SHIVAMOGGA | MALENADUTODAY NEWS | ಮಲೆನಾಡು ಟುಡೆ Dec 8, 2024
ಶಿವಮೊಗ್ಗ ನಗರದಲ್ಲಿ ನಿನ್ನೆ ದಿನ ಆಶ್ರಯ ಮನೆಗಳ ಹಂಚಿಕೆ ವಿಚಾರ ತಾರಕ್ಕೇರಿ ಶಿವಮೊಗ್ಗ ನಗರಪಾಲಿಕೆ ಆಯುಕ್ತರಿಗೆ ಮುತ್ತಿಗೆ ಹಾಕಿದ ಪ್ರಸಂಗ ನಡೆಯಿತಷ್ಟೆ ಅಲ್ಲದೆ, ಶಾಸಕ ಎಸ್‌ಎನ್ ಚನ್ನಬಸಪ್ಪ ಸಚಿವರ ವಿರುದ್ಧ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡನೆ ಮಾಡುವ ಎಚ್ಚರಿಕೆಯನ್ನ ನೀಡಿದರು.
ಏನಿದು ಘಟನೆ
ಶಿವಮೊಗ್ಗ ನಗರದ ಗೋವಿಂದಪುರ ಮತ್ತು ಗೋಪಿ ಶೆಟ್ಟಿಕೊಪ್ಪ ಬಡಾವಣೆಯಲ್ಲಿನ ಆಶ್ರಯ ಮನೆಗಳ ಹಂಚಿಕೆಗೆ ನಿನ್ನೆ ಸಭೆ ಕರೆಯಲಾಗಿತ್ತು. ಈ ನಿಟ್ಟಿನಲ್ಲಿ ಫಲಾನುಭವಿಗಳು ಸಹ ಕುವೆಂಪು ರಂಗಮಂದಿರಕ್ಕೆ ಬಂದಿದ್ದರು. ಆದರೆ ಈ ಸಭೆಯನ್ನ ದಿಢೀರ್ ಮುಂದೂಡಲಾಯ್ತು. ಇದ್ದಕ್ಕಿದ್ದ ಹಾಗೆ ಸಭೆಯನ್ನ ಮುಂದೂಡಿದ್ದು ಏಕೆ ಎಂದು ಫಲಾನುಭವಿಗಳು ಪ್ರತಿಭಟನೆ ನಡೆಸಿದರು. ಅಲ್ಲದೆ ಆಯುಕ್ತ ಕವಿತಾ ಯೋಗಪ್ಪನವರ್‌ಗೆ ಕಾರ್‌ಗೆ ಮುತ್ತಿಗೆ ಹಾಕಿದರು. ಈ ವೇಳೇ ಘೋಷಣೆಗಳು ಸಹ ಕೇಳಿ ಬಂದವು. ʼ
ಇನ್ನೂ ಇದೇ ವೇಳೇ ಗೋವಿಂದಾಪುರ ಮತ್ತು ಗೋಪಿಶೆಟ್ಟಿಹಳ್ಳಿಯ ಆಶ್ರಯ ಬಡಾವಣೆಯ ಮನೆಗಳನ್ನು ಹಂಚಿಕೆ ಮಾಡುವ ಸಂಬಂಧ ಕರೆದಿದ್ದ ಸಭೆಯನ್ನು ಆಶ್ರಯ ಸಮಿತಿ ಅಧ್ಯಕ್ಷರೂ ಆದ ನನ್ನ ಅನುಮತಿ ಇಲ್ಲದ ಮುಂದೂಡುವ ಮೂಲಕ ಶಾಸಕರ ಹಕ್ಕನೇ ಕಸಿದುಕೊಳ್ಳುವ ಕೆಲಸ ಆಗಿದೆ. ನಾನು ಇದರ ವಿರುದ್ದ ವಿಧಾನ ಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸುತ್ತೇನೆ ಎಂದು ಶಾಸಕ ಎಸ್. ಎನ್. ಚನ್ನಬಸಪ್ಪ ತಿಳಿಸಿದ್ದಾರೆ.


ಕಳೆದ 8 ವರ್ಷಗಳಿಂದ ಗೋವಿಂದಾಪುರ ಮತ್ತು ಗೋಪಿಶೆಟ್ಟಿಹಳ್ಳಿಯ ಆಶ್ರಯ ಬಡಾವಣೆಯ ಮನೆಗಳನ್ನು ಹಂಚಿಕೆ ಮಾಡುವಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಈ ಮೊದಲೇ ನಿಗದಿಯಂತೆ ಸಭೆ ಕರೆಯಲಾಗಿತ್ತು. ಆದರೆ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರ ಸೂಚನೆಯಂತೆ ಹಾಗೂ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಅವರ ಆಶಯದಂತೆ ಏಕಾಏಕಿ ರದ್ದು ಮಾಡಿರುವ ಆಯುಕ್ತರ ಕ್ರಮ ಅಕ್ಷಮ್ಯ ಎಂದರು.
ಇನ್ನೂ ಇದೇ ವೇಳೆ ಕಾರ್ಯಕ್ರಮ ಮುಂದೂಡಲು ಸಚಿವ ಮಧು ಬಂಗಾರಪ್ಪರವರ ಆದೇಶ ಕಾರಣ ಎಂದ ಆಯುಕ್ತೆ ಕವಿತಾ ಯೋಗಪ್ಪನವರ್ ವಸತಿ ಸಚಿವ ಜಮೀರ್ ಅಹಮದ್ ಸಚ ಆಶ್ರಯ ಮನೆಗಳನ್ನ ಹಂಚಿಕೆ ಮಾಡಲು ಆಗಮಿಸಲಿದ್ದಾರೆ. ಶೀಘ್ರವೇ ದಿನಾಂಕ ಘೋಷಣೆ ಮಾಡಲಾಗುವುದು ಎಂದರು
SUMMARY | The ashraya mane distribution program held near Kuvempur Theatre in Shivamogga has been cancelled at the last minute s The ashraya mane in Govindapura and Gopishettyhalli have been closed. Minister Madhu Bangarappa, MLA SN Channabasappa
KEY WORDS | ashraya mane distribution program, Kuvempur ranga madira in Shivamogga, ashraya mane in Govindapura and Gopishettyhalli, Minister Madhu Bangarappa, MLA SN Channabasappa