ಕೋಟೆ ಆಂಜನೇಯ ಸ್ವಾಮಿ ರಥೋತ್ಸವದ ವೇಳೆ ಗೋಲ್ಗಪ್ಪಾ ಕಾರಣಕ್ಕೆ ಸ್ಟಾಲ್‌ ವ್ಯಾಪಾರಿಗಳ ಫೈಟ್‌ | FIR

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 17, 2025 ‌‌ 

ಇತ್ತೀಚೆಗೆ ನಡೆದ ಶಿವಮೊಗ್ಗ ನಗರದ ಪ್ರಸಿದ್ಧ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ರಥೋತ್ಸವದ ವೇಳೆಯಲ್ಲಿ ವ್ಯಾಪಾರಿಗಳ ನಡುವೆ ಹೊಡೆದಾಟ ನಡೆದಿದ್ದು, ವ್ಯಾಪಾರಿಯೊಬ್ಬರು ಈ ಸಂಬಂಧ ದೂರು ದಾಖಲಿಸಿದ್ದಾರೆ. ಕೋಟೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ಸಹ ದಾಖಲಾಗಿದೆ. 

- Advertisement -

ಕಳೆದ 12 ನೇ ತಾರೀಖು ನಡೆದ ಘಟನೆ ಇದಾಗಿದ್ದು, ಕೋಟೆ ಮಾರಿಕಾಂಬಾ ದೇವಸ್ಥಾನದ ಪಕ್ಕದ ರಸ್ತೆಯಲ್ಲಿ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ರಥೋತ್ಸವ ಹಿನ್ನೆಲೆಯಲ್ಲಿ ಅಲ್ಲಾಭಕ್ಷ್‌ ಎಂಬವರು ಸ್ಟಾಲ್‌ ಹಾಕಿದ್ದರು. ಅವರ ಪಕ್ಕದಲ್ಲಿ ಝಬಿ ಎಂಬವರು ಸ್ಟಾಲ್‌ ಹಾಕಿಕೊಂಡಿದ್ದರು. ವ್ಯಾಪಾರದ ನಡುವೆ, ಅಲ್ಲಿ ಝಬಿಯವರ ಸ್ಟಾಲ್‌ ಸಮೀಪ, ಗೋಲ್ಗಪ್ಪ ಮಾರುವ ಯುವಕನೊಬ್ಬ ಅಲ್ಲಿ ನಿಂತು ವ್ಯಾಪಾರ ಮಾಡಲು ಆರಂಭಿಸಿದ್ದಾನೆ. ಇದನ್ನು ಆಕ್ಷೇಪಿಸಿದ ಝಬಿ ಪಾನಿಪುರಿ ಮಾರದಂತೆ, ಅಲ್ಲಿಂದ ತೆರಳುವಂತೆ ಸೂಚಿಸಿದ್ದಾನೆ. ಇದನ್ನ ಕೇಳಿದ ಅಲ್ಲಾಭಕ್ಷ್‌ ಅವರು ತಮ್ಮಂತೆ ವ್ಯಾಪಾರಕ್ಕೆ ಬಂದಿದ್ದಾನೆ. ವ್ಯಾಪಾರ ಮಾಡಿಕೊಳ್ಳಿ ಬಿಡಿ, ಏತಕ್ಕೆ ಆತನಿಗೆ ಹೆದರಿಸುತ್ತಿದ್ದೀರಿ ಎಂದು ಕೇಳಿದ್ದಾರೆ. ಈ ವೇಳೆ ಝಬಿ ಹಾಗೂ ಆತನ ಕಡೆಯವರು ಅಲ್ಲಾಭಕ್ಷ್‌ರ ಜೊತೆ ಜಗಳ ತೆಗೆದು, ಹಲ್ಲೆ ಮಾಡಿ, ಮರದ ತುಂಡಿನಿಂದ ತಲೆಗೆ ಹೊಡೆದು ಗಂಭೀರ ಗಾಯಗೊಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸದ್ಯ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸ್ತಿದ್ದಾರೆ.

 

SUMMARY |  kote police station case, kote anjaneya swami jatre,  kote marikamba devastana 

KEY WORDS |kote police station case, kote anjaneya swami jatre,  kote marikamba devastana 

Share This Article
Leave a Comment

Leave a Reply

Your email address will not be published. Required fields are marked *