Tuesday, 1 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
JP STORY

ನಮ್ಮ ಶಾಲೆ ನಮ್ಮ ಜವಬ್ದಾರಿ ಪರಿಕಲ್ಪನೆಗೆ ಜೀವ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ | JP ಬರೆಯುತ್ತಾರೆ

13
Last updated: August 18, 2024 5:53 pm
13
Share
SHARE

SHIVAMOGGA | MALENADUTODAY NEWS | Aug 18, 2024 ಮಲೆನಾಡು ಟುಡೆ  

- Advertisement -

ನಮ್ಮ ಶಾಲೆ ನಮ್ಮ ಜವಬ್ದಾರಿ ಪರಿಕಲ್ಪನೆಗೆ ಜೀವ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ

ನಮ್ಮ ಶಾಲೆ ನಮ್ಮ ಜವಬ್ದಾರಿ ಎಂಬ ಶೀರ್ಷಿಕೆ ಅಡಿ ಸರ್ಕಾರ ರೂಪಿಸಿರುವ ಯೋಜನೆ ಅಂದುಕೊಂಡಂತೆ ಸಾಕಾರಗೊಂಡಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗ ಹೈಟೆಕ್ ಎಜುಕೇಷನ್ ಹಬ್ ಆಗಿ ರೂಪಿತಗೊಂಡರೂ ಅಚ್ಚರಿಯಿಲ್ಲ. ಈ ಹಿಂದೆ ಸರ್ಕಾರಿ ಶಾಲೆಗಳಲ್ಲಿ ಓದಿ ಬದುಕು ಕಟ್ಟಿಕೊಂಡ ಬಹಳಷ್ಟು ಮಂದಿಯಿದ್ದಾರೆ. 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಶಾಲೆ ನಮ್ಮ ಜವಾಬ್ದಾರಿ

ಇವರಿಗೆಲ್ಲಾ ಈಗಲೂ ತಾವು ಓದಿದ ಶಾಲೆ ಹಾಗು ಶಿಕ್ಷಕರ ಮೇಲೆ ಅವಿನಾಭಾವ ಸಂಬಂಧವಿದೆ. ಆತ್ಮೀಯತೆ ಇದೆ.  ಆದರೆ ಅನಿವಾರ್ಯ ಕಾರಣಗಳಿಂದ ಇವರುಗಳು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿರಬಹುದು. ಆದರೆ ಸರ್ಕಾರಿ ಶಾಲೆಯಲ್ಲಿ ಓದಿ ಸಾಕ್ಷಾತ್ಕಾರ ಗೊಂಡ ಮನಸ್ಸುಗಳಿಗೆ ಅದು ಅಸ್ಮಿತೆಯಾಗಿಯೇ ಇದೆ.

ಸರ್ಕಾರಿ ಶಾಲೆಯಲ್ಲಿ ತಾವಾಗಲಿ ತಮ್ಮ ಕುಟುಂಬ ತಾತಾ ಮುತ್ತಾತ ಯಾರೇ ಓದಿರಲಿ ಅದರ ನೆನಪಿಗಾಗಿ ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸಕ್ಕ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ನಮ್ಮ ಶಾಲೆ ನಮ್ಮ ಕೊಡುಗೆ..ನಮ್ಮ ಶಾಲೆ ನಮ್ಮ ಹೆಮ್ಮೆ ಅನ್ನುವುದಕ್ಕಿಂತ ಬದುಕು ಕಟ್ಟಿಕೊಟ್ಟ ನಮ್ಮ ಶಾಲೆಗೆ ನಾವೇನಾದರೂ ದಾರೆ ಎರೆಯಬೇಕಾಗಿರುವುದು ನಮ್ಮ ಜವಬ್ಗಾರಿ ಎನ್ನುವ ಪರಿಕಲ್ಪನೆಯಲ್ಲಿ ನಮ್ಮ ಶಾಲೆ ನಮ್ಮ ಜವಾಬ್ದಾರಿ ಎಂಬ ಶೀರ್ಷಿಕೆ ಅಡಿ ಸರ್ಕಾರ ಯೋಜನೆ ರೂಪಿಸಿದೆ.

