SHIVAMOGGA | MALENADUTODAY NEWS | Aug 18, 2024 ಮಲೆನಾಡು ಟುಡೆ
ನಮ್ಮ ಶಾಲೆ ನಮ್ಮ ಜವಬ್ದಾರಿ ಪರಿಕಲ್ಪನೆಗೆ ಜೀವ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ
ನಮ್ಮ ಶಾಲೆ ನಮ್ಮ ಜವಬ್ದಾರಿ ಎಂಬ ಶೀರ್ಷಿಕೆ ಅಡಿ ಸರ್ಕಾರ ರೂಪಿಸಿರುವ ಯೋಜನೆ ಅಂದುಕೊಂಡಂತೆ ಸಾಕಾರಗೊಂಡಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗ ಹೈಟೆಕ್ ಎಜುಕೇಷನ್ ಹಬ್ ಆಗಿ ರೂಪಿತಗೊಂಡರೂ ಅಚ್ಚರಿಯಿಲ್ಲ. ಈ ಹಿಂದೆ ಸರ್ಕಾರಿ ಶಾಲೆಗಳಲ್ಲಿ ಓದಿ ಬದುಕು ಕಟ್ಟಿಕೊಂಡ ಬಹಳಷ್ಟು ಮಂದಿಯಿದ್ದಾರೆ.

ನಮ್ಮ ಶಾಲೆ ನಮ್ಮ ಜವಾಬ್ದಾರಿ
ಇವರಿಗೆಲ್ಲಾ ಈಗಲೂ ತಾವು ಓದಿದ ಶಾಲೆ ಹಾಗು ಶಿಕ್ಷಕರ ಮೇಲೆ ಅವಿನಾಭಾವ ಸಂಬಂಧವಿದೆ. ಆತ್ಮೀಯತೆ ಇದೆ. ಆದರೆ ಅನಿವಾರ್ಯ ಕಾರಣಗಳಿಂದ ಇವರುಗಳು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿರಬಹುದು. ಆದರೆ ಸರ್ಕಾರಿ ಶಾಲೆಯಲ್ಲಿ ಓದಿ ಸಾಕ್ಷಾತ್ಕಾರ ಗೊಂಡ ಮನಸ್ಸುಗಳಿಗೆ ಅದು ಅಸ್ಮಿತೆಯಾಗಿಯೇ ಇದೆ.
ಸರ್ಕಾರಿ ಶಾಲೆಯಲ್ಲಿ ತಾವಾಗಲಿ ತಮ್ಮ ಕುಟುಂಬ ತಾತಾ ಮುತ್ತಾತ ಯಾರೇ ಓದಿರಲಿ ಅದರ ನೆನಪಿಗಾಗಿ ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸಕ್ಕ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ನಮ್ಮ ಶಾಲೆ ನಮ್ಮ ಕೊಡುಗೆ..ನಮ್ಮ ಶಾಲೆ ನಮ್ಮ ಹೆಮ್ಮೆ ಅನ್ನುವುದಕ್ಕಿಂತ ಬದುಕು ಕಟ್ಟಿಕೊಟ್ಟ ನಮ್ಮ ಶಾಲೆಗೆ ನಾವೇನಾದರೂ ದಾರೆ ಎರೆಯಬೇಕಾಗಿರುವುದು ನಮ್ಮ ಜವಬ್ಗಾರಿ ಎನ್ನುವ ಪರಿಕಲ್ಪನೆಯಲ್ಲಿ ನಮ್ಮ ಶಾಲೆ ನಮ್ಮ ಜವಾಬ್ದಾರಿ ಎಂಬ ಶೀರ್ಷಿಕೆ ಅಡಿ ಸರ್ಕಾರ ಯೋಜನೆ ರೂಪಿಸಿದೆ.

