SHIVAMOGGA | MALENADUTODAY NEWS | ಮಲೆನಾಡು ಟುಡೆ Feb 1, 2025
ಶಿವಮೊಗ್ಗ ಜಿಲ್ಲೆ ತಾಲ್ಲೂಕು ಒಂದರ ಮಹಿಳೆಯನ್ನು ಕೆಲಸ ಕೊಡಿಸುವುದಾಗಿ ವಂಚಿಸಿದಷ್ಟೆ ಅಲ್ಲದೆ ಆಕೆಯನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಿದ ಆರೋಪವೋಂದು ಉಡುಪಿಯಲ್ಲಿ ಕೇಳಿಬಂದಿದೆ. ಅಲ್ಲದೆ ಪ್ರಕರಣದಲ್ಲಿ ಲಾಡ್ಜ್‌ವೊಂದರಿಂದ ಬಂಧಿಯಾಗಿದ್ದ ಸಂತ್ರಸ್ತೆಯನ್ನು ಪೊಲೀಸರು ರಕ್ಷಿಸಿದ್ದಾರೆ.
ಶಿವಮೊಗ್ಗ, ಉಡುಪಿ
ಉಡುಪಿಯ ಕಿನ್ನಿಮುಲ್ಕಿ ಎಂಬಲ್ಲಿ ಲಾಡ್ಜ್‌ವೊಂದರಲ್ಲಿಯಲ್ಲಿ ಮಹಿಳೆಯೊಬ್ಬಳನ್ನು ಅಕ್ರಮವಾಗಿ ಬಂಧನದಲ್ಲಿ ಇರಿಸಲಾಗಿತ್ತು. ಅಲ್ಲದೆ ಆಕೆಯನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಶಿವಮೊಗ್ಗ ಮೂಲದ ಮಹಿಳೆಯನ್ನು, ಕೆಲಸ ಕೊಡಿಸುವ ನೆಪದಲ್ಲಿ ಇಲ್ಲಿಕೆ ಕರೆತಂದಿದ್ದ ವ್ಯಕ್ತಿಯು ಆಕೆಯನ್ನ ವೇಶ್ಯಾವಾಟಿಕೆಗೆ ತಳ್ಳಲು ಮುಂದಾಗಿದ್ದ. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸ್ ಇಲಾಖೆ ಮಾನವ ಕಳ್ಳಸಾಗಣೆ ಮತ್ತು ಕಿರುಕುಳ, ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡಿದ ಆರೋಪ ಸೇರಿದಂತೆ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ.
SUMMARY | women, a native of Shivamogga, rescue from udupi lodge

KEY WORDS | women, a native of Shivamogga, udupi lodge