SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 11, 2025

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಇದೀಗ ಪೂರ್ಣಪ್ರಮಾಣದ ಬೇಲ್ ಪಡೆದಿರುವ ದರ್ಶನ್ ತೂಗುದೀಪ್ ಇದೀಗ ಮತ್ತೆ ಡೆವಿಲ್ ಚಿತ್ರದ ಶೂಟಿಂಗ್ಗೆ ಮರಳುತ್ತಿದ್ದಾರೆ.
ಮೈಸೂರಿನಲ್ಲಿ ಶೂಟಿಂಗ್ ಆರಂಭಿಸಲು ಚಿತ್ರಂಡ ಪೊಲೀಸ್ ಇಲಾಕೆಯಿಂದ ಅನುಮತಿ ಪಡೆದಿದೆ. ಈ ಹಿಂದೆ ಚಿತ್ರದ ಶೂಟಿಂಗ್ ಎಲ್ಲಿಯವರೆಗೆ ನಿಂತಿತ್ತೂ ಅಲ್ಲಿಂದ ಚಿತ್ರದ ಶೂಟಿಂಗ್ ಮುಂದುವರೆಯಲಿದ್ದು, ಮಾರ್ಚ್ 12 ರಿಂದ 15 ರ ವರೆಗೆ ದರ್ಶನ್ ಮೈಸೂರಿನಲ್ಲಿ ನಡೆಯುವ ಶೂಟಿಂಗ್ನಲ್ಲಿ ಭಾಗಿಯಾಗಲಿದ್ದಾರೆ. ಈ ಹಿನ್ನಲೆ ದರ್ಶನ್ರವರಿಗೆ ಭದ್ರತೆಯನ್ನು ನೀಡಲು 10 ಜನ ಪೊಲೀಸರನ್ನು ನಿಯೋಜಿಸಲಾಗಿದ್ದು, ಅದಕ್ಕಾಗಿ ಚಿತ್ರತಂಡ ಒಂದುವರೆ ಲಕ್ಷ ರೂಪಾಯಿಗಳನ್ನು ನೀಡಿದೆ ಎನ್ನಲಾಗಿದೆ.

ಚಿತ್ರದ ನಿರ್ದೇಶನವನ್ನು ಮಿಲನ ಪ್ರಕಾಶ್ ಮಾಡುತ್ತಿದ್ದು, ಶ್ರೀ ಜೈಮಠ ಕಂಬೈನ್ಸ್ ಮತ್ತು ವೈಷ್ಣೋ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಜೆ ಜಯಮ್ಮ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಯುವ ನಟಿ ರಚನಾ ರೈ ಡಿ ಬಾಸ್ ಗೆ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ.
SUMMARY | Darshan Thoogudeep is now returning to the sets of ‘Devil’.
KEYWORDS | Darshan Thoogudeep, Devil, shooting,