆತನನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದೇವೆ ಎಂದರು.

ಈ ಚಿತ್ರಕ್ಕೆ ಮುಂಗಾರು ಮಳೆ ಖ್ಯಾತಿಯ ಈ ಕೃಷ್ಣಪ್ಪ ಬಂಡವಾಳವನ್ನು ಹೂಡಿದ್ದಾರೆ. ನಮ್ಮಿಬ್ಬರ ಕಾಂಬಿನೇಶನ್ನಲ್ಲಿ ಮೂಡಿಬಂದಿರುವ ಎರಡನೇ ಚಿತ್ರ ಇದಾಗಿದೆ. ಈ ಹಿಂದೆ ಉತ್ತಮ ಪ್ರೇಮ ಕಥೆಯೊಂದಿಗೆ ಮುಂಗಾರುಮಳೆ ಹೇಗೆ ಸಿನಿ ರಸಿಕರ ಮನ ಗೆದ್ದಿತ್ತೋ ಅದೇ ರೀತಿ ಈ ಸಿನಿಮಾವು ಜನರ ಮನ ಗೆಲ್ಲುತ್ತದೆ ಎಂಬ ವಿಶ್ವಾಸ ನಮಗಿದೆ ಎಂದರು.
ಚಿತ್ರದ ನಾಯಕ ಸುಮುಕ ಮಾತನಾಡಿ ನನಗೆ ಚಿಕ್ಕ ವಯಸ್ಸಿನಿಂದಲೂ ನಟನೆ ಎಂದರೆ ಬಹಳಾ ಇಷ್ಟ. ನಾನು ಈ ಹಿಂದೆ ಫಿಸಿಕ್ಸ್ ಟೇಚರ್ ಎಂಬ ಒಂದು ಚಿತ್ರವನ್ನು ನಿರ್ದೇಶಿಸಿ ನಟಿಸಿದ್ದೆ. ಅದು ಜನರಿಂದ ಉತ್ತಮ ಪ್ರಶಂಸೆಯನ್ನು ಪಡೆದಿತ್ತು. ಇದೀಗ ಮನದ ಕಡಲು ಚಿತ್ರದಲ್ಲಿ ನಟಿಸುತ್ತಿದ್ದೇನೆ. ನನಗೆ ಬಹಳಾ ಸಂತೋಷವಾಗುತ್ತಿದೆ ಎಂದರು.
SUMMARY | Manada Kadalu, directed by star director Yogaraj Bhat starring young hero Sumuka and directed by Star Director Yogaraj Bhat, is all set to release across the state on March 28.
KEYWORDS | Manada Kadalu, Yogaraj Bhat, March 28,