ಸಚಿವ ಮಧು ಬಂಗಾರಪ್ಪ
ಈ ಯೋಜನೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಥಮವಾಗಿ ತಾವೇ ಬುನಾದಿ ಹಾಕಿದ್ದಾರೆ. ತಮ್ಮ ತಂದೆ ಬಂಗಾರಪ್ಪ ಓದಿದ ಕುಬಟೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹತ್ತು ಲಕ್ಷ ರೂಪಾಯಿ ಮೌಲ್ಯದ ಸಾಮಾಗ್ರಿಗಳನ್ನು ನೀಡಿದ್ದಾರೆ. ಟಿವಿ ಕಂಪ್ಯೂಟರ್ ಆಟಿಕೆ ಸೇರಿದಂತೆ ಶಾಲೆಗೆ ಅಗತ್ಯವಿರುವ ವಸ್ತುಗಳನ್ನು ಟೀಂ ಮಧು ಬಂಗಾರಪ್ಪ ಹೆಸರಿನಲ್ಲಿ ಪೂರೈಸಿದ್ದಾರೆ. ಕುಬಟೂರು ಸರ್ಕಾರಿ ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳು ಹಾಗು ಗ್ರಾಮಸ್ಥರು ಏಳು ಲಕ್ಷ ರೂಪಾಯಿ ನೆರವು ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಸಿದ ಮಕ್ಕಳಲ್ಲಿ ಅದೇನೋ ಉಲ್ಲಾಸ ಉತ್ಸಾಹ ಎದ್ದು ಕಾಣುತ್ತಿತ್ತು. ನಾವು ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೇನು ಕಮ್ಮಿ ಇಲ್ಲ ಎನ್ನುವ ಮನೋಭಾವ ಎದ್ದು ಕಾಣುತ್ತಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಧು ಬಂಗಾರಪ್ಪ ಇದೊಂದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ, ಈ ಯೋಜನೆಗೆ ನಾನೇ ನನ್ನ ಜಿಲ್ಲೆಯಲ್ಲಿ ಮೊದಲ ಬಾರಿಗೆ ಅಡಿಪಾಯ ಹಾಕುತ್ತಿದ್ದೇನೆ. ನಾನು ಕಾನ್ವೆಂಟ್ ನಲ್ಲಿ ಓದಿದ್ದರೂ, ನಮ್ಮ ತಂದೆ ಬಂಗಾರಪ್ಪಜಿಯವರು ಸರ್ಕಾರಿ ಶಾಲೆಯಲ್ಲಿ ಓದಿಯೇ ರಾಜ್ಯದ ಮುಖ್ಯಮಂತ್ರಿಯಾದರು. ನೀವಾದರೂ ಅಷ್ಟೆ ಸರ್ಕಾರಿ ಶಾಲೆಯಲ್ಲಿ ಓದಿರದಿದ್ದರೂ, ನಿಮ್ಮ ತಂದೆ ತಾತ ಓದಿದ್ದರೂ, ಅಂತಹ ಶಾಲೆಗಳಿಗೆ ನೆರವು ನೀಡಿ ಎಂದು ಪೋಷಕರಲ್ಲಿ ಮನವಿ ಮಾಡಿದರು.
ಈಗಾಗಲೇ ಮಂಡ್ಯದಲ್ಲಿ ಶಾಸಕ ನರೇಂದ್ರಸ್ವಾಮಿಯವರ ಕ್ಷೇತ್ರದ ಸರ್ಕಾರಿ ಪಬ್ಲಿಕ್ ಶಾಲೆಗೆ ಹಳೆಯ ವಿದ್ಯಾರ್ಥಿಗಳು ಆರುವರೆ ಕೋಟಿ ದೇಣಿಗೆ ನೀಡಿ ಕಟ್ಟಡ ನಿರ್ಮಿಸಿದ್ದಾರೆ.ಹಾಗೆಯೇ ಹಾವೇರಿಯಲ್ಲೂ ಕೂಡ ಏಳು ಕೋಟಿ ಸರ್ಕಾರಿ ಶಾಲೆಗೆ ಹಳೆಯ ವಿದ್ಯಾರ್ಥಿಗಳು ದೇಣೆಗೆ ನೀಡಿದ್ದಾರೆ. ಈ ಯೋಜನೆಯಿಂದ ಒಂದು ,ಸಾವಿರ ಕೋಟಿ ನಿರೀಕ್ಷೆ ಹೊಂದಲಾಗಿದೆ ಎಂದು ತಿಳಿಸಿದರು.
