SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 30, 2025
ಶಿವಮೊಗ್ಗ | ಆಶ್ರಯ ಯೋಜನೆ ಅಡಿಯಲ್ಲಿ ಅವ್ಯವಹಾರಕ್ಕೆ ಆಸ್ಪದ ನೀಡದೆ ಒಂದು ಟೈಮ್ ಬಾಂಡ್ ಫಿಕ್ಸ್ ಮಾಡಿ ಬಡವರಿಗೆ ಇನ್ನೇರಡು ತಿಂಗಳಲ್ಲಿ ಮನೆ ನೀಡಿ, ಇಲ್ಲದಿದ್ದರೆ ನಾವು ಹೋರಾಟಮಾಡುತ್ತೇವೆ ಎಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆಶ್ರಯ ಮನೆ ನೀಡುವ ವಿಚಾರದಲ್ಲಿ ರಾಜಕೀಯ ವ್ಯಕ್ತಿಗಳು ಒಬ್ಬರನ್ನೋಬ್ಬರು ಟೀಕೆ ಮಾಡುತ್ತಿರುವುದನ್ನು ನಾನು ಗಮನಿಸುತ್ತಿದ್ದೇನೆ. ಒಬ್ಬರಿಗೆ ಒಬ್ಬರು ಟೀಕೆ ಮಾಡುವುದು ರಾಜಕಾರಣದಲ್ಲಿ ತಪ್ಪಲ್ಲ. ಆದರೆ ನಾವು ಇದುವರೆಗೂ ಯಾರನ್ನೂ ದ್ವೇಷ ಮಾಡಿಲ್ಲ. ಸ್ನೇಹದಿಂದಲೇ ರಾಜಕಾರಣ ಮಾಡಿದ್ದೇವೆ. ಗೆಲುವು ಸೋಲು ರಾಜಕಾರಣದಲ್ಲಿ ಇದ್ದಿದ್ದೇ, ಯಾರೂ ಕೂಡ ಸಿದ್ಧಾಂತ ಬಿಡುವ ಪ್ರಶ್ನೆ ಬರುವುದಿಲ್ಲ. ಆದರೆ ಆ ಬಡವರು ಮನೆಗಳಿಗೆ ಹಣ ನೀಡಿ 7 ವರ್ಷ ಕಳೆದಿದೆ. ಕೊಟ್ಟಿರುವ ಹಣವನ್ನದರೂ ವಾಪಾಸ್ ಕೊಡಿ ಎನ್ನುವ ನಿಟ್ಟಿನಲ್ಲಿ ಕೆಲವರು ಇದ್ದಾರೆ.

ರೆಡಿಯಾಗಿರುವ ಮನೆಯನ್ನಾದರೂ ಅವರಿಗೆ ಕೊಡಿ ಎನ್ನುವಂತೆ ಶಾಸಕರು ಹೇಳಿದ್ದಾರೆ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ನಂತರ ಕೊಡುವ ಯೋಚನೆಯಲ್ಲಿ ಸಚಿವರು ಇದ್ದಾರೆ, ಇಬ್ಬರದೂ ಸರಿ ಇದೆ. ಆದರೆ ಅಲ್ಲಿ ಸಜ್ಜನರು ವಾಸಿಸುವ ಮನೆಯಲ್ಲಿ ಅವ್ಯವಹಾರಕ್ಕೆ ಆಸ್ಪದ ನೀಡದೆ ಒಂದು ಟೈಮ್ ಬಾಂಡ್ ಇಟ್ಟುಕೊಂಡು, ಒಂದು ಅಥವಾ ಎರಡು ತಿಂಗಳಿನಲ್ಲಿ ಬಡವರಿಗೆ ನೀಡುವ ವ್ಯವಸ್ಥೆ ಮಾಡಿ. ಇಲ್ಲದಿದ್ದಲ್ಲಿ ಹೋರಾಟ ಮಾಡುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂದು ಸಚಿವರಿಗೆ ಎಚ್ಚರಿಕೆ ನೀಡಿದರು.
SUMMARY | Former Deputy CM K S Eshwarappa warned the minister that he should fix a time bound and give houses to the poor within two months or else we will fight against it.
KEYWORDS | K S Eshwarappa, houses, protest,