car decor

ಸಚಿವ ಮಧು ಬಂಗಾರಪ್ಪ

ಈ ಯೋಜನೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಥಮವಾಗಿ ತಾವೇ ಬುನಾದಿ ಹಾಕಿದ್ದಾರೆ. ತಮ್ಮ ತಂದೆ ಬಂಗಾರಪ್ಪ ಓದಿದ ಕುಬಟೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹತ್ತು ಲಕ್ಷ ರೂಪಾಯಿ ಮೌಲ್ಯದ ಸಾಮಾಗ್ರಿಗಳನ್ನು ನೀಡಿದ್ದಾರೆ. ಟಿವಿ ಕಂಪ್ಯೂಟರ್ ಆಟಿಕೆ ಸೇರಿದಂತೆ ಶಾಲೆಗೆ ಅಗತ್ಯವಿರುವ ವಸ್ತುಗಳನ್ನು ಟೀಂ ಮಧು ಬಂಗಾರಪ್ಪ ಹೆಸರಿನಲ್ಲಿ ಪೂರೈಸಿದ್ದಾರೆ. ಕುಬಟೂರು ಸರ್ಕಾರಿ ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳು ಹಾಗು ಗ್ರಾಮಸ್ಥರು ಏಳು ಲಕ್ಷ ರೂಪಾಯಿ ನೆರವು ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಸಿದ ಮಕ್ಕಳಲ್ಲಿ ಅದೇನೋ ಉಲ್ಲಾಸ ಉತ್ಸಾಹ ಎದ್ದು ಕಾಣುತ್ತಿತ್ತು. ನಾವು ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೇನು ಕಮ್ಮಿ ಇಲ್ಲ ಎನ್ನುವ ಮನೋಭಾವ ಎದ್ದು ಕಾಣುತ್ತಿತ್ತು. 

ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಧು ಬಂಗಾರಪ್ಪ ಇದೊಂದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ, ಈ ಯೋಜನೆಗೆ ನಾನೇ ನನ್ನ ಜಿಲ್ಲೆಯಲ್ಲಿ ಮೊದಲ ಬಾರಿಗೆ ಅಡಿಪಾಯ ಹಾಕುತ್ತಿದ್ದೇನೆ. ನಾನು ಕಾನ್ವೆಂಟ್ ನಲ್ಲಿ ಓದಿದ್ದರೂ, ನಮ್ಮ ತಂದೆ ಬಂಗಾರಪ್ಪಜಿಯವರು ಸರ್ಕಾರಿ ಶಾಲೆಯಲ್ಲಿ ಓದಿಯೇ ರಾಜ್ಯದ ಮುಖ್ಯಮಂತ್ರಿಯಾದರು. ನೀವಾದರೂ ಅಷ್ಟೆ ಸರ್ಕಾರಿ ಶಾಲೆಯಲ್ಲಿ ಓದಿರದಿದ್ದರೂ, ನಿಮ್ಮ ತಂದೆ ತಾತ ಓದಿದ್ದರೂ, ಅಂತಹ ಶಾಲೆಗಳಿಗೆ ನೆರವು ನೀಡಿ ಎಂದು ಪೋಷಕರಲ್ಲಿ ಮನವಿ ಮಾಡಿದರು. 

ಈಗಾಗಲೇ ಮಂಡ್ಯದಲ್ಲಿ  ಶಾಸಕ ನರೇಂದ್ರಸ್ವಾಮಿಯವರ ಕ್ಷೇತ್ರದ ಸರ್ಕಾರಿ ಪಬ್ಲಿಕ್ ಶಾಲೆಗೆ ಹಳೆಯ ವಿದ್ಯಾರ್ಥಿಗಳು ಆರುವರೆ ಕೋಟಿ ದೇಣಿಗೆ ನೀಡಿ ಕಟ್ಟಡ ನಿರ್ಮಿಸಿದ್ದಾರೆ.ಹಾಗೆಯೇ ಹಾವೇರಿಯಲ್ಲೂ ಕೂಡ ಏಳು ಕೋಟಿ ಸರ್ಕಾರಿ ಶಾಲೆಗೆ ಹಳೆಯ ವಿದ್ಯಾರ್ಥಿಗಳು ದೇಣೆಗೆ ನೀಡಿದ್ದಾರೆ. ಈ ಯೋಜನೆಯಿಂದ ಒಂದು ,ಸಾವಿರ ಕೋಟಿ ನಿರೀಕ್ಷೆ ಹೊಂದಲಾಗಿದೆ ಎಂದು ತಿಳಿಸಿದರು.

ಹೌದು ಇದೊಂದು ಸರ್ಕಾರದ ಅರ್ಥಪೂರ್ಣ ಕಾರ್ಯಕ್ರಮವೇ ಆಗಿದೆ. ರಾಜ್ಯದಲ್ಲಿ 46 ಸಾವಿರ ಸರ್ಕಾರಿ ಶಾಲೆಗಳಿದ್ದು ಅವುಗಳ ಅಳಿವು ಉಳಿವು ಕೇವಲ ಸರ್ಕಾರದ ಕೆಲಸವಲ್ಲ. ಆ ಶಾಲೆಗಳಲ್ಲಿ ಓದಿ ಬದುಕು ರೂಪಿಸಿಕೊಂಡ ಪ್ರತಿಯೊಬ್ಬ ಹಳೆಯ ವಿದ್ಯಾರ್ಥಿಯ ಕರ್ತವ್ಯವೂ ಹೌದಾಗಿದೆ. ವಿದ್ಯಾರ್ಥಿಗಳೇ ಇಲ್ಲದೆ ಸರ್ಕಾರಿ ಶಾಲೆಗಳು ಮುಚ್ಟುವ ಹಂತಕ್ಕೆ ತಲುಪುವಂತ ಕಾಲಘಟ್ಟದಲ್ಲಿ ಸರ್ಕಾರಿ ಶಾಲೆಗಳ ಉಳಿವಿಗೆ ಸರ್ಕಾರ ಟೊಂಕಕಟ್ಟಿ ನಿಂತಿವುದು ಶ್ಲಾಘನೀಯವಾಗಿದೆ. 