ಹೌದು ಇದೊಂದು ಸರ್ಕಾರದ ಅರ್ಥಪೂರ್ಣ ಕಾರ್ಯಕ್ರಮವೇ ಆಗಿದೆ. ರಾಜ್ಯದಲ್ಲಿ 46 ಸಾವಿರ ಸರ್ಕಾರಿ ಶಾಲೆಗಳಿದ್ದು ಅವುಗಳ ಅಳಿವು ಉಳಿವು ಕೇವಲ ಸರ್ಕಾರದ ಕೆಲಸವಲ್ಲ. ಆ ಶಾಲೆಗಳಲ್ಲಿ ಓದಿ ಬದುಕು ರೂಪಿಸಿಕೊಂಡ ಪ್ರತಿಯೊಬ್ಬ ಹಳೆಯ ವಿದ್ಯಾರ್ಥಿಯ ಕರ್ತವ್ಯವೂ ಹೌದಾಗಿದೆ. ವಿದ್ಯಾರ್ಥಿಗಳೇ ಇಲ್ಲದೆ ಸರ್ಕಾರಿ ಶಾಲೆಗಳು ಮುಚ್ಟುವ ಹಂತಕ್ಕೆ ತಲುಪುವಂತ ಕಾಲಘಟ್ಟದಲ್ಲಿ ಸರ್ಕಾರಿ ಶಾಲೆಗಳ ಉಳಿವಿಗೆ ಸರ್ಕಾರ ಟೊಂಕಕಟ್ಟಿ ನಿಂತಿವುದು ಶ್ಲಾಘನೀಯವಾಗಿದೆ.
ಹಳೆ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್
ರಾಜ್ಯದ ಪ್ರತಿ ಸರ್ಕಾರಿ ಶಾಲೆಗಳ ಹಳೆ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್ ರಚನೆ ಮಾಡಿ ವಿದ್ಯಾರ್ಥಿಗಳನ್ನು ಒಟ್ಟಿಗೂಡಿಸಲಾಗುತ್ತಿದೆ. ಇದೊಂದು ಬಾಲ್ಯ ಜೀವನದ ಹಳೆ ನೆನಪುಗಳನ್ನು ಮೆಲಕು ಹಾಕುವ ಹಾಗು ಬಾಲ್ಯದ ಗೆಳೆಯರೊಂದಿಗೆ ಒಟ್ಟು ಗೂಡಿ ಸಂಭ್ರಮಿಸುವ ಅಮೃತ ಘಳಿಗೆಗೆ ಸಾಕ್ಷಿಭೂತವಾಗುತ್ತದೆ ಎಂದರೂ ಚಪ್ಪಾಗುವುವುದಿಲ್ಲ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕುಬಟೂರಿನಲ್ಲಿ ನಡೆದ ನಮ್ಮ ಶಾಲೆ ನಮ್ಮ ಜವಬ್ದಾರಿ ಒಂದು ಬಾವನಾತ್ಮಕ ಕಾರ್ಯಕ್ರಮವಾಗಿ ರೂಪುಗೊಂಡಿತ್ತು. ಶಾಲಾ ಮಕ್ಕಳು ಶಿಕ್ಷಕರೊಂದಿಗೆ ಬಹು ಸಮಯ ಕಳೆದ ಮಧು ಬಂಗಾರಪ್ಪ ಒಂದು ರೀತಿಯಲ್ಲಿ ಶಾಲಾ ವಿದ್ಯಾರ್ಥಿಯಾಗಿಯೇ ಗೋಚರಿಸಿದರು. ಅಂದುಕೊಂಡಂತೆ ಸರ್ಕಾರಿ ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳು ಈ ಯೋಜನೆಗೆ ಕೈ ಜೋಡಿಸಿದರೆ, ಸರ್ಕಾರಿ ಶಾಲೆಗಳಿಗೆ ಮತ್ತು ಜೀವಕಳೆ ಬಂದಂತಾಗುತ್ತೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