ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 24 2025 : ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ತ್ಯಾವರೆಕೊಪ್ಪ ಹುಲಿ-ಸಿಂಹಧಾನಮದಿಂದ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಪ್ರಾಣಿ ವಿನಿಮಯ ಕಾರ್ಯಕ್ರಮದಲ್ಲಿ ಹಲವು ಪ್ರಾಣಿಗಳು ಲಯನ್ ಸಫಾರಿಯನ್ನು ಸೇರುತ್ತಿದೆ. ಇದಕ್ಕಾಗಿ ದೆಹಲಿಯ ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ಅನುಮೋದನೆ ದೊರೆತಿದೆ. ಈ ವಿನಿಮಯವು ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 2 ರವರೆಗೆ ನಡೆಯಲಿದೆ. (Approved)
ಔರಂಗಾಬಾದ್ ಮೃಗಾಲಯ
ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಿಂದ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿರುವ ಸಿದ್ಧಾರ್ಥ ಗಾರ್ಡನ್ ಮತ್ತು ಝೂಗೆ ಎರಡು ಕರಡಿಗಳು, ಎರಡು ಏಷ್ಯಾಟಿಕ್ ಸಿಂಹಗಳು ಮತ್ತು ಎರಡು ನರಿಗಳನ್ನು ಕಳುಹಿಸಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ, ಅಲ್ಲಿಂದ ಎರಡು ರಾಯಲ್ ಬೆಂಗಾಲ್ ಹುಲಿಗಳು ಮತ್ತು ಒಂದು ಬಿಳಿ ಹುಲಿಯನ್ನು ತ್ಯಾವರೆಕೊಪ್ಪಕ್ಕೆ ಕರೆತರಲಾಗುತ್ತಿದೆ. (Exchanged)
ಇಂದೋರ್ ಮೃಗಾಲಯ
ಇದೇ ರೀತಿ, ತ್ಯಾವರೆಕೊಪ್ಪ ಧಾಮದಿಂದ ಇಂದೋರ್‌ನ ಕಮಲಾ ನೆಹರು ಪ್ರಾಣಿ ಸಂಗ್ರಹಾಲಯಕ್ಕೆ ನಾಲ್ಕು ಕಾಡುಕೋಣಗಳು ಮತ್ತು ನಾಲ್ಕು ಆಸ್ಟ್ರಿಚ್‌ಗಳನ್ನು ಕಳುಹಿಸಲಾಗುತ್ತಿದೆ. ಅಲ್ಲಿಂದ ಎರಡು ಏಷ್ಯಾಟಿಕ್ ಸಿಂಹಗಳು ಮತ್ತು ಒಂದು ರಾಯಲ್ ಬೆಂಗಾಲ್ ಹುಲಿಯನ್ನು ತ್ಯಾವರೆಕೊಪ್ಪಕ್ಕೆ ತರಲಾಗುತ್ತಿದೆ. (Acquired)
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
Tyavarekoppa Tiger-Lion Safari to Exchange Animals with Zoos