 ಹಳೆ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್ 

ರಾಜ್ಯದ ಪ್ರತಿ ಸರ್ಕಾರಿ ಶಾಲೆಗಳ ಹಳೆ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್ ರಚನೆ ಮಾಡಿ ವಿದ್ಯಾರ್ಥಿಗಳನ್ನು ಒಟ್ಟಿಗೂಡಿಸಲಾಗುತ್ತಿದೆ. ಇದೊಂದು ಬಾಲ್ಯ ಜೀವನದ ಹಳೆ ನೆನಪುಗಳನ್ನು ಮೆಲಕು ಹಾಕುವ ಹಾಗು ಬಾಲ್ಯದ ಗೆಳೆಯರೊಂದಿಗೆ ಒಟ್ಟು ಗೂಡಿ ಸಂಭ್ರಮಿಸುವ ಅಮೃತ ಘಳಿಗೆಗೆ ಸಾಕ್ಷಿಭೂತವಾಗುತ್ತದೆ ಎಂದರೂ ಚಪ್ಪಾಗುವುವುದಿಲ್ಲ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕುಬಟೂರಿನಲ್ಲಿ ನಡೆದ ನಮ್ಮ ಶಾಲೆ ನಮ್ಮ ಜವಬ್ದಾರಿ ಒಂದು ಬಾವನಾತ್ಮಕ ಕಾರ್ಯಕ್ರಮವಾಗಿ ರೂಪುಗೊಂಡಿತ್ತು. ಶಾಲಾ ಮಕ್ಕಳು ಶಿಕ್ಷಕರೊಂದಿಗೆ ಬಹು ಸಮಯ ಕಳೆದ ಮಧು ಬಂಗಾರಪ್ಪ ಒಂದು ರೀತಿಯಲ್ಲಿ ಶಾಲಾ ವಿದ್ಯಾರ್ಥಿಯಾಗಿಯೇ ಗೋಚರಿಸಿದರು. ಅಂದುಕೊಂಡಂತೆ ಸರ್ಕಾರಿ ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳು ಈ ಯೋಜನೆಗೆ ಕೈ ಜೋಡಿಸಿದರೆ, ಸರ್ಕಾರಿ ಶಾಲೆಗಳಿಗೆ ಮತ್ತು ಜೀವಕಳೆ ಬಂದಂತಾಗುತ್ತೆ.

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

malenadutoday add
Share This Article
Facebook Whatsapp Whatsapp Telegram Threads Copy Link
Previous Article 24 ಗಂಟೆ ಕುಡಿಯುವ ನೀರು ಬಿಲ್‌ ಯಾವಾಗ ಬರುತ್ತೆ | ಆಶ್ರಯ ಮನೆ ವಿಚಾರ ಏನಾಯ್ತು | ಪಾಲಿಕೆಯಲ್ಲಿ ಜನರ ಸಮಸ್ಯೆ ಏನಾಗ್ತಿದೆ | ಸಚಿವರ ಉತ್ತರವೇನು?
Next Article ‌Job news |ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ವಿವಿಧ ಹುದ್ದೆಗಳು | ಇಲ್ಲಿದೆ ವಿವರ
Leave a Comment

Leave a Reply Cancel reply

Your email address will not be published. Required fields are marked *

You Might Also Like

ನಕ್ಸಲ್‌ ನಾಯಕ ವಿಕ್ರಂಗೌಡನ ಪತ್ನಿಯು ನಕ್ಸಲ್‌ | ಯಾರು ಗೊತ್ತಾ

By 13

Shimoga police drone | ಪ್ರತಿ ಏರಿಯಾಗಳ ಆ ಪ್ಲೇಸ್‌ಗಳ ಮೇಲೆ ಪೊಲೀಸ್‌ ಡ್ರೋನ್‌ ಕಣ್ಣು | 9 ಸಾವಿರ ಮಂದಿಗೆ ಸ್ಟೇಷನ್‌ ದರ್ಶನ

By 13
JP STORY

ಯುಜಿ ನಕ್ಸಲ್‌ ಕೋಟೆ ರವೀಂದ್ರ ಚಿಕ್ಕಮಗಳೂರಿನಲ್ಲಿ ಶರಣಾಗತಿ

By 13
JP STORY

ಬೆಂಗಳೂರಲ್ಲಿ ಶಿವಮೊಗ್ಗ ರೌಡಿಗಳಿಂದ ಮರ್ಡರ್!‌ | ಟ್ಯಾಂಕ್‌ ಮೊಹಲ್ಲಾ ರಿಜ್ವಾನ್‌ ಮೋಸ್ಟ್‌ ಡೆಂಜರಸ್‌ ಆಗಿದ್ದೇಗೆ? JP ಬರೆಯುತ್ತಾರೆ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up