SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 21, 2024
ಪುಷ್ಪ 2 ಈ ಬಾರಿಯ ಅಲ್ಲೂ ಅರ್ಜುನ್ ನಟನೆಯ ಬಹು ನಿರೀಕ್ಷಿತ ಚಿತ್ರವಾಗಿದ್ದು, ಈ ಸಿನಿಮಾ ಡಿಸೆಂಬರ್ 5 ರಂದು ವಿಶ್ವದಾದ್ಯಂತ ರಿಲೀಸ್ ಆಗಲಿದೆ.
ಈಗಾಗಲೇ ಈ ಸಿನಿಮಾಗೆ ಎಲ್ಲಿಲ್ಲದ ಕ್ರೇಜ್ ಶುರುವಾಗಿದೆ. ಅದಕ್ಕೆ ಮುಖ್ಯ ಕಾರಣ ಪುಷ್ಪ 1 ಸಿನಿಮಾ. ಪುಷ್ಪ 1 2021 ರಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾದಲ್ಲಿ ಅಲ್ಲೂ ಅರ್ಜುನ್ ನಟನೆ ಹಾಗೂ ಅವರ ಸ್ವಾಗ್ ಎಲ್ಲರಿಗೂ ಇಷ್ಟವಾಗಿತ್ತು. ಹಾಗೂ ಸುಕುಮಾರ್ ರವರ ನಿರ್ದೇಶನ ಹಾಗೂ ಚಿತ್ರದಲ್ಲಿ ಅವರು ಕೊಟ್ಟ ಕೆಲವೊಂದು ಟ್ವಿಸ್ಟ್ ಗಳು ಪುಷ್ಪ2 ಚಿತ್ರಕ್ಕೆ ಎಲ್ಲರನ್ನೂ ಕಾಯುವಂತೆ ಮಾಡಿತ್ತು

ಇದರ ನಡುವೆ ನವೆಂಬರ್ 22, 2024 ರಂದು ಪುಷ್ಪ ದಿ ರೈಸ್ (ಹಿಂದಿ) ಚಿತ್ರಮಂದಿರಗಳಲ್ಲಿ ಮತ್ತೆ ರೀರಿಲೀಸ್ ಆಗಲಿದೆ ಎಂದು ಗೋಲ್ಡ್‌ಮೈನ್ಸ್ ಟೆಲಿಫಿಲ್ಮ್ಸ್ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿ ಮಾಹಿತಿ ನೀಡಿದೆ. 3
SUMMARY| Pushpa 2 is one of the most anticipated films of Allu Arjun and is slated to release worldwide on December 5.
KEYWORDS| Pushpa 2, Allu Arjun, cinema, kannadanews,